Advertisement
ನಗರಸಭೆ ವ್ಯಾಪ್ತಿಯಲ್ಲಿನ ಚರಂಡಿ ಮತ್ತು ಒಳಚರಂಡಿಗಳಲ್ಲಿ ಅಲ್ಲಲ್ಲಿ ಹೂಳು, ತ್ಯಾಜ್ಯ ತುಂಬಿದೆ. ಕಾಲುವೆಗಳು ತ್ಯಾಜ್ಯ ಸಂಗ್ರ ಹದ ಹೊಂಡಗಳಾಗಿ ಮಾರ್ಪ ಟ್ಟಿವೆ. ರಸ್ತೆ ಬದಿಯಲ್ಲಿನ ತ್ಯಾಜ್ಯದ ರಾಶಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ರಸ್ತೆ ಬದಿಯ ಚರಂಡಿಗೂ ವ್ಯಾಪಿಸಿ ಚರಂಡಿಗಳು ಮುಚ್ಚಿ ಹೋಗಿದೆ. ಕೆಲವೊಂದು ಕಡೆ ಒಳಚರಂಡಿ ಮತ್ತು ಚರಂಡಿಗಳ ಹೂಳೆತ್ತುವ ಕೆಲಸ ಇನ್ನೂ ಅಪೂರ್ಣ ಸ್ಥಿತಿಯಲ್ಲಿದ್ದು ಹೀಗಾಗಿ ಪ್ರತೀ ಮಳೆಗಾಲದಂತೆ ಈ ಬಾರಿಯು ಕೃತಕ ನೆರೆಯ ಭೀತಿ ಇದ್ದೆ ಇದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ರಸ್ತೆ, ಉಪ್ಪಿನಂಗಡಿ ರಾಜ್ಯ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕ ವಾಗಿಲ್ಲ. ಮಾಣಿ-ಮೈಸೂರು ರಸ್ತೆಯ ವಿವಿಧೆಡೆ ಕಿರು ಸೇತುವೆ ಅಗಲ ಗೊಳಿಸುವ ಕಾಮಗಾರಿ ನಡೆಯುತ್ತಿದ್ದು ಹೀಗಾಗಿ ಮಳೆ ನೀರು ಹರಿಯಲು ಒಂದಷ್ಟು ತೊಡಕು ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಸಂಪ್ಯದ ಕಮ್ಮಾಡಿ ಮೈದಾನದ ಬಳಿಯಲ್ಲಿನ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಿರು ಸೇತುವೆ ವಿಸ್ತರಣೆ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಡಕಾದ ಘಟನೆ ನಡೆದಿದೆ. ಉಪ್ಪಿನಂಗಡಿ-ಪುತ್ತೂರು ನಡು ವಿನ ರಾಜ್ಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಅವಧಿ ಪೂರ್ಣಗೊಂಡರೂ ಕೆಲಸ ಮುಗಿದಿಲ್ಲ. ಇಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಚರಂಡಿ ಸಮಸ್ಯೆ ಸಾಕಷ್ಟಿದ್ದು ಹೀಗಾಗಿ ಈ ಬಾರಿ ಕೃತಕ ನೆರೆ ಉಂಟಾಗುವ ಸಾಧ್ಯತೆಗಳಿವೆ. ಶಾಸಕರು ಪರಿಶೀಲನೆ ನಡೆಸಿ ತತ್‌ಕ್ಷಣ ಚರಂಡಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.
