Advertisement

ಪ್ರವಾಹದ ನೀರಿನಲ್ಲಿ ಬರೋಬ್ಬರಿ 16ಗಂಟೆ ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿಸಿದ ವಾಯುಪಡೆ

03:19 PM Aug 17, 2020 | sudhir |

ಛತ್ತೀಸ್ ಗಡ : ಅಣೆಕಟ್ಟಿನಿಂದ ಹೊರ ಬಿಟ್ಟ ನೀರಿಗೆ ಜಿಗಿದ ವ್ಯಕ್ತಿಯೊಬ್ಬ ನೀರಿನಿಂದ ದಡಕ್ಕೆ ಬರಲಾಗದೆ ಬರೋಬ್ಬರಿ 16 ಗಂಟೆ ನೀರಿನಲ್ಲಿ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ಸಹಾಯದೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಛತ್ತೀಸ್ ಗಡದ ಬಿಲಾಸ್ಪುರ ದಲ್ಲಿ ರವಿವಾರ ನಡೆದಿದೆ.

Advertisement

ಛತ್ತೀಸ್ ಗಡ್ ನ ಬಿಲಾಸ್ ಪುರ ಜಿಲ್ಲೆಯಲ್ಲಿ ರವಿವಾರ ಭಾರಿ ಮಳೆಯಾಗುತ್ತಿದ್ದು ಪರಿಣಾಮ ಜಿಲ್ಲೆಯ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ ಹರಿವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತಿದ್ದಾರೆ ಆದರೆ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ ಈ ಸಂದರ್ಭ ಸ್ಥಳದಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಓರ್ವ ನೀರಿಗೆ ಜಿಗಿದಿದ್ದಾನೆ ಆದರೆ ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಹಿಡಿದ ವ್ಯಕ್ತಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ.

ನೀರಿನ ಪ್ರವಾಹ ಹೆಚ್ಚಿದ್ದ ಪರಿಣಾಮ ರಕ್ಷಣೆ ಮಾಡುವುದು ಕಷ್ಟದ ಕೆಲಸವಾಗಿತ್ತು ಸ್ಥಳಕ್ಕೆ ಬಿಲಾಸ್ಪುರ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ತೆರಳಿದ್ದರು ಸಂಜೆಯಾದ ಪರಿಣಾಮ ಮಳೆಯ ಅಬ್ಬರ ಜೋರಾಗಿತ್ತು ಹಾಗಾಗಿ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಕೂಡಲೇ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ಷಣೆಗಾಗಿ ಭಾರತೀಯ ವಾಯುಸೇನೆಯ ನೆರವನ್ನು ಕೇಳಿಕೊಂಡಿದ್ದಾರೆ ಆದರೆ ಪ್ರತಿಕೂಲ ಹವಾಮಾನ ಇರದ ಪರಿಣಾಮ ಸೋಮವಾರ ಮುಂಜಾನೆ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಯಿತು ಸೋಮವಾರ ಬೆಳಿಗ್ಗೆ ವಾಯುಪಡೆಯ ಅಧಿಕಾರಿಗಳು ಮರದ ಸಹಾಯದಿಂದ ವ್ಯಕ್ತಿಯನ್ನು ಹೆಲಿಕಾಪ್ಟಾರ್ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ.

ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಗಾಢವಾರಿ ಹಳ್ಳಿಯ ಜಿತೇಂದ್ರ ಕಶ್ಯಪ್ ಎಂದು ಜಿಲಾಸ್ಪುರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಭಸದಿಂದ ಹರಿಯುವ ಪ್ರವಾಹದ ನೀರಿನಲ್ಲಿ ಈಜಿ ದಡ ಸೇರಬಹುದು ಎಂಬ ನಂಬಿಕೆಯಿಂದ ನೀರಿಗೆ ಜಿಗಿದ ವ್ಯಕ್ತಿಗೆ ಆಮೇಲೆ ತಾನು ಮಾಡಿದ ತಪ್ಪಿನ ಅರಿವಾಗಿದೆ ಪರಿಣಾಮ ಪ್ರವಾಹದ ನೀರಿನಲ್ಲೇ ಬರೋಬ್ಬರಿ 16 ಗಂಟೆ ಕಳೆಯುವಂತಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next