Advertisement
ವಾಸನೆ ತಡೆಯಲಾರದೆ ಚರಂಡಿ ಸ್ವಚ್ಛ ಕಾಲೇಜಿನ ಪಕ್ಕದಲ್ಲಿ ಚರಂಡಿ ತ್ಯಾಜ್ಯದಿಂದ ತುಂಬಿಕೊಂಡು ಬ್ಲಾಕ್ ಆಗಿದ್ದು, ದೂರ್ವಾಸನೆ ತಾಳಲಾರದೆ ನಾವು ಅದನ್ನು ಯಂತ್ರಗಳ ನೆರವಿನಿಂದ ಸ್ವಚ್ಛ ಮಾಡಿದ್ದೆವು. ಆದರೆ ಆರಂಭದ ಪ್ರಯತ್ನ ಫಲಕೊಟ್ಟಿರಲಿಲ್ಲ. ಮರುದಿನ ಅಷ್ಟೇ ಕಸ ತುಂಬಿಕೊಂಡಿತ್ತು. ಆದ್ದರಿಂದ ಈ ಸಮಸ್ಯೆಗೆ ಪರಿಹಾರಕ್ಕೆ ಶೋಧನೆಗೆ ಇಳಿದಿದ್ದೇವೆ ಎಂದು ವಿದ್ಯಾರ್ಥಿನಿ ನಿವೇಧಾ ಆರ್.ಎಂ. ಹೇಳಿದ್ದಾರೆ. ಎಂಜಿನಿಯರಿಂಗ್‌ನ ಅಂತಿಮ ಸೆಮಿಸ್ಟರ್‌ನಲ್ಲಿ ಪ್ರಾಜೆಕ್ಟ್ ಮಾಡಬೇಕಿತ್ತು. ಅಂದು ತ್ಯಾಜ್ಯಗಳಿಂದ ತುಂಬಿ ಹೋಗಿದ್ದ ಚರಂಡಿ ಈ ಯೋಜನೆ ಮಾಡುವುದಕ್ಕೆ ಪ್ರೇರಣೆಯಾಗಿದ್ದು, ತ್ಯಾಜ್ಯವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕೆಂಬು ನನ್ನ ಅಂತಿಮ ಗುರಿಯಾಗಿತ್ತು ಅನ್ನುತ್ತಾರೆ ನಿವೇದಿತಾ.
ತ್ಯಾಜ್ಯ ನೀರು ಕಸ ಸಂಗ್ರಹಿಸುವ ಜಾಲರಿ ಮಾದರಿ ಯಂತ್ರಕ್ಕೆ ಬಂದು ಬೀಳುತ್ತದೆ. ಅಲ್ಲಿ ಬ್ಲೋವರ್ ಮೂಲಕ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ಜಾಲರಿ ಮಧ್ಯೆ ನೀರು ಹರಿದುಹೋಗುವುದರಿಂದ ನೀರಿನೊಂದಿಗೆ ಯಾವುದೇ ಕಸ ಸೇರುವುದಿಲ್ಲ. ಈ ವ್ಯವಸ್ಥೆ ಒಂದು ಕೋಣೆಯ ಗಾತ್ರದಲ್ಲಿದ್ದು ನಿರ್ವಹಣೆಯೂ ಸುಲಭವಾಗಿದೆ. 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು “ಟ್ರಾಶ್‌ಕಾನ್’ ವ್ಯವಸ್ಥೆಗಾಗಿ ಶ್ರಮಿಸಿದ್ದು, ಹತ್ತು ಮಂದಿಗೆ ಉದ್ಯೋಗವನ್ನೂ ಕೊಟ್ಟಿದೆ. ಸದ್ಯ ಈ ಯಂತ್ರ ಬಸವನಗುಡಿಯಲ್ಲಿ ಸ್ಥಾಪಿತವಾಗಿದ್ದು, ಹಸಿ, ಒಣಕಸವನ್ನೂ ಬೇರ್ಪಡಿಸುತ್ತದೆ.
ನಿವೇದಿತಾ ತಯಾರಿಸಿರುವ ಟ್ರಾಶ್‌ಕಾನ್, ಜೈವಿಕ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಆಯೋಜಿಸಿದ “ಎಲೆವೆಟ್ 100′ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹತ್ತನೇ ಸ್ಥಾನ ಪಡೆದುಕೊಳ್ಳುವ ಮೂಲಕ ಹತ್ತು ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿದೆ.