Advertisement

ದಿನೆ ದಿನೇ ಡ್ರ್ಯಾಗನ್‌ ಫ್ರೂಟ್‌ ಬೇಡಿಕೆ ಹೆಚ್ಚಳ

02:52 PM Jul 05, 2023 | Team Udayavani |

ದೇವನಹಳ್ಳಿ: ಬಯಲುಸೀಮೆಯ ಪ್ರದೇಶವಾಗಿದ್ದರೂ ಸಹ ಜಿಲ್ಲೆಯ ರೈತರು ಡ್ರ್ಯಾಗನ್‌ ಫ್ರೂಟ್‌ ಬೆಳೆದು ದೇಶಗಳಿಗೆ ರ ಫ್ತು ಮಾಡುವ ರೈತರ ಸಂಖ್ಯೆ ಹೆಚ್ಚುತ್ತಿದೆ.

Advertisement

ಬೆಂಗಳೂರಿಗೆ ಹತ್ತಿರ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರ ಭೂಮಿಗೆ ಹೆಚ್ಚಿನ ಬೆಲೆ ಬಂದಂತಾಯಿತು. ಲೇಔಟ್‌ಗಳು, ಬಡಾವಣೆಗಳು ನಾಯಿಕೊಡೆಗಳಂತೆ ನಿರ್ಮಾಣವಾಯಿತು. ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಮತ್ತು ಕೃಷಿಗೆ ಯೋಗ್ಯವಾದ ಭೂಮಿಯನ್ನು ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಆಗುತ್ತಿದೆ. ಇರುವ ಅಲ್ಪ ಸ್ವಲ್ಪದ ಜಮೀನುಗಳಲ್ಲಿ ರೈತರು ತರಕಾರಿ, ಹೂ, ಹಣ್ಣು ಸೇರಿದಂತೆ ಬೆಳೆದು ಬೆಂಗಳೂರಿಗೆ ನೀಡುತ್ತಿದ್ದಾರೆ. ಮತ್ತೂಂದು ಕಡೆ ನೀರಿನ ಸಮಸ್ಯೆ ಕಾಡುತ್ತಿದೆ. ಈ ಬಯಲು ಸೀಮೆಯ ಜಿಲ್ಲೆಯಾಗಿ ರುವುದರಿಂದ ಯಾವುದೇ ನದಿ ಮೂಲ, ನಾಲೆಗಳು ಇಲ್ಲ. ಬೋರ್‌ ವೆಲ್‌ ಕೊರೆ ಸಿದರೂ 1200 ರಿಂದ 1500 ಅಡಿಗೆ ಹೋದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಹೋಗುತ್ತಿದೆ. ಜಿಲ್ಲೆಯಲ್ಲಿ 11.77ಹೆಕ್ಟೇರ್‌ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲಾಗುತ್ತಿದೆ. ಬೆಂಗಳೂರು ಗ್ರಾಮಾಂ ತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾ ಟಕದಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯು ವವರ ಪ್ರಮಾಣ ಏರಿಕೆಯಾಗಿದ್ದು, ಸ್ಥಳೀಯ ಮಾರು ಕಟ್ಟೆ ಯಲ್ಲಿ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ನರೇಗಾ ಮಾತ್ರವಲ್ಲದೆ, ಕೇಂದ್ರ ಸರ್ಕಾರದಿಂದ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಆರ್ಥಿಕ ಸಹಾಯ ಸಿಗುತ್ತಿರುವ ಹಿನ್ನೆಲೆ ರೈತರು ಉತ್ಸಾಹ ತೋರುತ್ತಿದ್ದಾರೆ.

