Advertisement

ಐತಿಹಾಸಿಕ ಗುಜ್ಜರಕೆರೆಯಿರುವ ಈ ವಾರ್ಡ್‌ನಲ್ಲಿ ಒಳಚರಂಡಿಯದ್ದೇ ಸಮಸ್ಯೆ !

09:44 PM Oct 29, 2019 | mahesh |

ಮಹಾನಗರ: ನಗರ ಪ್ರದೇಶದಲ್ಲಿದ್ದರೂ ಗ್ರಾಮೀಣ ಭೌಗೋಳಿಕತೆಯನ್ನು ಹೊಂದಿರುವ 58ನೇ ಬೋಳಾರ ವಾರ್ಡ್‌ ಬೆಳೆಯುತ್ತಿರುವ ಪ್ರದೇ ಶಗಳಲ್ಲಿ ಒಂದು. ಐತಿಹಾಸಿಕ ಗುಜ್ಜರಕೆರೆ, ಕಾಶಿಯಾ ಚರ್ಚ್‌, ಶೈಕ್ಷಣಿಕ ಕೇಂದ್ರಗಳು, ಧಾರ್ಮಿಕ ತಾಣಗಳನ್ನು ಹೊಂದಿರುವ ಈ ವಾರ್ಡ್‌ ಅಭಿವೃದ್ಧಿಯೊಂದಿಗೆ ಒಂದಷ್ಟು ಸಮಸ್ಯೆಗಳನ್ನು ಒಳಗೊಂಡಿದೆ. ಒಳ ಚರಂಡಿಯದ್ದೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ.

Advertisement

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗುಜ್ಜರಕೆರೆಯನ್ನು 2001ರಿಂದಲೇ ಪುನರುಜ್ಜೀವನಗೊಳಿಸುವ ಕೆಲಸ ಆರಂಭಿಸಿದರೂ ಇನ್ನೂ ಮುಗಿದಿಲ್ಲ. ಒಳಚರಂಡಿ ನೀರು ಸೇರಿ ಕೆರೆಯ ನೀರು ಮಲಿನವಾಗುತ್ತಿದ್ದು, ಸದ್ಯ ಒಳಚರಂಡಿ ನೀರು ಕೆರೆಗೆ ಸೇರುವುದು ನಿಂತಿದೆ. ಆದರೆ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಶುಚಿತ್ವ ಕಾರ್ಯವೂ ನಡೆಯದಿರುವುದರಿಂದ ಗುಜ್ಜರಕೆರೆ ಜನಬಳಕೆಗೆ ಅಯೋಗ್ಯವಾಗಿಯೇ ಉಳಿದಿದೆ. ಕೆರೆಯ ಬಳಿಯಲ್ಲೇ ಹಾದು ಹೋಗುವ ಒಳಚರಂಡಿ ಯೊಂದರ ಅವ್ಯವಸ್ಥೆಯಿಂದಾಗಿ ಕೆರೆ ನೀರು ಮತ್ತಷ್ಟು ಮಲಿನವಾಗುತ್ತಿದೆ. ಮಳೆಗಾಲದಲ್ಲಿ ಇದೇ ಪರಿಸರದಲ್ಲಿ ಮಾರಣಾಂತಿಕ ಡೆಂಗ್ಯೂ ಸದ್ದು ಮಾಡಿ ತ್ತಲ್ಲದೆ, ಜೀವಬಲಿ ಪ್ರಕರಣವೂ ಇಲ್ಲಿ ನಡೆ ದಿತ್ತು. ಡೆಂಗ್ಯೂ ಇಲ್ಲಿ ಉಲ್ಬಣಿಸಲು ಕೆರೆಯ ಬಳಿ ಯಲ್ಲಿ ಹಾದು ಹೋಗುವ ಒಳ ಚರಂಡಿಯ ಅವ್ಯವಸ್ಥೆಯೇ ಕಾರಣ ಎನ್ನುತ್ತಾರೆ ಸ್ಥಳೀಯರು.

