Advertisement

ಡಾ|ಟಿಎಂಎ ಪೈ ಅವರ ಜನ್ಮದಿನಾಚರಣೆ

01:56 AM May 01, 2020 | Sriram |

ಉಡುಪಿ/ಮಂಗಳೂರು:ಮಣಿಪಾಲ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ| ಟಿಎಂಎ ಪೈ ಅವರ ಜನ್ಮದಿನವನ್ನು ಮಣಿಪಾಲ ಮತ್ತು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.

Advertisement

ಕೋವಿಡ್‌-19 ರಣ ಲಾಕ್‌ಡೌನ್‌ ಇರುವ ಕಾರಣ ವಿಶೇಷ ಸಮಾರಂಭ ಇರಲಿಲ್ಲ.ಮಣಿಪಾಲದ ಮಾಧವ ವಿಹಾರದಲ್ಲಿ, ಬಳಿಕ ಅವರಿದ್ದ ಮನೆ ಸ್ಮತಿ ಭವನ ಮತ್ತು ಮಣಿಪಾಲ ವಿ.ವಿ. ಆಡಳಿತಸೌಧದ ಮುಂಭಾಗ ದಲ್ಲಿರುವ ಡಾ| ಟಿಎಂಎ ಪೈಯವರ ಪುತ್ಥಳಿಗೆ ಮಾಹೆ ವಿ.ವಿ. ಟ್ರಸ್ಟ್‌ನ ಟ್ರಸ್ಟಿ ಟಿ. ವಸಂತಿ ಪೈ, ವಿ.ವಿ ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ ಭಟ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಮೊದಲಾದವರು ಪುಷ್ಪನಮನ ಸಲ್ಲಿಸಿದರು.

ಕಸ್ತೂರ್ಬಾ ಆಸ್ಪತ್ರೆ ಒಪಿಡಿ ವಿಭಾಗದಲ್ಲಿಯೂ ಸಿಬಂದಿ ಡಾ| ಪೈಯವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಗೌರವ ಸಲ್ಲಿಸಿದರು.

ಮಾಧವ ವಿಹಾರ ಮತ್ತು ಸ್ಮತಿ ಭವನಕ್ಕೆ ಡಾ| ಟಿಎಂಎ ಪೈ ಫೌಂಡೇಶನ್‌ ಕಾರ್ಯದರ್ಶಿ ಟಿ. ಅಶೋಕ್‌ ಪೈ, ಪತ್ನಿ ಗಾಯತ್ರಿ ಪೈ, ಪುತ್ರ ಸಚಿನ್‌ ಪೈ ಅವರು ಗೌರವಾರ್ಪಣೆ ಸಲ್ಲಿಸಿದರು.


ಮಂಗಳೂರಿನಲ್ಲಿ
ಅತ್ತಾವರದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಜಾನ್‌ ರಾಮಪುರಮ್‌ ಅವರು ಡಾ| ಟಿಎಂಎ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಅನಾ ರೋಗ್ಯ, ಅನಕ್ಷರತೆ ಹಾಗೂ ಬಡತನ ನಿರ್ಮೂಲನೆ ಮಾಡಲು ಡಾ| ಟಿ.ಎಂ.ಎ. ಪೈ ಅವರು ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ಎಜುಕೇಶನ್‌ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಈ ಮೂಲಕ ತಮ್ಮ ಕನಸನ್ನು ನನಸಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದರು.

ಆಸ್ಪತ್ರೆಯಲ್ಲಿರುವ ಎಲ್ಲ ರೋಗಿ ಗಳಿಗೆ ಹಣ್ಣು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ವೈದ್ಯಕೀಯ ಅಧೀಕ್ಷಕ ಡಾ| ದೀಪಕ್‌ ಮಡಿ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next