Advertisement

ಡಾ|ಆಮ್ಟೆ ದಂಪತಿಗೆ ಯಕ್ಷ ಕಲೆಯ ಬಲೆ!

03:45 AM Feb 03, 2017 | |

ಉಡುಪಿ: ಬಾಬಾ ಆಮ್ಟೆ ಅವರು ಮಹಾರಾಷ್ಟ್ರದ ನಾಗ್ಪುರ ಸಮೀಪದ ಹೇಮಲ್ಕಸ ಗ್ರಾಮದಲ್ಲಿ ಆರಂಭಿಸಿದ ಬುಡಕಟ್ಟು ಜನಾಂಗದವರ ಸೇವಾ ಕ್ಷೇತ್ರಕ್ಕೆ ಬಂದು ಇಲ್ಲಿನ ಯಕ್ಷಗಾನ ಕಲೆ ಪ್ರದರ್ಶಿಸಿ. ಅವರು ಅದರಿಂದ ಆನಂದಿತರಾಗುತ್ತಾರೆ ಎಂದು ಬಾಬಾ ಆಮ್ಟೆ ಅವರ ಪುತ್ರ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಪ್ರಕಾಶ ಆಮ್ಟೆ ಮತ್ತು ಪತ್ನಿ ಡಾ| ಮಂದಾಕಿನಿ ಆಮ್ಟೆ ತಿಳಿಸಿದರು. 

Advertisement

ಗುರುವಾರ ಎಂಜಿಎಂ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಮಕ್ಕಳ ಯಕ್ಷರೂಪಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು. 

ಬೆಂಗಳೂರು ಬಿ.ವಿ. ಕಾರಂತ ರಂಗ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತ ಎಂ. ಜಯರಾಮ ಪಾಟೀಲ್‌ ಮಾತನಾಡಿ, ಗಾಂಧೀಜಿ ಅವರಂತಾಗಲು ಖಾದಿ ಬಟ್ಟೆಯನ್ನೇ ತೊಡಬೇಕೆಂದಿಲ್ಲ. ನಿರ್ಮಲ ಮನಸ್ಸಿನಿಂದ ಕಾಯಕವೆಸಗಿದರೆ ಸಾಕು ಎಂದರು. 

ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಡಾ| ಪಿ.ಎಲ್‌.ಎನ್‌. ರಾವ್‌, ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು. 

ವೀಸಾ ನಿರಾಕರಣೆ 
2007ರಲ್ಲಿ ಅಮೆರಿಕದಲ್ಲಿ ನಡೆದ ಮರಾಠಿಗರ ಸಮ್ಮೇಳನಕ್ಕೆ ಆಮ್ಟೆ ಅವರನ್ನು ಆಹ್ವಾನಿಸಲಾಗಿತ್ತು. ಅವರ ವೃತ್ತಿ ಸಮಾಜಸೇವೆ, ಆದಾಯ 3,000 ರೂ. ಎಂಬ ಉಲ್ಲೇಖ ಕಂಡ ರಾಯಭಾರ ಕಚೇರಿ ಅವರು ವೀಸಾ ನೀಡಲು ನಿರಾಕರಿಸಿ
ದರು. ಹೇಮಲ್ಕಸದಿಂದ ಮುಂಬಯಿಗೆ 1,200 ಕಿ. ಮೀ. ಕ್ರಮಿಸಿ ಬರಲು ಮೂರು ದಿನ ಬೇಕಾದರೆ ಅಧಿಕಾರಿ ಎರಡೇ ನಿಮಿಷದಲ್ಲಿ ನಿರಾಕರಿಸಿದ್ದ. ಮರುದಿನ ಪತ್ರಿಕೆಗಳಲ್ಲಿ ಪ್ರಕಾಶ್‌ ಆಮ್ಟೆಗೆ ವೀಸಾ ನಿರಾಕರಣೆ ಎಂಬ ಸುದ್ದಿ ಬಂತು. ಅನಂತರ ರಾಯಭಾರ ಕಚೇರಿಯಿಂದ ದೂರವಾಣಿ ಕರೆ ಬಂತು. ವಿಷಾದ ಕೇಳಿ ಮತ್ತೆ ವಾಪಸು ಕರೆದರು ಎಂದು ಪ್ರಕಾಶ್‌ ಆಮ್ಟೆ ನೆನಪಿಸಿಕೊಂಡರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next