Advertisement

ಆಡಾಡುತ್ತಾ ಕಲಿಯಲಿದ್ದಾರೆ ಎಳೆಯರು !

10:24 AM Feb 24, 2020 | sudhir |

ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಶಾಲೆಯ ಪೂರ್ವ ಪ್ರಾಥಮಿಕ(ಎಲ್‌ಕೆಜಿ,ಯುಕೆಜಿ) ತರಗತಿ ಮಕ್ಕಳಿಗೆ “ಥೀಮ್‌’ ಆಧಾರಿತ ಕಲಿಕೆಗೆ ಪೂರಕವಾಗುವಂತೆ ಪಠ್ಯಕ್ರಮದ ಕರಡು ಸಿದ್ಧವಾಗಿದೆ. ಇದನ್ನೇ ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದ ರೂಪದಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ.

Advertisement

2019 – 20ನೇ ಸಾಲಿನಲ್ಲೇ ಪೂರ್ವ ಪ್ರಾಥಮಿಕ ತರಗತಿಗಳು ಆರಂಭ ಆಗಬೇಕಾಗಿತ್ತು, ಆದರೆ ಸೂಕ್ತ ಪಠ್ಯಕ್ರಮ ಇರಲಿಲ್ಲ. ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯು ತಜ್ಞರ ಸಹಕಾರದೊಂದಿಗೆ ಈ ಕರಡುಸಿದ್ಧಪಡಿಸಿದೆ.ಕೈಪಿಡಿ ರೂಪದ ಪಠ್ಯಕ್ರಮ8 ಅಂಶಗಳನ್ನು ಮುಖ್ಯವಾಗಿ ಇರಿಸಿಕೊಂಡು ಪೂರ್ವ ಪ್ರಾಥಮಿಕ ತರಗತಿಗಳ ಈ ಪಠ್ಯಕ್ರಮ ಸಿದ್ಧಪಡಿಸಲಾಗಿದೆ ಎಂಬುದು ಸಮಗ್ರ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ.

ಪಠ್ಯಕ್ರಮದಲ್ಲಿ ಪ್ರಮುಖವಾದವುಗಳು1. ಸಂಚಾರ ನಿಯಮಗಳು, ಬಸ್‌, ಲಾರಿ, ಕಾರು, ರೈಲು, ಹಡಗು ಇತ್ಯಾದಿ ಸಂಚಾರ ವ್ಯವಸ್ಥೆಯ ಪರಿಕರಗಳು2. ಮರ, ಗಿಡ, ಬಳ್ಳಿ ಸಹಿತವಾದ ಸಸ್ಯ ಸಂಕುಲ.3. ವಿವಿಧ ಬಗೆಯ, ಪ್ರಾಣಿ, ಪಕ್ಷಿಗಳನ್ನು ಒಳಗೊಂಡಿರುವ ಹಸುರು ಪರಿಸರ.4. ನಿತ್ಯದ ಬದುಕಿಗೆ ಪೂರಕವಾಗಿರುವ ನೀತಿ ಪಾಠಗಳು.5. ಮಾನವೀಯ ಸಂಬಂಧ (ಅಕ್ಕ, ಅಣ್ಣ, ಅಪ್ಪ, ಅಮ್ಮ, ತಮ್ಮ ಇತ್ಯಾದಿ).6. ಸ್ವತ್ಛತೆಗೆ ಸಂಬಂಧಿಸಿದ ಪರಿಕರಗಳು.ಪಠ್ಯಪುಸ್ತಕವಲ್ಲಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ಪಠ್ಯ ಪುಸ್ತಕ ಇರುವುದಿಲ್ಲ. ಆದರೆ ಮಕ್ಕಳಿಗೆ ಯಾವ ರೀತಿಯ ಪಾಠಗಳನ್ನು ಬೋಧಿಸಬೇಕು ಮತ್ತು ಮಕ್ಕಳೊಂದಿಗೆ ಶಿಕ್ಷಕರು ಬೆರೆತು ಬೋಧಿಸಬಹುದಾದ ಅನೇಕ ಅಂಶಗಳನ್ನು ಕ್ರೋಡೀಕರಿಸಿ ಶಿಕ್ಷಕರ ಕೈಪಿಡಿ ರೂಪದಲ್ಲಿ ಪಠ್ಯಕ್ರಮ ರಚನೆ ಮಾಡಲಾಗಿದೆ.

