Advertisement
ಮ್ಯಾಂಗನೀಸ್ ರಸ್ತೆಯಲ್ಲಿರುವ ಗೋಧಿಹಿತ್ಲುವಿನಲ್ಲಿ ಸುಮಾರು 25ರಿಂದ 30 ಮನೆಗಳಿವೆ. ಮಳೆ ನೀರು ಹೋಗಲು ಚರಂಡಿಯಿದೆ. ಆದರೆ ಈ ಚರಂಡಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಹಾಗೂ ಮಳೆಗಾಲಕ್ಕೂ ಮುನ್ನ ಸ್ವತ್ಛ ಮಾಡದ ಹಿನ್ನೆಲೆಯಲ್ಲಿ ನೀರು ಹರಿದು ಹೋಗುತ್ತಿಲ್ಲ. ಗೋಧಿಹಿತ್ಲು ಪರಿಸರದಲ್ಲಿಯೇ ಶೇಖರಣೆಯಾಗಿ ಕೊಳಚೆಯಾಗಿದೆ.
ಚರಂಡಿಯಲ್ಲಿ ಕೊಳಚೆ ನೀರು ನಿಂತು ಈ ಗೋಧಿಹಿತ್ಲು ಪರಿಸರವಿಡೀ ದುರ್ವಾಸನೆ ಬರುತ್ತದೆ. ಇದರಿಂದ ದಿನವಿಡೀ ಇಲ್ಲಿನ ನಿವಾಸಿಗಳು ಮನೆ, ಕಿಟಕಿ ಬಾಗಿಲು ಮುಚ್ಚಿಕೊಂಡೇ ಇರಬೇಕಾದ ದುಃಸ್ಥಿತಿಯಿದೆ. ಬಾಗಿಲು ಮುಚ್ಚಿದರೂ ಈ ದುರ್ವಾಸನೆ ಮಾತ್ರ ಹೋಗುವುದಿಲ್ಲ ಎನ್ನುವುದು ಸ್ಥಳೀಯರ ಅಳಲು. ಈ ಸಂಬಂಧ ಹಿಂದೆ ಆಗಿನ ಶಾಸಕರಿಗೂ ಮನವಿ ಕೊಟ್ಟಿದ್ದರು. ಆ ಬಳಿಕ ಚುನಾವಣೆ ಬಂದಿದ್ದರಿಂದ ಇದಕ್ಕೆ ಪರಿಹಾರ ಕಂಡಿಲ್ಲ. ಈಗಿನ ಶಾಸಕರಾದರೂ ನಮ್ಮ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
Related Articles
ಚರಂಡಿಯಲ್ಲಿ ಕೊಳಚೆ ನೀರು ನಿಂತು ಈ ಗೋಧಿಹಿತ್ಲು ಪ್ರದೇಶ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಡಾಗುತ್ತಿದೆ. ಇದರಿಂದ ಇಲ್ಲಿನ ವಾಸಿಗರಲ್ಲಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
Advertisement
ಪರಿಶೀಲಿಸಿ ಕ್ರಮಈ ಸಂಬಂಧ ಸ್ಥಳೀಯರು ಕೊಟ್ಟ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ತತ್‌ಕ್ಷಣ ಅಲ್ಲಿನ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
– ಮಾಧವ,ಗಂಗೊಳ್ಳಿ ಪಿಡಿಒ ನಿತ್ಯ ಸಂಕಷ್ಟ
ಊಟ ಮಾಡಲು ಕುಳಿತರೆ ಹೊರಗಿನಿಂದ ಕೆಟ್ಟ ವಾಸನೆ ಬರುತ್ತದೆ. ಊಟವು ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲ. 1 ವರ್ಷದ ಮಗುವಿಗೆ ಹುಷಾರಿಲ್ಲದೆ ರಾತೋರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಹುಷಾರಿಲ್ಲ. ದಿನಾ ಈ ದುರ್ವಾಸನೆಯಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ.
– ಸಾವಿತ್ರಿ, ಅರ್ಚನಾ,ಸುಧಾ,ಸ್ಥಳೀಯರು