Advertisement
ನಗರದ ಪಿವಿಎಸ್ ವೃತ್ತ ಬಳಿಯ ಮಂಗಳೂರು ಬ್ರಹ್ಮವಿದ್ಯಾ ಸಮಾಜ ಬಳಿ ರಸ್ತೆಯ ಪಕ್ಕದಲ್ಲಿ ಹಾದುಹೋಗುವ ಕುಡಿಯುವ ನೀರಿನ ಪೈಪ್‌ಲೈನ್ ಕೆಲವು ದಿನಗಳ ಹಿಂದೆ ಒಡೆದಿದೆ. ಇಲ್ಲೇ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು, ಇದಕ್ಕೆ ಹಾಯಿಸಲಾದ ಸ್ಲಾ éಬ್ ಕೂಡ ತುಂಡಾಗಿದೆ. ಇದೇ ಕಾರಣಕ್ಕೆ ನೀರು ರಸ್ತೆಯ ಬಳಿ ಹರಿದು ಪಕ್ಕದಲ್ಲೇ ಇರುವ ಚರಂಡಿ ಪಾಲಾಗುತ್ತಿದೆ. ಸ್ಥಳೀಯರ ಪ್ರಕಾರ ಕೆಲವು ವಾರಗಳಿಂದಲೇ ಸಮಸ್ಯೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ.
ನಗರದ ಅನೇಕ ಕಡೆಗಳಲ್ಲಿಯೂ ಇಂತಹ ಸಮಸ್ಯೆ ಇದೆ. ಶೇಡಿಗುರಿ-ದಂಬೆಲ್ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಕೆಲವು ದಿನಗಳಿಂದ ರಸ್ತೆಯಲ್ಲೇ ನೀರು ಹರಿಯತ್ತಿದೆ. ಕಂಕನಾಡಿ-ಬೆಂದೂರ್‌ವೆಲ್ ವೃತ್ತ ನಡುವೆ ಕೆಲವು ವರ್ಷಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ಶುದ್ಧ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಸಮಸ್ಯೆಯ ಬಗ್ಗೆ ಸುದಿನ ಜನದನಿಯಲ್ಲಿ ಪ್ರಕಟಿಸಿ, ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗಿದೆ. ಒಂದೆಡೆ ಕುಡಿಯುವ ನೀರು ಚರಂಡಿ ಪಾಲಾಗುತ್ತಿದ್ದರೆ ಮತ್ತೂಂದೆಡೆ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಮೇಲೆ ಬಂದು ಮಳೆ ನೀರು ಹರಿಯುವ ಚರಂಡಿ ಸೇರುತ್ತಿದೆ. ಈ ಬಗ್ಗೆ “ಸುದಿನ’ ಈ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು. ಆದರೂ ನಗರದ ಕೆಲವು ಕಡೆಗಳಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.
Related Articles
ಹಳೆ ಕಾಲದ ಪೈಪ್ ಅಳವಡಿಸಿರುವ ಕಡೆ ಘನ ವಾಹನಗಳು ಸಂಚರಿಸಿದಾಗ ಪೈಪ್ ಒಡೆಯುತ್ತದೆ. ಇನ್ನೂ, ಕೆಲವು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆಯ ಬದಿಯಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆ.
- ಲತಾ, ಮಹಾನಗರ ಪಾಲಿಕೆ ಅಭಿಯಂತರ
Advertisement