ಈ ಕೈಪಿಡಿ ಆಧರಿಸಿ ವರ್ಷಪೂರ್ತಿ ಯಾವ ರೀತಿ ತರಗತಿ ನಡೆಸಬೇಕು ಎಂಬುದನ್ನು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಮಕ್ಕಳ ಕಲಿಕೆಯ ಮಟ್ಟವನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ಸುಧಾರಿಸಲು ಸಾಧ್ಯವಿದೆ. ಒಂದನೇ ತರಗತಿಗೆ ಸೇರುವ ಮೊದಲೇ ಮಗುವಿನ ಅನೇಕ ವಿಷಯಗಳ ಅರಿವು ಬರಲು ಅನುಕೂಲವಾಗುವಂತೆ ಈ ಪಠ್ಯಕ್ರಮ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿ ವಿವರ ನೀಡಿದರು.

ಕಲಿಕಾ ಸಾಮಗ್ರಿಪೈಂಟಿಂಗ್‌ ಬ್ರಶ್‌, ಬಣ್ಣದ ಪೆನ್ಸಿಲ್‌, ರೋಲಿಂಗ್‌ ಪಿನ್‌, ಅಂಟು, ಮಗು ಸ್ನೇಹಿ ಕತ್ತರಿಗಳು, ಶಿಕ್ಷಕರ ಬೋಧನೆಗೆ ಅನುಕೂಲವಾಗುವ ಕತ್ತರಿಗಳು, ಮೂರು ಬಣ್ಣಗಳ ಚಾರ್ಟ್‌ ಪೇಪರ್‌, ಸೂಜಿಗಳು, ದಾರಗಳು, ಕ್ಲೇ, ವಾಟರ್‌ ಕಲರ್‌ಗಳು, ವಿವಿಧ ಬಗೆಯ ಸೌಟುಗಳು, ಐಸ್‌ಕ್ರೀಂ ಸ್ಟಿಕ್‌, ರಬ್ಬರ್‌ ಬ್ಯಾಂಡ್‌, ಕನ್ನಡಿ, ರಿಬ್ಬನ್‌, ಹೇರ್‌ ಕ್ಲಿಪ್‌ಗ್ಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಹಿತ ಸುಮಾರು 43 ಬಗೆಯ ಪರಿಕರಗಳು ಇದರಲ್ಲಿರುತ್ತವೆ. ಇವುಗಳ ಖರೀದಿ ಮಾಡುವಂತೆ ಎಲ್ಲ ಪಬ್ಲಿಕ್‌ ಶಾಲೆಗಳಿಗೆ ಸೂಚನೆ ಹೋಗಿದೆ.ಶಿಕ್ಷಕರಿಗೆ ಬೇಕಾದ ಸಾಮಗ್ರಿಗಳುಪುಟ್ಟ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವುದಕ್ಕಾಗಿ ಶಿಕ್ಷಕರಿಗೂ ಕೆಲವು ಪರಿಕರ ನೀಡುವ ಅಗತ್ಯವಿದೆ. ಹೀಗಾಗಿ ಸುಮಾರು 44 ಬಗೆಯ ಪರಿಕರ ಖರೀದಿ ಮಾಡಿಕೊಳ್ಳುವಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.ಪೂರ್ವಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಠ್ಯ ಇರುವುದಿಲ್ಲ. ಆದರೆ ಬೋಧನೆಗೆ ಅನುಕೂಲವಾಗುವಂತೆ ಶಿಕ್ಷಕರ ಕೈಪಿಡಿ ರೂಪದಲ್ಲಿ ಪಠ್ಯಕ್ರಮ ರಚಿಸಿದ್ದೇವೆ.

Advertisement

2020-21ನೇ ಸಾಲಿನ ಆರಂಭದಲ್ಲೇ ಒಂದು ಶಾಲೆಗೆ 30ರಂತೆ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೂ ಇವುಗಳನ್ನು ವಿತರಣೆ ಮಾಡಲಿದ್ದೇವೆ.-ಡಾ| ಟಿ.ಎಂ. ರೇಜು,ರಾಜ್ಯ ಯೋಜನಾ ನಿರ್ದೇಶಕ, ಸಮಗ್ರ ಶಿಕ್ಷಣ- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next