ರಫ್ತು ಮಾಡುವ ಯುವ ರೈತರ ಸಂಖ್ಯೆ ಹೆಚ್ಚಳ: ಮಾರುಕಟ್ಟೆಯಲ್ಲಿ ಡ್ರ್ಯಾಗನ್‌ಫ್ರೂಟ್‌ ಪ್ರತಿ ಸಸಿ ದರ 40ರೂ, ಇದ್ದು, ಒಮ್ಮೆ ನಾಟಿ ಮಾಡಿದರೆ 20ರಿಂದ 25 ವರ್ಷ ಫ‌ಲ ನೀಡುತ್ತದೆ. 1 ಎಕರೆಯಲ್ಲಿ 1.800 ಸಸಿ ಗಳನ್ನು ನಾಡಿ ಮಾಡಬಹುದಾಗಿದು, ಪ್ರತಿ ಸಸಿಯಿಂದ 5 ರಿಂದ 8 ಕೆ.ಜಿ. ಹಣ್ಣು ಸಿಗುತ್ತದೆ. ಹೀಗಾಗಿ, ವಾರ್ಷಿಕ ಕನಿಷ್ಟ 4ರಿಂದ 6 ಲಕ್ಷ ಆದಾಯ ಗಳಿಸಬಹುದಾಗಿದೆ ಅಸ್ಥಿರ ಮಾರುಕಟ್ಟೆಯಲ್ಲಿ ಸಹಜ ರೀತಿಯ ಹಣ್ಣುಗಳನ್ನು ಬೆಳೆದು ಕೈ ಸುಟ್ಟುಕೊಳ್ಳು ತ್ತಿರುವರ ನಡುವೆ ರಾಜ್ಯದಲ್ಲಿ ನರೇಗಾ ಸಹಾಯಧನ ಬಳಸಿಕೊಂಡು ಡ್ರ್ಯಾಗನ್‌ ಫ್ರೂಟ್‌ ಬೆಳೆದು ದೇಶಗಳಿಗೆ ರಫ್ತು ಮಾಡುವ ಯುವ ರೈತರ ಸಂಖ್ಯೆ ಹೆಚ್ಚುತ್ತಿದೆ.

ಬೆಳೆಯುವುದು ಹೇಗೆ?: ಸಾವಯುವ ಕೃಷಿ ವಿಧಾ ನದಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳಯಬಹು ದಾಗಿದ್ದು, ಪ್ರತಿ ಎಕರೆಗೆ ಕನಿಷ್ಟ 3 ಲಕ್ಷ ರೂ., ವೆಚ್ಚದಲ್ಲಿ ಬೆಳೆಗೆ ಕಂಬ ಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ನಿಗಧಿತ ಅಂತರದಲ್ಲಿ ಕಲ್ಲುಗಳ ಕಂಬ, ಸುರುಳಿಯಾಕಾರದ ಟೈರ್‌, ಕಬ್ಬಿಣದ ಕಂಬಿಗಳನ್ನು ಸಿದ್ಧಪಡಿಸಿಕೊಂಡರೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಬೆಳೆ ಕುರಿತಂತೆ ಮಾಹಿತಿ ನೀಡುತ್ತಾರೆ. ಡ್ರ್ಯಾಗನ್‌ ಫ್ರೂಟ್‌ಬೆಳೆಯಲು ನರೇಗಾ ಯೋಜನೆಯಡಿ 1.20 ಲಕ್ಷ ಪ್ರತಿ ಎಕರೆಗೆ ನೀಡಲಾಗುತ್ತಿದೆ. ಇದು ಮಾತ್ರವಲ್ಲದೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲಿ ಮೊದಲ ವರ್ಷ 30 ಸಾವಿರ ರೂ, 2ನೇ ವರ್ಷ ಸಾವಿರದಂತೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ನಿರ್ವಹಣೆಯನ್ನು ನೀಡ ಲಾಗುತ್ತಿದೆ. ಸರ್ಕಾರದಿಂದ ಸಹಾಯಧನವೂ ಸಿಗುತ್ತಿ ರುವ ಹಿನ್ನೆಲೆ ದೇಶಿ ಹಣ್ಣನ್ನು ಬೆಳೆಯಲು ರೈತರು ಹೆಚ್ಚು ಒಲವು ತೋರುತ್ತಿದ್ದು, ಈಗಾಗಲೇ ಹಲವು ಆರ್ಥಿಕವಾಗಿ ಲಾಭ ಕಂಡಿದ್ದಾರೆ.

