ಸುಳ್ಯ : ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ನಡೆದ ವೈದ್ಯರ ದಿನಾಚರಣೆಯಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ಡಾ|ಬಿ.ಸಿ. ರಾಯ್ ಪ್ರಶಸ್ತಿ ಪುರಸ್ಕೃತ ಡಾ| ಕೆ.ವಿ. ಚಿದಾನಂದ ಅವರನ್ನು ಅಭಿನಂದಿಸಲಾಯಿತು.
ಲಯನ್ಸ್ ಹಿರಿಯ ಸದಸ್ಯರಾದ ವಿಲಿಯಂ ಲಸ್ರಾದೋ ಮತ್ತು ಪಡ್ಡಂಬೈಲು ವೆಂಕಟ್ರಮಣ ಗೌಡ ಅವರು ಅಭಿನಂದಿಸಿದರು.ಅಭಿನಂದನಾ ಭಾಷಣ ಮಾಡಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿದ್ದುಕೊಂಡು ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುತ್ತಿರುವ ಡಾ| ಚಿದಾನಂದ ಅವರ ಸೇವೆ ಶ್ಲಾಘನೀಯ. ಅವರ ಎಲ್ಲ ಕಾರ್ಯಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದರು.
ಅಭಿನಂದನೆ ಸ್ವೀಕರಿಸಿದ ಡಾ| ಕೆ.ವಿ. ಚಿದಾನಂದ ಅವರು, ವರ್ಷಕ್ಕೆ 400 ವೈದ್ಯರು ಸುಳ್ಯದ ನಮ್ಮ ಶಿಕ್ಷಣ ಸಂಸ್ಥೆಯಿಂದ ರೂಪುಗೊಳ್ಳುತ್ತಿದ್ದಾರೆ. ಇದು ನಾವು ದೇಶಕ್ಕೆ ನೀಡುತ್ತಿರುವ ದೊಡ್ಡ ಕೊಡುಗೆ ಎಂದರು.
ಸಭಾಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಚಂದ್ರಶೇಖರ ನಂಜೆ ಅವರು ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಲಯನ್ಸ್ ಪೂರ್ವಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ರಾಮಚಂದ್ರ ಪೆಲತ್ತಡ್ಕ, ಖಜಾಂಚಿ ಮಲ್ಲಿಕಾರ್ಜುನ ಪ್ರಸಾದ್, ಲಯನೆಸ್ ಅಧ್ಯಕ್ಷೆ ದಿವ್ಯಾ ನಂಜೆ, ಕಾರ್ಯದರ್ಶಿ ವೀಣಾ ಪ್ರಸಾದ್, ಖಜಾಂಚಿ ಶರ್ಮಿಳಾ ನಿರಂಜನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ವೈದ್ಯರಾದ ಡಾ| ಸುಗುಣಾ ಗೌಡ, ಡಾ|ರಂಗಯ್ಯ, ಡಾ| ರಘುರಾಮ ಮಾಣಿಬೆಟ್ಟು, ಡಾ| ರಂಗನಾಥ್, ಡಾ|ನವ್ಯಾ, ಡಾ| ಲಕ್ಷಿ$¾àಶ, ಡಾ| ಲೀಲಾಧರ್ ಡಿ.ವಿ. ಅವರನ್ನು ಗೌರವಿಸಲಾಯಿತು.