Advertisement

ಜಿಲ್ಲಾ ಆಸ್ಪತ್ರೆ ಸಮೀಪ ¬ಬಾಯ್ದೆರೆದ ಚರಂಡಿ 

01:00 AM Feb 03, 2019 | Team Udayavani |

ಉಡುಪಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಪ್ರವೇಶ ದ್ವಾರದ ಎಡಭಾಗದ ಫ‌ುಟ್‌ಪಾತ್‌ನಲ್ಲಿ ಡ್ರೈನೇಜ್‌ ಚರಂಡಿಯ ಸ್ಲಾಬ್‌ ಕಿತ್ತುಹೋಗಿ ಬೃಹತ್‌ಗಾತ್ರದ ಹೊಂಡ ಉಂಟಾಗಿದ್ದು, ನಡೆದಾಡಲು ಕಷ್ಟಕರವಾಗಿದೆ. 

Advertisement

ಆಸ್ಪತ್ರೆ ಪ್ರವೇಶಿಸುವ ಎರಡೂ ಬದಿಗಳಲ್ಲಿ ಹೊಂಡ ಇದ್ದು ಪಾದಚಾರಿಗಳಿಗೆ ಅನನುಕೂಲವಾಗಿದೆ. 
ಪ್ರತಿನಿತ್ಯ ಹಲವಾರು ಮಂದಿ ರೋಗಿಗಳು ಇಲ್ಲಿ ಚಿಕಿತ್ಸೆಗೆಂದು ಬರುತ್ತಿದ್ದು, ನಡೆದುಕೊಂಡು ಬರುವವರಿಗೆ ಇಲ್ಲಿ ಅಪಾಯ ತಪ್ಪಿದ್ದಲ್ಲ. ವಾಹನ ಚಲಿಸುವ ದಾರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. 

ಇದು ನಗರಸಭೆ ವ್ಯಾಪ್ತಿಗೊಳಪಟ್ಟ ಫ‌ುಟ್‌ಪಾತ್‌ ಆಗಿದ್ದು, ಶೀಘ್ರವಾಗಿ ಈ ಡ್ರೈನೇಜ್‌ ಹೊಂಡ ಮುಚ್ಚುವ ಕೆಲಸವಾಗಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಾದಚಾರಿಗಳಿಗೆ ತೊಂದರೆ
ಚರಂಡಿ ಕಾಮಗಾರಿಗೆಂದು ಇದನ್ನು ಅಗೆಯಲಾಗಿದೆ. ಮುಚ್ಚುವ ಕೆಲಸ ನಗರ ಸಭೆಯಿಂದ ಆಗಬೇಕಿದೆ.  ಸಧ್ಯ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.                          
– ಡಾ| ಮಧುಸೂದನ್‌ ನಾಯಕ್‌ ಜಿಲ್ಲಾ ಸರ್ಜನ್‌, ಜಿಲ್ಲಾಸ್ಪತ್ರೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next