ಕುಂದಾಪುರ: ಕರ್ನಾಟಕ ಏಕೀರಣದ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ಆಶ್ರಯದಲ್ಲಿ ನಾಡಿನ ಗಣ್ಯರನ್ನು ಗುರುತಿಸುವ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಡಾ| ಕನರಾಡಿ ವಾದಿರಾಜ ಭಟ್ಟ ಅವರನ್ನು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಕೊಳದ ಮಠ ಡಾ1 ಶಾಂತವೀರ ಮಹಾಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೆಸರಾಂತ ನಿರ್ದೇಶಕ ಬಿ. ರಾಮ್‌ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅನೇಕ ಯುವ ಸಾಹಿತಿಗಳಿಗೆ ಪ್ರೇರಣಿ ನೀಡಿದ ಡಾ| ಕನರಾಡಿಯವರನ್ನು ಸಮ್ಮಾನಿಸಲಾಯಿತು.
ಈಗಾಗಲೇ ಕನರಾಡಿ ಅವರು ಕಾರಂತ ಸದ್ಭಾವನಾ ಪ್ರಶಸ್ತಿ , ಜಾನಪದ ಲೋಕ ಪುರಸ್ಕಾರ , ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಕಾಡೆಮಿ ಅಧ್ಯಕ್ಷ ಪ್ರೊ| ಜಿ.ಬಿ.ರಾಜು, ಅಡೊràಕೇಟ್ ಶ್ರೀನಿವಾಸನ್ , ಹಿಂದೂ ಮಹಾಸಭಾದ ಮಹಿಳಾ ಅಧ್ಯಕ್ಷೆ ಭಾರತಿ ಪಿ. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.