Advertisement
ಕುದೂರಿನ ಸರ್ಕಾರಿ ಪಬ್ಲಿಕ್ ಶಾಲಾ ಪಕ್ಕದಲ್ಲಿ ಚರಂಡಿ ನೀರು ಮುಂದೆ ಹರಿಯದೆ ಚರಂಡಿಯಲ್ಲಿ ಕಡ್ಡಿ , ಕಸ, ಹುಲ್ಲು ಬೆಳೆದು ನಿಂತಿರುವುದರಿಂದ ಚರಂಡಿ ನೀರು ಮಡುಗಟ್ಟಿ ಸೊಳ್ಳೆಗಳ ತಾಣವಾಗಿಗಬ್ಬೆದ್ದು ನಾರುತ್ತಿದೆ. ಇದರಿಂದ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ. ಆದರೂಜನಪ್ರತಿನಿಧಿಗಳು, ಅಧಿಕಾರಿಗಳು ತಮಗೇನೂಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸ.
Related Articles
Advertisement
ಸಾಂಕ್ರಾಮಿಕ ರೋಗದ ಮೂಲ: ಕೊಳಚೆ ನೀರು ಶಾಲೆಯ ಬಳಿ ನಿಂತಿರುವುದರಿಂದ ಸಾಂಕ್ರಾಮಿಕರೋಗಗಳ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ಎಂದು ಎಸ್‌ಡಿಎಂಸಿ ಸದಸ್ಯರು, ಪಾಲಕರು ಹೇಳಿದರು. ಮಳೆ ಬಂದರೇ ಚರಂಡಿಮಯ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರಿ ಹೈಸ್ಕೂಲ್ ಇರುವುದರಿಂದ ಮಳೆ ಬಂದರೆ ಚರಂಡಿಮಿಶ್ರಿತ ನೀರು ಮೈದಾನದಲ್ಲೆಡೆ ಜಲಾವೃತ್ತವಾಗುತ್ತದೆ. ಮಕ್ಕಳಿಗೆ ಕ್ರೀಡಾ ಚಟುವಟಿಕೆಗೂ ತೊಂದರೆಯಾಗಿದೆ. ಅಲ್ಲದೇಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಡೆಂಗ್ಯೊ, ಮಲೇರಿಯಾ ವಿವಿಧ ರೋಗಗಳ ಮೂಲತಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕಿದೆ.
ಕೊಳಚೆ ನೀರು ನಿಂತ ಪರಿಣಾಮ ರೋಗ ಹರಡುವ ಅಪಾಯ ಎದುರಾಗಿದೆ. ಶಾಲಾ ಮಕ್ಕಳು ಚರಂಡಿ ಗಬ್ಬು ವಾಸನೆಯಿಂದ ತೊಂದರೆಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಪಾಠ ಕೇಳಬೇಕಾದ ಸ್ಥಿತಿಯೂ ಬಂದಿದೆ. ಇಲ್ಲಿನ ಸಮಸ್ಯೆ ಕುರಿತು ಗ್ರಾಪಂಗೆ ಹಲವರು ಸಲ ದೂರು ಕೊಟ್ಟಿದ್ದೇವೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು. – ವೆಂಕಟೇಶ್ ಮೂರ್ತಿ, ಶಾಲಾ ಶಿಕ್ಷಕ
ರಾಜ್ಯದೆಲ್ಲೆಡೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಶಾಲಾ ಅವರಣದಲ್ಲಿ ಚರಂಡಿ ನೀರು ನಿಂತು ಗಬ್ಬುನಾತಬೀರುತ್ತಿದೆ. ಸೊಳ್ಳೆಗಳ ಸ್ವರ್ಗ ತಾಣವಾಗಿದೆ. ಶಾಲೆಯಲ್ಲಿ ಕೊರೊನಾ ಕೇಸ್‌ವರದಿಯಾಗಿದೆ. ಇತ್ತ ಜನ ಪ್ರತಿನಿಧಿಗಳುಬೇಜವಾಬ್ದಾರಿ ತೋರಿದ್ದಾರೆ. ಮಕ್ಕಳಿಗೆಏನಾದರೂ ತೊಂದರೆಯಾದರೆ ಜನಪ್ರತಿನಿಧಿಗಳು ಮತ್ತು ಗ್ರಾಪಂಅಧ್ಯಕ್ಷರು, ಸದಸ್ಯರೆ ನೇರ ಹೊಣೆ. – ಪದ್ಮನಾಭ್, ನಾಗರಿಕ ಕುದೂರು