Advertisement
ಅವರು ಸೋಮವಾರ ಎಂಜಿಎಂ ಕಾಲೇಜಿನ ಆವರಣದಲ್ಲಿ ರಂಗಭೂಮಿ ಆಯೋಜಿಸಿದ “ಆನಂದೋತ್ಸವ’ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಾಟಕ ಅಕಾಡೆಮಿ ಸದಸ್ಯ ಉಮೇಶ ಸಾಲ್ಯಾನ್, ರಂಗ ಮಂದಿರ ನಿರ್ಮಾಣಕ್ಕೆ ಮಂಗಳೂರಿಗೆ 1 ಕೋ. ರೂ., ಉಡುಪಿಗೆ 50 ಲ. ರೂ. ಮಂಜೂರಾಗಿದೆ. ಆದರೆ ಉಡುಪಿಯಲ್ಲಿ ಸ್ಥಳದ ಕೊರತೆ ಇದೆ. ರಂಗತಾಲೀಮು ಕೇಂದ್ರವೂ ಇಲ್ಲ ಎಂದರು.
Related Articles
ತಹಶೀಲ್ದಾರ್ ಮಹೇಶ್ಚಂದ್ರ ರಂಗ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಇದು ಚರ್ಚೆಯಲ್ಲಿದೆ. ಸದ್ಯವೇ ಸ್ಥಳ ಗುರುತಿಸುತ್ತೇವೆ ಎಂದರು. ರಂಗಭೂಮಿ ನಡೆಸುತ್ತಿರುವ ರಂಗ ಚಟುವಟಿಕೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮೆಚ್ಚುಗೆ ಸೂಚಿಸಿದರು. ರಂಗಭೂಮಿ ಗೌರವಾಧ್ಯಕ್ಷ ಡಾ| ಎಚ್. ಶಾಂತಾರಾಮ್ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಎಚ್.ಪಿ. ರವಿರಾಜ್ ಸ್ವಾಗತಿಸಿ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
Advertisement