Related Articles
ವಿಧಾನಸಭಾ ಚುನಾವಣೆಯ ಹಿನ್ನೆ ಲೆಯಲ್ಲಿ ಮೇ 13ರ ತನಕ ಅಧಿಕಾರಿಗಳ ಹಿಡಿತದಲ್ಲಿದ್ದ ಗ್ರಾ.ಪಂ., ನಗರಸಭೆ ಆಡಳಿತ ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಎಚ್ಚೆತ್ತು ಕೊಂಡಿಲ್ಲ. ತಾ.ಪಂ., ಜಿ.ಪಂ.ಆಡಳಿತ ಅವಧಿ ಮುಕ್ತಾಯಗೊಂಡು ವರ್ಷಗಳೆ ಕಳೆ ದಿದ್ದು ಅದಕ್ಕೆ ಚುನಾವಣೆ ಆಗದ ಕಾರಣ ಈ ವ್ಯಾಪ್ತಿಯ ಎಲ್ಲ ಕೆಲಸ ಕಾರ್ಯಗಳು ಸ್ತಬ್ಧವಾ ಗಿವೆ. ಗ್ರಾಮಾಡಳಿತ ವ್ಯಾಪ್ತಿಯ ರಸ್ತೆಗಳಲ್ಲಿ ಚರಂಡಿಗಳೇ ಅಪರೂಪವಾಗಿದ್ದು ಅಲ್ಲಿ ಪ್ರತೀ ವರ್ಷ ದಂತೆ ಈ ಬಾರಿಯು ಮಳೆಗಾಲದ ಗೋಳು ಸಂಚಾರ ನಿರತರಿಗೆ ಕಟ್ಟಿಟ್ಟ ಬುತ್ತಿಯಾಗಲಿದ್ದು ತಾ| ಆಡಳಿತ ಆಯಾ ಗ್ರಾ.ಪಂ.ಗಳಿಗೆ ಮಳೆಗಾಲದ ಸಿದ್ಧತೆ ಕೈಗೊಳ್ಳಲು ಖಡಕ್ ಸೂಚನೆ ನೀಡುವ ಅಗತ್ಯ ಇದೆ.
Advertisement
ಪೂರ್ವ ಸಿದ್ಧತೆಗೆ ಅನುದಾನಮಳೆಗಾಲದ ಪೂರ್ವ ಸಿದ್ಧತೆ ಕೆಲಸ ಗಳಿಗಾಗಿ ಪ್ರತೀ ವರ್ಷ ಯೋಜನೆ ಸಿದ್ಧಪಡಿಸಿ ಅನುದಾನ ಇರಿಸಲಾಗುತ್ತಿದೆ. ಇದರಲ್ಲಿ ಪೊದೆ ಸವರುವ, ಚರಂಡಿಗಳ ದುರಸ್ತಿ ಕಾಮಗಾರಿಗೆ ಪ್ರತೀ ವಾರ್ಡ್‌ಗೆ ಸರಾಸರಿ ಅನುದಾನ ಮೀಸಲಿ
ಡಲಾಗುತ್ತದೆ. ಈ ಬಾರಿಯು ನಗರಸಭೆ, ತಾ| ಆಡಳಿತ ಅನುದಾನ ಮೀಸಲಿಟ್ಟಿದೆ. ದುರಸ್ತಿ ಆರಂಭ
ನಗರದದೊಡ್ಡ ಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಲು ನಗರಸಭೆಯಲ್ಲಿ ಅಧಿಕಾರಿ, ಸಿಬಂದಿ ಎರಡು ತಂಡ ರಚಿಸಲಾಗಿದೆ. ಆಯಾ ವಾರ್ಡ್‌ಗಳಲ್ಲಿ ಮಳೆ ನೀರು ಹರಿಯಲು ಪೂರಕವಾಗಿ ಚರಂಡಿ ದುರಸ್ತಿ ಕಾರ್ಯ ನಡೆಯುತ್ತಿದೆ.
-ಮಧು ಎಸ್. ಮನೋಹರ್, ಪೌರಾಯುಕ್ತ, ನಗರಸಭೆ ಪುತ್ತೂರು ಅನಾಹುತಕ್ಕೆ ಮುನ್ನ ಎಚ್ಚರ ವಹಿಸಿ
ಪುತ್ತೂರು ನಗರ ಸೇರಿದಂತೆ ತಾಲೂಕಿನ ಜನಸಂದಣಿ ಇರುವ ರಸ್ತೆ ಬದಿಯಲ್ಲಿ, ರಸ್ತೆ ಇಕ್ಕೆಡೆಗಳ ಚರಂಡಿಗಳಲ್ಲಿ ತ್ಯಾಜ್ಯಗಳು ಕೊಳೆಯುತ್ತಿದ್ದು, ಮಳೆ ನಿರಂತರವಾಗಿ ಸುರಿಯಲಾರಂಭಿಸಿದರೆ ಅವು ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಸಾಂಕ್ರಾಮಿಕ ರೋಗ ಹರಡಿ ಜನತೆಯನ್ನು ಬಾಧಿಸುವ ಮುನ್ನವೇ ನಗರಸಭೆ, ಗಾ.ಪಂ. ಸ್ಥಳೀಯಾಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಂಡು ಕಾಳಜಿ ವಹಿಸ ಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.