Advertisement
ಮುತ್ತಪ್ಪ ರೈ ಬಯೋಪಿಕ್ ತೆರೆಗೆ ತರುವುದರ ಬಗ್ಗೆ ಅವರ ಕುಟುಂಬ ವರ್ಗದ ಅನುಮತಿ, ಹಕ್ಕು ಸ್ವಾಮ್ಯದಬಗ್ಗೆ ಆರಂಭದಲ್ಲಿ ಪತ್ರಕರ್ತರ ಪ್ರಶ್ನೆಗಅತಿಯಾದ ಆತ್ಮವಿಶ್ವಾಸದಿಂದ ಉಡಾಫೆಯಉತ್ತರ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ, “ಯಾರು ಏನೇ ಹೇಳಿದ್ರೂ “ಎಂ.ಆರ್’ ಸಿನಿಮಾ ಮಾಡಿಯೇ ಸಿದ್ಧ, ದೇವರ ಸಿನಿಮಾ ಮಾಡಲು ಯಾರ ಅನುಮತಿ ಬೇಕು’ ಎಂದಿದ್ದರು.
Related Articles
Advertisement
ಇನ್ನು ಹಿಂದೆ “ಎಂ.ಆರ್’ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದ ಟೀಮ್ ಮತ್ತು ಕಲಾವಿದರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಇದು ಬ್ಯಾಂಕಾಕ್, ಮಂಗಳೂರು ಸುತ್ತಮುತ್ತಲ ಕಥೆಯಲ್ಲ. ಹಳೆಯ ತಂಡದ ಜೊತೆಗೆ ಈಗ ಡಿಆರ್ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಇದು ಮುತ್ತಪ್ಪ ರೈ ಅವರದೇ ಕಥೆನಾ? ಎಂಬ ಪ್ರಶ್ನೆಗೆ ನಿರ್ದೇಶಕರಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಆದರೂ ಇದು ಮುತ್ತಪ್ಪ ರೈ ಅವರ ಕುರಿತಾದ ಕಥೆಯೇ ಎಂದು ಹೇಳಲಾಗುತ್ತಿದೆ. ನಿರ್ದೇಶಕರು ಮಾತ್ರ, ಅದನ್ನು ರಿವೀಲ್ ಮಾಡದೆ, ಇದು “ಎಂ. ಆರ್’ ಅಲ್ಲ, “ಡಿ.ಆರ್’ ಎಂದಷ್ಟೇ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ದೀಕ್ಷಿತ್, “ಆರಂಭದಲ್ಲೇ ಇಂಥದ್ದೊಂದು ವಿವಾದ ಪಡೆದುಕೊಳ್ಳುತ್ತಿರುವುದು ಕಂಡು ನೋವಾಗುತ್ತೆ, ತುಂಬಾ ಒಳ್ಳೆಯ ವೆಲ್ ಕಮ್ ಸಿಗುತ್ತೆ. ಅಂತ ಅಂದುಕೊಂಡಿದ್ದೆ. ನಂಗೆ ಗೊತ್ತಾಗಿದೆ. ಖಂಡಿತವಾಗಿಯೂ ನಾವು ದೊಡ್ಡ ಮಟ್ಟಕ್ಕೆ ಹೆಸರು ಮಾಡಲಿದ್ದೇವೆ’ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶೋಭರಾಜಣ್ಣ, ಪ್ರಶಾಂತ್ ಸಂಬರಗಿ, ಉಮೇಶ್ ಬಣಕಾರ್ ಮತ್ತಿತರರು ಹಾಜರಿದ್ದರು.
ಒಟ್ಟಾರೆ ಸದ್ಯ ಬಿಡುಗಡೆಯಾಗಿರುವ “ಡಿ.ಆರ್’ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, “ಎಂ.ಆರ್’ ಟೈಟಲ್ ಬದಲಾಗಿ “ಡಿ.ಆರ್’ ಎಂದು ಇಡಲಾಗಿದೆ ಎಂಬುದಂತೂ ಸ್ಪಷ್ಟವಾಗುತ್ತದೆ. ಅದೇನೆಯಿರಲಿ, ಸದ್ಯ ವಿವಾದಕ್ಕೆ ಕಾರಣವಾಗಿರುವ “ಎಂ.ಆರ್’ ಗೂ, “ಡಿ.ಆರ್’ಗೂ ಕನೆಕ್ಷನ್ ಏನಾದರೂ ಇದೆಯಾ, ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.