ಗುಜ್ಜರಕೆರೆ ಸುತ್ತ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣಕ್ಕೆ 2014- 15ರಲ್ಲಿ ಕೆರೆ ಅಭಿವೃದ್ಧಿ ಯೋಜನೆಯಡಿ ಅನು ದಾನ ಮೀಸಲಿಡಲಾಗಿತ್ತು. ಆದರೆ ಕೆರೆ ಅಭಿವೃದ್ಧಿಯಾಗದಿರುವುದರಿಂದ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣವೂ ಕಡತದಲ್ಲಿ ಬಾಕಿಯಾಗಿದೆ. ಓಣಿಕೆರೆ ಯಲ್ಲಿ ಹಳೆಯ ಪೈಪ್‌ಲೈನ್‌ ಕಾರಣದಿಂದಾಗಿ ಒಳಚರಂಡಿ ಅವ್ಯ ವಸ್ಥೆಯಿದ್ದು, ಆಗಾಗ ಬ್ಲಾಕ್‌ ಆಗಿ ಸಮಸ್ಯೆ ಉಂಟು ಮಾಡುತ್ತಿದೆ. ಆದರ್ಶನಗರದಲ್ಲಿ ಒಳಚರಂಡಿಗೆ ಮ್ಯಾನ್‌ಹೋಲ್‌ ಮತ್ತು ಪೈಪ್‌ ಅಳವಡಿ ಕೆಯಾಗಿದ್ದು, ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಮುಳಿಹಿತ್ಲು ರಸ್ತೆಯಲ್ಲಿ ಒಳಚರಂಡಿ ಕೆಲಸ ಬಾಕಿ ಇದೆ.

ಜಪ್ಪು ಮಾರ್ಕೆಟ್‌ನಲ್ಲಿ ಕೋಳಿ ತ್ಯಾಜ್ಯವನ್ನು ಬಿಡಲು ಬದಲಿ ವ್ಯವಸ್ಥೆ ಇಲ್ಲದ ಕಾರಣ ತೋಡಿಗೆ ಬಿಡಲಾಗುತ್ತಿದೆ. ಇದರಿಂದ ಪರಿಸರದ ಜನರು ತೊಂದರೆ ಅನುಭವಿಸುವಂತಾಗಿದೆ. ಕಾಸಿಯಾ ಹೈಸ್ಕೂಲ್‌ ಬಳಿ ಚರಂಡಿ ನೀರು ತೋಡಲ್ಲಿ ಹೋಗದೆ, ರಸ್ತೆಯಲ್ಲಿ ಹೋಗುತ್ತಿದೆ ಎನ್ನು ತ್ತಾರೆ ಸ್ಥಳೀಯರು. ಭಗಿನಿ ಸಮಾಜದಿಂದ ಜಪ್ಪು ಮಾರ್ಕೆಟ್‌ ಕ್ರಾಸ್‌ ತನಕ ಎರಡನೇ ಹಂತದ ಕುಡ್ಸೆಂಪ್‌ ಯೋಜನೆಯಡಿ ರಸ್ತೆ ಕಾಮಗಾರಿ ಬಾಕಿ ಇದೆ.

ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಕಾರ್ಯ ಗಳು ಈ ವಾರ್ಡ್‌ನಲ್ಲಿ ಆಗಿವೆ. ಜಪ್ಪು ಮಾರ್ಕೆಟ್‌ನಿಂದ ಮಂಗಳಾದೇವಿ ಕ್ರಾಸ್‌ ತನಕ ರಸ್ತೆ ಕಾಂಕ್ರೀಟ್‌, ಮಂಗಳಾದೇವಿಯಿಂದ ವೀವೆಲ್‌ ತನಕದ ಮುಖ್ಯರಸ್ತೆ ಶಾಸಕರ ಅನುದಾನದಿಂದ ಕಾಂಕ್ರೀಟ್‌, ಜಪ್ಪು ಮಾರ್ಕೆಟ್‌ ರಿಕ್ಷಾ ಪಾರ್ಕ್‌ ಬಳಿ ಕಾಂಕ್ರೀಟ್‌, ಜಪ್ಪು ಮಾರ್ಕೆಟ್‌ನ ಮುಂಭಾಗದ ರಸ್ತೆ ಕಾಂಕ್ರೀಟ್‌ ಹಾಕಲಾಗಿದೆ. ಗುಜ್ಜರಕೆರೆ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ 80 ಲಕ್ಷ ರೂ. ಪಾಸಾಗಿದ್ದು, ಟೆಂಡರ್‌ ಆಗಿದೆ. ಕಾಸಿಯಾ ಶಾಲೆ ಹಿಂಬದಿ ರಸ್ತೆ ಕಾಂಕ್ರೀಟ್‌ ಹಾಕಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಅನುದಾನದಡಿ ಮುಳಿಹಿತ್ಲುವಿನಲ್ಲಿ ಬೃಹತ್‌ ಚರಂಡಿಗೆ ತಡೆಗೋಡೆ ನಿರ್ಮಿಸಲಾಗಿದೆ.

Advertisement

ಮಹಾಕಾಳಿಪಡು³ ರೈಲ್ವೇ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂಬ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಇನ್ನೂ ಕನಸಾಗಿಯೇ ಉಳಿ ದಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕೆಲಸಕ್ಕೆ 30 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ರಾಜಕೀಯ ಹಿನ್ನೋಟ
ವಾರ್ಡ್‌ ನಂ.58 ಬೋಳಾರ ವಾರ್ಡ್‌ನಲ್ಲಿ ರತಿಕಲಾ ಅವರು ನಿಕಟಪೂರ್ವ ಕಾರ್ಪೊರೇಟರ್‌. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ 376 ಮತಗಳ ಅಂತರದಿಂದ ಕಾಂಗ್ರೆಸ್‌ ಜಯ ಗಳಿಸಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್‌ ಮಹಿಳಾ “ಎ’ ಮೀಸಲಾತಿ ಹೊಂದಿತ್ತು. ಈ ಬಾರಿ ಸಾಮಾನ್ಯ ಮಹಿಳಾ ಮೀಸಲಾತಿ ಇದೆ.

ಬೋಳಾರ ವಾರ್ಡ್‌
ಬೌಗೋಳಿಕ ವ್ಯಾಪ್ತಿ: ಮಹಾಕಾಳಿಪಡು, ಆದರ್ಶನಗರ, ಓಣಿಕೆರೆ, ಮುಳಿಹಿತ್ಲು, ಬೋಳಾರ ಮುಖ್ಯರಸ್ತೆ, ಗಜ್ಜರಕೆರೆ, ಜಪ್ಪು ಮಾರ್ಕೆಟ್‌, ಮಂಗಳಾದೇವಿಯಿಂದ ಹೋಗುವಾಗ ಎಮ್ಮೆಕೆರೆ ಫಸ್ಟ್‌ ಕ್ರಾಸ್‌ ಎಡಬದಿಯ ರಸ್ತೆ, ಮಂಗಳಾದೇವಿಯ ಒಂದು ಕಾಂಪೌಂಡ್‌, ಮಾರಿಗುಡಿಯ ಕಾಂಪೌಂಡ್‌ನ‌ ಎದುರುಬದಿ ಮುಂತಾದ ಪ್ರದೇಶಗಳನ್ನು ಈ ವಾರ್ಡ್‌ ಒಳಗೊಂಡಿದೆ.

ಒಟ್ಟು ಮತದಾರರು 7000
ನಿಕಟಪೂರ್ವ ಕಾರ್ಪೊರೇಟರ್‌-ರತಿಕಲಾ

2013ರ ಚುನಾವಣೆ ಮತ ವಿವರ
ಕಾಂಗ್ರೆಸ್‌: ರತಿಕಲಾ: 1,253
ಬಿಜೆಪಿ: ಗೀತಾ ರಾಜೇಂದ್ರ: 0877
ಜೆಡಿಎಸ್‌: ಹೇಮಲತಾ ಬಿ.: 364

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next