ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯಿಂದ ನಾಟಕ ಕ್ಷೇತ್ರದ ಸಾಧಕರಿಗೆ ನೀಡುವ 2019-20ರ ಸಾಲಿನ ವಾರ್ಷಿಕ ಪ್ರಶಸ್ತಿ, ದತ್ತಿ ಪ್ರಶಸ್ತಿ ಮತ್ತು ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಕಾಡೆಮಿ ಪ್ರಕಟಿಸಿದೆ. ಪ್ರಸಕ್ತ ಸಾಲಿನ ಜೀವಮಾನದ ಗೌರವ ಪ್ರಶಸ್ತಿಯನ್ನು ಜಿ.ವಿ.ಶಾರದಾ ಅವರಿಗೆ ನೀಡಿ ಗೌರವಿಸಲಾಗುತ್ತಿದ್ದು, ಪ್ರಶಸ್ತಿ ಫಲಕ, ಶಾಲು, ಹಾರ, ಪ್ರಶಸ್ತಿ ಪತ್ರ ಮತ್ತು 50,000 ರೂ. ಪುರಸ್ಕಾರ ಇರಲಿದೆ. ಇದೇವೇಳೆ 25 ಸಾಧಕರಿಗೆ ವಾರ್ಷಿಕ ರಂಗಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ ನಾಲ್ಕು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ಕಲಾವಿದರು ಸೇರಿ ಒಟ್ಟು 30 ಸಾಧಕರ ಪಟ್ಟಿ ಪ್ರಕಟವಾಗಿದೆ.
ವಾರ್ಷಿಕ ರಂಗಪ್ರಶಸ್ತಿ : ಪರಮೇಶ್ವರ್ ಲಂಡೆ (ಕಲಬುರಗಿ), ಜಕೀರ್ ನದಾಫ್ (ಬೆಳಗಾವಿ), ನಾಗೇಂದ್ರ ಶಾ(ಬೆಂಗಳೂರು), ಕೆ.ಪಿ.ಪ್ರಕಾಶ್ (ಬೆಂಗಳೂರು ಗ್ರಾಮಾಂತರ), ಡಾ.ಎಂ.ಬೈರೇಗೌಡ (ರಾಮನಗರ), ಹಂಸನೂರಿನ ಶಾಂತಮ್ಮ ಬಿ.ಮಲಕಲ್ (ಬಾಗಲಕೋಟೆ), ಮಂಜುಳಾ ಮಂಜುನಾಥ್(ತುಮಕೂರು), ಮಾಲೂರು ಸಿದ್ದಪ್ಪ(ಕೋಲಾರ), ಗಣಪತಿ ಬಿ.ಹೆಗಡೆ ಹಿತ್ಲಕೈ(ಉತ್ತರ ಕನ್ನಡ), ಜಂಬುನಾಥ್ (ಚಿತ್ರದುರ್ಗ), ಸಿದ್ದಲಿಂಗಪ್ಪ (ತುಮಕೂರು), ಬಿ.ಎಲ್.ರವಿಕುಮಾರ್ (ಚಿಕ್ಕಮಗಳೂರು),
ನಾಗರಾಜಗೌಡ (ಶಿವಮೊಗ್ಗ), ಶಾಡ್ರಾಕ (ಹಾಸನ), ಕೊಡಿಯಾಲ್‌ಬೈಲ್ ವಿಜಯಕುಮಾರ್(ಮಂಗಳೂರು), ಭಾಸ್ಕರ (ಮಣಿಪಾಲ, ಉಡುಪಿ), ಸಂಗಮೇಶ (ಬಾದಾಮಿ, ವಿಜಯಪುರ), ಶಶಿಪ್ರಭಾ ಆರಾಧ್ಯ (ಹುಬ್ಬಳ್ಳಿ), ಮಧುಕುಮಾರ ಹರಿಜನ (ಹಾವೇರಿ), ಗುರುನಾಥ್ ಕೋಟೆ ಜೀರ್ಗಾ (ಬೀದರ್), ರಮೇಶ ಹಂಚಿನಮನಿ (ಬಳ್ಳಾರಿ), ಚನ್ನಬಸವನಗೌಡ ಪಾಟೀಲ ಕುಲಕರ್ಣಿ (ಧಾರವಾಡ), ಬಿ.ಎನ್.ಶಶಿಕಲಾ (ಮೈಸೂರು) ಡಾ.ಎಂ.ಎಸ್.ವೇಣುಗೋಪಾಲ(ಮೈಸೂರು), ಬಸವರಾಜ ಹೆಸರೂರು (ಕೊಪ್ಪಳ) ಆಯ್ಕೆಯಾಗಿದ್ದಾರೆ.
ಕಲ್ಚರ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಮಲ್ಲಿಕಾರ್ಜುನ ಬಿ(ಚಿತ್ರದುರ್ಗ) ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ಬೆಳಗಾವಿಯ ನಾಮದೇವ ನೂಲಿ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ಬೆಂಗಳೂರಿನ ಕೋಮಲಮ್ಮ ಕೊಟ್ಟೂರು, ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರಕ್ಕೆ ಧಾರವಾಡದ ಅರವಿಂದ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ.