Advertisement

ಡ್ರಾಮಾ ಜನ್ಮಭೂಮಿ “ರವೀಂದ್ರ ಕಲಾಕ್ಷೇತ್ರ’

08:46 PM Oct 11, 2019 | Lakshmi GovindaRaju |

ಬೆಂಗಳೂರಿನಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಎಂಬ ಹೆಸರು ಪ್ರಸ್ತಾಪಿಸಿದರೆ, ಅವುಗಳ ಮುಂದಿನ ಪದ “ರವೀಂದ್ರ ಕಲಾಕ್ಷೇತ್ರ’ವೇನೋ ಎಂಬಷ್ಟು ಜನಪ್ರಿಯತೆ ಈ ಕಟ್ಟಡದ್ದು. ಇಂತಿಪ್ಪ ಕಲಾಕ್ಷೇತ್ರದ ಕತೆ ನಿಮ್ಗೆ ಗೊತ್ತೇ?

Advertisement

ವಿಶ್ವಕವಿಯ ನೆನಪಿಗಾಗಿ…: ಕವಿ ರವೀಂದ್ರನಾಥ ಟ್ಯಾಗೋರರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಅಂದು ಕೇಂದ್ರ ಸರ್ಕಾರ, ದೇಶದ ಕೆಲವೆಡೆ ಕಲಾಭವನ ಕಟ್ಟಲು ನಿರ್ಧರಿಸಿತು. ಅದರ ಫ‌ಲಶ್ರುತಿಯೇ ರವೀಂದ್ರ ಕಲಾಕ್ಷೇತ್ರ. ಕೋಲ್ಕತ್ತಾ, ಮುಂಬೈ, ಹೈದರಾಬಾದ್‌ಗಳಲ್ಲೂ ರವೀಂದ್ರರ ನೆನಪಿನ ಕಲಾಕ್ಷೇತ್ರಗಳಿವೆ.

ಕಾರಂತರು, ಗೊರೂರರೂ…: 1959ರಲ್ಲಿ, ಟ್ಯಾಗೋರರ ನೆನಪಿನಲ್ಲಿ ಕಲಾಕ್ಷೇತ್ರವನ್ನು ನಿರ್ಮಿಸಲು ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಅಧ್ಯಕ್ಷತೆಯಲ್ಲಿ ಕಮಿಟಿಯೊಂದನ್ನು ರಚಿಸಲಾಯ್ತು. ಶಿವರಾಮ ಕಾರಂತ, ಮಲ್ಲಿಕಾರ್ಜುನ ಮನ್ಸೂರ್‌, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಟಿ.ಚೌಡಯ್ಯ, ವಿಮಲ ರಂಗಾಚಾರ್‌- ಕಮಿಟಿಯ ಸದಸ್ಯರಾಗಿದ್ದರು.

ಶಿವಾಜಿ ಗಣೇಶನ್‌ ನೆರವು!: ಸರ್ಕಾರದ ಧನಸಹಾಯದ ಆಚೆಗೂ ಬಹಳಷ್ಟು ದಾನಿಗಳು ಕಲಾಕ್ಷೇತ್ರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ನಟ ಶಿವಾಜಿ ಗಣೇಶನ್‌ ಹಾಗೂ ಎಚ್‌.ಸಿ. ಮಹದೇವಪ್ಪ, ತಲಾ 22 ಸಾವಿರ ರೂ. ನೀಡಿದ್ದರಂತೆ. ಅಷ್ಟೇ ಅಲ್ಲದೆ, ಖ್ಯಾತ ತಮಿಳು ನಟ ದಿ. ಶಿವಾಜಿ ಗಣೇಶನ್‌ “ವೀರಪಾಂಡ್ಯ ಕಟ್ಟಬೊಮ್ಮನ್‌’ ಎಂಬ ನಾಟಕವಾಡಿ, ಸಂಗ್ರಹಿಸಿದ ಹಣವನ್ನೂ ಕಲಾಕ್ಷೇತ್ರಕ್ಕೇ ಮುಡಿಪಾಗಿಟ್ಟರು.

