Advertisement

ಹೊಸಂಗಡಿ: ಇಂದು”ಆರ್‌ ಪನ್ಲಕ’ 100ನೇ ಪ್ರದರ್ಶನ

02:17 PM Mar 14, 2017 | Harsha Rao |

ಹೊಸಂಗಡಿ: ರಂಗಭೂಮಿ ಚಟುವಟಿಕೆಯನ್ನು ಶ್ರೀಮಂತಗೊಳಿಸುವಲ್ಲಿ ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಮಂಜೇಶ್ವರದಲ್ಲಿ ಅಸ್ತಿತ್ವಕ್ಕೆ ಬಂದ ಶಾರದಾ  ಆರ್ಟ್ಸ್ ಕಲಾವಿದೆರ್‌ ಸಂಸ್ಥೆಯ ಕೊಡುಗೆ ಅನನ್ಯ. 17 ವರ್ಷಗಳ ಇತಿಹಾಸ ಇರುವ ವೃತ್ತಿಪರ ಕಲಾವಿದರ ನೊಳ್ಳಗೊಂಡ ಕಲಾ ಸಂಸ್ಥೆಗೆ ಪುಂಜಾಲಕಟ್ಟೆಯಲ್ಲಿ ನಡೆದ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಪುಂಜಾಲಕಟ್ಟೆ ಮತ್ತು ಜೆಸಿಐ ಮಡಂತ್ಯಾರು ಇದರ ಆಶ್ರಯದಲ್ಲಿ ಕಾಸರಗೋಡು, ದ.ಕ., ಉಡುಪಿ ಅಂತರ್‌ ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ ಇ. ಮಂಜೇಶ್ವರ ರಚಿಸಿ ನಿರ್ದೇಶನದ “ಆರ್‌ ಪನ್ಲಕ’ ನಾಟಕ ಪ್ರಥಮ ಸ್ಥಾನದ ಪ್ರಶಸ್ತಿ ಪಡೆದು ತಂಡದ ಕಲಾವಿದರು 12 ವೈಯಕ್ತಿಕ ಪ್ರಶಸ್ತಿಗಳೊಂದಿಗೆ ಜಿಲ್ಲೆಗೆ ರಂಗ ಕಿರೀಟ ತಂದು ಕೊಟ್ಟಿದ್ದಾರೆ.

Advertisement

ಪ್ರಶಸ್ತಿ ಪಡೆದ ಕಲಾವಿದರಲ್ಲಿ ನಾಟಕ ರಚನೆ ಮತ್ತು ನಿರ್ದೇಶನ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ, ಶ್ರೇಷ್ಠ ನಟ ಪ್ರಥಮ  ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಶ್ರೇಷ್ಠ ನಟಿ ರೂಪಾಶ್ರೀ ವರ್ಕಾಡಿ, ಪೋಷಕ ನಟ ಪ್ರಥಮ ಪ್ರಕಾಶ್‌ ಕೆ. ತೂಮಿನಾಡು, ಪೋಷಕ ನಟಿ ಪ್ರಥಮ ರಾಜೇಶ್‌ ಮುಗುಳಿ, ಹಾಸ್ಯ ನಟ ಪ್ರಥಮ ಜೆ.ಪಿ. ತೂಮಿನಾಡು, ಹಾಸ್ಯ ನಟಿ ಪ್ರಥಮ ರವಿಚಂದ್ರ ರೈ ಕುಂಬ್ರ. ಉತ್ತಮ ಪ್ರಸಾಧನ  ಪುರಂದರ್‌ ಎನ್‌.ಎಸ್‌. ನಾಗನವಳಚ್ಚಿಲ್‌, ಉತ್ತಮ ರಂಗಸಜ್ಜಿಕೆಗೆ ಪ್ರಥಮ ಸದಾನಂದ ಆಚಾರ್ಯ ಮಂಜೇಶ್ವರ, ಉತ್ತಮ ಸಂಗೀತ ಪ್ರಥಮ ದಿನೇಶ್‌ ನಾಯ್ಕ ಮಿತ್ತನಡ್ಕ, ಪೋಷಕ ನಟಿ ದ್ವಿತೀಯ ಅಶ್ವತ್ಥ್ ಶೆಟ್ಟಿ ಬಗಂಬಿಲ, ಜನಮನ್ನಣೆ ಪಾತ್ರದಲ್ಲಿ ಜಯಂತ ಅರಿಯಾಲ. ಪ್ರಶಸ್ತಿಯ ಗಳಿಸಿದ  ಸಂಭ್ರಮದಲ್ಲಿ “ಆರ್‌ ಪನ್ಲಕ’ ನಾಟಕವು 100ನೇ ಪ್ರಯೋಗದ ಸಂಭ್ರಮವು ಕುಳಾÂರು, ಬಾಯಾರು ನಾಗ ದೇವರು, ರಕ್ತೇಶ್ವರಿ, ಗುಳಿಗ ಸನ್ನಿಧಿಯ ಬ್ರಹ್ಮ ಕಲಶೋತ್ಸವ ಅಂಗವಾಗಿ ಮಾ. 14ರಂದು ರಾತ್ರಿ ಗಂಟೆ 8ಕ್ಕೆ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next