Advertisement

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

11:46 PM Jun 15, 2024 | Team Udayavani |

ಸುಳ್ಯ: ಸುಳ್ಯದ ಪರಿಸರ ತಜ್ಞ ಡಾ| ಆರ್‌.ಕೆ. ನಾಯರ್‌ ಅವರು ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಿರುವ ಭೂಕಂಪ ಸ್ಮಾರಕ ಸ್ಮತಿ ವನಕ್ಕೆ ಯೂನೆಸ್ಕೋ ಪ್ರಶಸ್ತಿ ಲಭಿಸಿದೆ.

Advertisement

ಡಾ| ನಾಯರ್‌ ಅವರು ಸ್ಮತಿವನದಲ್ಲಿ 4.60 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಇಲ್ಲಿ ಹಸಿರು ಪರಿಸರ ನಿರ್ಮಾಣ ಮಾಡಿದ್ದರು.

ಯುನೆಸ್ಕೋ ಪ್ರತೀ ವರ್ಷ ವಾಸ್ತುಶಿಲ್ಪ, ಪ್ರಕೃತಿ ಸಂರಕ್ಷಣೆ ಮತ್ತು ವಿನ್ಯಾಸ ಕ್ಷೇತ್ರದ ವಿಶ್ವದ ಪ್ರತಿಷ್ಠಿತ 7 ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ “ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿ ನೀಡುತ್ತಿದ್ದು, ವಿಶ್ವದ ಏಳು ಅತ್ಯಂತ ಸುಂದರವಾದ ವಸ್ತು ಸಂಗ್ರಹಾಲಯ ಹಾಗೂ ಸ್ಥಳಗಳ ಪಟ್ಟಿಯಲ್ಲಿ ಸ್ಮತಿವನ ಸ್ಥಾನ ಪಡೆದಿದ್ದು ಪ್ರಶಸ್ತಿಗೆ ಆಯ್ಕೆಯಾಗಿದೆ.

ಗುಜರಾತ್‌ನ ಸ್ಮತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಪರಿಕಲ್ಪನೆ ಮಾಡಿದರು ಮತ್ತು ಆಗಸ್ಟ್ 2022ರಲ್ಲಿ ಉದ್ಘಾಟಿಸಿದ್ದರು. ಪರಿಸರತಜ್ಞ ಡಾ| ಆರ್‌.ಕೆ. ನಾಯರ್‌ಅವರು ಮಿಯಾವಾಕಿ ಅರಣ್ಯೀಕರಣ ಯೋಜನೆಯ ಪ್ರಕಾರ ಸ್ಮತಿ ವನದಲ್ಲಿ 4.60 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. 36 ಎಕ್ರೆ ಪ್ರದೇಶದಲ್ಲಿ ಸುಂದರ ಅರಣ್ಯವನ್ನು ನಿರ್ಮಿಸಿದ್ದಾರೆ. 470 ಎಕ್ರೆ ಪ್ರದೇಶದಲ್ಲಿ ಸ್ಮತಿ ವನ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ 170 ಎಕ್ರೆ ಸ್ಥಳದಲ್ಲಿ ಸ್ಮತಿ ವನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಏಷ್ಯಾದ ಅತೀ ದೊಡ್ಡ ಭೂಕಂಪ ಮ್ಯೂಸಿಯಂ, ಭೂಕಂಪದ ಇತಿಹಾದ ತಿಳಿಸುವ ಡಿಜಿಟಲ್‌ ಮ್ಯೂಸಿಯಂ, ಸ್ಮಾರಕ ಹಾಗೂ ಅರಣ್ಯ ಬೆಳೆಸಲಾಗಿದೆ.

ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಡಾ| ಆರ್‌.ಕೆ. ನಾಯರ್‌ ಗುಜರಾತ್‌ನ ಉದ್ಯಮಿ ಹಾಗೂ ಪರಿಸರ ತಜ್ಞರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next