ನಿರ್ಮಾಣದ ಹಿಂದಿನ ಕೈಗಳು: ವಾಸ್ತುಶಿಲ್ಪಿ ಚಾರ್ಲ್ಸ್‌ ವಿಲ್ಸನ್‌, ಮುಖ್ಯ ಎಂಜಿನಿಯರ್‌ ಬಿ.ಆರ್‌.ಮಾಣಿಕ್ಯಂ

Advertisement

ಉದ್ಘಾಟನೆ: 1963ರ ಮಾರ್ಚ್‌ 9ರಂದು, ಅಂದಿನ ಶಿಕ್ಷಣ ಮಂತ್ರಿ ಡಾ. ಹುಮಾಯೂನ್‌ ಕಬೀರ್‌ ಕಟ್ಟಡವನ್ನು ಉದ್ಘಾಟಿಸಿದರು.

ಆಸನ ಸಾಮರ್ಥ್ಯ: ಒಟ್ಟಿಗೆ 900 ಜನರು (400 ಬಾಲ್ಕನಿ) ಕುಳಿತುಕೊಳ್ಳಬಹುದು.

ಆಧುನಿಕ ಸೌಲಭ್ಯಗಳು: ಕಂಪ್ಯೂಟರೈಸ್ಡ್ ಬೆಳಕಿನ ವ್ಯವಸ್ಥೆ, ಫ್ರಾನ್ಸ್‌ನಿಂದ ಆಮದು ಮಾಡಿಕೊಂಡ ಧ್ವನಿ ವ್ಯವಸ್ಥೆ (ಆಡಿಯೊ ಸಿಸ್ಟಮ್‌), ಬ್ಯಾಕ್‌ಸ್ಟೇಜ್‌ ಮತ್ತು ಕಂಟ್ರೋಲ್‌ ಸಿಸ್ಟಮ್‌ ನಡುವೆ ಇಂಟರ್‌ಕಾಮ್‌ ಸಂವಹನ ವ್ಯವಸ್ಥೆ, ಉತ್ತಮ ಗ್ರೀನ್‌ ರೂಮ್‌ ಮುಂತಾದವು ಕಲಾಕ್ಷೇತ್ರದ ವೈಶಿಷ್ಟéಗಳು.

ಕೂಲ್‌ ಕಲಾಕ್ಷೇತ್ರ: ಆರಂಭದಲ್ಲಿ ಈ ಶಿಲಾ ಸೌಧಕ್ಕೆ ಹವಾನಿಯಂತ್ರಕ ಇರಲಿಲ್ಲ. ಅಷ್ಟು ತಂಪಾಗಿತ್ತು. ಧ್ವನಿವರ್ಧಕವಿಲ್ಲದೆ ನಾಟಕಗಳು ನಡೆದಿದ್ದೂ ಇದೆ. ಯಾವಾಗ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಯಿತೋ, ಒಳಗೆ ಸಹಜ ಬದಲಾವಣೆಗಳಾದವು.

ಎಲ್ಲಿದೆ?: ಟೌನ್‌ಹಾಲ್‌ ಪಕ್ಕ, ಜೆ.ಸಿ.ರಸ್ತೆ.

ಆರಂಭ: 1963, ಮಾರ್ಚ್‌ 9

ನಿರ್ಮಾಣ ಅವಧಿ: 3 ವರ್ಷ (1960-1963)

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಅಂಥ ಪಾರಂಪರಿಕ ಕಟ್ಟಡಗಳ ಮಾಹಿತಿ ವಿಶೇಷ ಈ ಪಾಕ್ಷಿಕ ಅಂಕಣದ ಅಂತರಾಳ)

Advertisement

Udayavani is now on Telegram. Click here to join our channel and stay updated with the latest news.

Next