Advertisement
ದುರ್ವಾಸನೆಚರಂಡಿಯ ನಿಂತ ನೀರಿನಿಂದ ದುರ್ವಾಸನೆ ಬೀರುತ್ತಲಿದೆ. ಇಲ್ಲಿನ ಜನರಿಗೆ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ. ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಮಸ್ಯೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಪಂಚಾಯತ್ ಸ್ವಂತ ಅನುದಾನದಲ್ಲಿ 2 ಲಕ್ಷ ರೂ. ಅನ್ನು ಕಾಮಗಾರಿ ನಡೆಸಲು ಮುಂಗಡವಾಗಿ ಇರಿಸಿಕೊಂಡಿದೆ. ಕ್ರಿಯಾಯೋಜನೆಯಲ್ಲಿ ಅನುದಾನ ಕ್ರೋಢೀಕರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
– ಜಯವಿಕ್ರಮ, ಗ್ರಾ.ಪಂ. ಅಧ್ಯಕ್ಷರು, ತಣ್ಣೀರುಪಂತ ಅನುದಾನ ಬಿಡುಗಡೆ
ಕಲ್ಲೇರಿ ಜನತಾ ಕಾಲನಿ ಚರಂಡಿಗೆ ಸ್ಥಳೀಯ ಕೆಲ ಮನೆಗಳಿಂದ ತ್ಯಾಜ್ಯ ನೀರು ಬಿಡುತ್ತಿದ್ದು, ಒಂದೆಡೆ ಶೇಖರಣೆಯಾಗುತ್ತಿದೆ. 14ನೇ ಹಣಕಾಸಿನಲ್ಲಿ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
– ಪೂರ್ಣಿಮಾ, ಗ್ರಾ.ಪಂ. ಪಿಡಿಒ. ತಣ್ಣೀರುಪಂತ