Advertisement
ಪಟ್ಟಣದ ಹೊರವಲಯದ ಹೆದ್ದಾರಿಯಿಂದ ಲಾಡ್‌ಸಾಬ್ ಕಟ್ಟಿ, ಭೀಮಣ್ಣ ಬಾವಿಯ ಮೂಲಕ ಗುಮಗೇರಾ ಸಂಪರ್ಕಿಸುವ 16 ಅಡಿ ಅಗಲದ ರಸ್ತೆ ಕಂದಾಯ ಇಲಾಖೆಯ ಗ್ರಾಮ ನಕ್ಷೆಯಲ್ಲಿ ಜಮೀನು ವಹಿವಾಟು ರಸ್ತೆ ಎಂದು ದಾಖಲೆಯಲ್ಲಿದೆ. ಒಂದೂವರೆ ದಶಕದ ಹಿಂದೆ ಎನ್‌ಎಚ್-13 ಸಿಂಗಲ್ ಹೆದ್ದಾರಿ ಇದ್ದ ಸಂದರ್ಭದಲ್ಲಿ ಪಟ್ಟಣದ ಚರಂಡಿ ನೀರು, ಟೆಂಗುಂಟಿ ಕ್ರಾಸ್ ಮೂಲಕ ಸರ್ಕಾರಿ ಪಾಲಿಟೆಕ್ನಿಕ್ ಬಳಿ ಇರುವ ಹಳ್ಳ ಸೇರುತ್ತಿತ್ತು. ಹೆದ್ದಾರಿ ಅಗಲೀಕರಣ ನಂತರ ಚತುಷ್ಪಥ ಹೆದ್ದಾರಿ-50 ಆಗಿ ಅಭಿವೃದ್ಧಿ ನಂತರ ಮೂಲ ಜಮೀನು ವಹಿವಾಟು ರಸ್ತೆ ಸಂಪರ್ಕ ಕಡಿದುಕೊಂಡಿತು. ನಾಲೆಯ ಮೂಲಕ ಹರಿಯುವ ಚರಂಡಿ ನೀರು, ವಹಿವಾಟು ರಸ್ತೆಯನ್ನು ಅತಿಕ್ರಮಿಸಿದಾಗ ಈ ರಸ್ತೆಯ ಬಗ್ಗೆ ಒಕ್ಕೊರಲಿನ ರೈತರ ಧ್ವನಿಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ. ಈಗ ಸುಮಾರು ಅರ್ಧ ಕಿ.ಮೀ. ವಹಿವಾಟು ರಸ್ತೆಯಲ್ಲಿ ಚರಂಡಿ ನೀರು ಕಾಲುವೆಯಂತೆ ಹರಿದು ಹಳ್ಳ ಸೇರುತ್ತಿದೆ. ಪಟ್ಟಣದ ಚರಂಡಿಯಲ್ಲಿ ನೀರು ಸದಾ ಹರಿಯುತ್ತಿರುವ ಪರಿಣಾಮ ಮುಳ್ಳುಕಂಟಿಗಳು ಬೆಳೆದಿವೆ. ಘನತ್ಯಾಜ್ಯಗಳಿಂದ ಹೂಳು ತುಂಬಿದೆ.
Advertisement
ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ
02:34 PM Nov 25, 2019 | Suhan S |
Advertisement
Udayavani is now on Telegram. Click here to join our channel and stay updated with the latest news.