Advertisement

ಏನಿದು ಡ್ರ್ಯಾಗನ್‌ ಫ್ರೂಟ್‌ ಬೆಳೆ?: ಡ್ರ್ಯಾಗನ್‌ ಫ್ರೂಟ್‌ ಅನ್ನು ಮೊದಲ ಬಾರಿಗೆ ದಕ್ಷಿಣ ಅಮೆರಿಕಾದಲ್ಲಿ ಬೆಳೆಯಲಾಯಿತು. ಈ ಹಣ್ಣಿನಲ್ಲಿನ ಔಷಧೀಯ ಗುಣಗಳಿಂದಾಗಿ ಹೆಚ್ಚಿನ ಬೇಡಿಕೆ ಸೃಷ್ಟಿಯಾದ ಬೆನ್ನಲ್ಲೇ ಥಾಯ್‌ಲ್ಯಾಂಡ್‌, ಯೇಟ್ನಾಂನಲ್ಲಿ ಈ ಬೆಳೆ ಪರಿಚಯ ಗೊಂಡಿತು. ಆ ಬಳಿಕ ದೇಶಕ್ಕೆ ವ್ಯಾಪಿಸಿದ ಈ ಹಣ್ಣಿನ ಘಮ ಪ್ರಾಸ್ತುತ ರಾಜ್ಯದಲ್ಲಿ ತನ್ನ ಹಲ್‌ಚಲ್‌ ಪರಸಿರು ತ್ತಿದೆ. ಕೆಂಗುಲಾಬಿ ಬಣ್ಣದ ಹಣ್ಣಿನಲ್ಲಿ ನಾರಿನಾಂಶ ಸಿಹಿ ಮತ್ತು ಕಹಿ ರುಚಿಯನ್ನು ನೀಡುತ್ತಿದೆ., ಮಾರು ಕಟ್ಟೆಯಲ್ಲಿ ಪ್ರತಿ ಹಣ್ಣಿಗೆ 70 ರಿಂದ 100 ರೂ. ಇದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ದೇಶ ಗಳಲ್ಲಿ ಈ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ: ಡ್ರ್ಯಾಗನ್‌ಫ್ರೂಟ್‌ನಲ್ಲಿ ನಾರಿನಂಶ ಹೆಚ್ಚಿದ್ದು, ಕಬ್ಬಿಣ, ಪ್ರೋಟೀನ್‌, ಕಾರ್ಬೋ ಹೈಡ್ರೇಟ್‌, ಮೆಗ್ನಿಯಂ, ಟುನ್‌ ಸಿ, ಟುನ್‌ ಇ ಪೋಷಕಾಂಶಗಳು ಹೆಚ್ಚಿನ ಪ್ರಮಾಣ ದಲ್ಲಿ ಸಿಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕ್ಯಾನ್ಸರ್‌, ಹೃದಯ ರೋಗ, ಮಧುಮೇಹವನ್ನು ದೂರಡಲು ಸಹಕಾರಿಯಾಗಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಆರೋಗ್ಯಕ್ಕೆ ಪೂರಕ ಬೆಳೆಯಾಗಿದೆ. ನಿರ್ವಹಣಾ ವೆಚ್ಚ ತೀರಾ ಕಡಿಮೆ. ಶೇ.50ರಷ್ಟು ಸರ್ಕಾರದ ಸಹಾಯಧನ.

ಡ್ರ್ಯಾಗನ್‌ ಫ್ರೂಟ್‌ಅನ್ನು ನಮ್ಮ ಜಮೀನುಗಳಲ್ಲಿ ಬೆಳೆಯಬೇಕು ಎಂದು ನಿರ್ಧರಿಸಿ ಭೂಮಿಯನ್ನು ಹದ ಮಾಡಿಕೊಂಡು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡಲಾಯಿತು. ಪ್ರತಿ ಎಕರೆಗೆ 3ಲಕ್ಷದ ವೆಚ್ಚದಲ್ಲಿ ಬೆಳೆಗೆ ಕಂಬಗಳನ್ನು ಸಿದ್ದಪಡಿಸಿ ಕೊಳ್ಳಬೇಕು. ನಿಗದಿತ ಅಂತರದಲ್ಲಿ ಕಲ್ಲುಗಳ ಕಂಬ, ಸುರುಳಿಯಾಕಾರದ ಟೈರ್‌, ಕಬ್ಬಿಣದ ಕಂಬಿಗಳನ್ನು ಸಿದ್ಧಮಾಡಿಕೊಳ್ಳಬೇಕು. ಡ್ರ್ಯಾಗನ್‌ ಫ್ರೂಟ್‌ ಇತರೆ ಕಡೆಗಳಲ್ಲಿ ಮಾತ್ರ ಬೆಳೆಯುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಮುಂದಾಗಿದ್ದೇವೆ. ● ಕೃಷ್ಣಮೂರ್ತಿ, ರೈತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ರೈತರು ಮುಂದಾಗಿದ್ದಾರೆ. ಡ್ರ್ಯಾಗನ್‌ ಫ್ರೂಟ್‌ಗೆ ಹೆಚ್ಚಿನ ಬೇಡಿಕೆ ಇದೆ. ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ವಿತರಿಸಲಾಗುತ್ತಿದೆ. ಡ್ರ್ಯಾಗನ್‌ ಫ್ರೂಟ್‌ ಬೆಳೆಯುವ ರೈತರು ಇದರ ಸದುಪಯೋಗ ಮಾಡಿಕೊಳ್ಳಬಹು ದಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಆರಂಭಿಸಿದ್ದು ಡ್ರ್ಯಾಗನ್‌ ಫ್ರೂಟ್‌ಗೆ ಸಹಾಯಧನ ಸಿಗಲಿದೆ. ● ಗುಣವಂತ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next