Advertisement

Lok Sabha ಕಲಾಪದ ಅನುವಾದಕರಾಗಿ ಸುಬ್ರಹ್ಮಣ್ಯದ ಡಾ| ಗೋವಿಂದ ನೇಮಕ

12:18 AM Dec 07, 2023 | Team Udayavani |

ಸುಬ್ರಹ್ಮಣ್ಯ: ಲೋಕಸಭೆಯ ಕಲಾಪದಲ್ಲಿ ಆಗುವ ಚರ್ಚೆಗಳನ್ನು ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್‌ ಇಂಟಪ್ರಿಟರ್‌ ಹುದ್ದೆಗೆ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗುಂಡಿಹಿತ್ಲುವಿನ ಡಾ| ಗೋವಿಂದ ಎನ್‌.ಎಸ್‌. ನೇಮಕಗೊಂಡಿದ್ದಾರೆ.

Advertisement

ಲೋಕಸಭೆಯ ಅಧಿವೇಶನದಲ್ಲಿನ ಕಾರ್ಯಕಲಾಪಗಳನ್ನು ಭಾರತೀಯ ವ್ಯವಸ್ಥೆಗೆ ಭಾಷಾಂತರಿಸುವ ಸಲುವಾಗಿ ಹೊಸ ಸಂಸತ್‌ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲ ಭಾಷೆಗಳಲ್ಲೂ ತಲಾ 5 ಕನ್ಸಲ್ಟಂಟ್‌ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಕನ್ನಡಕ್ಕೆ ಭಾಷಾಂತರ ಹುದ್ದೆಗೆ 15 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ನಾಲ್ವರು ನೇಮಕಗೊಂಡಿದ್ದಾರೆ. ಅವರಲ್ಲಿ ಮೂವರು ದಿಲ್ಲಿಯ ಕನ್ನಡಿಗರಾಗಿದ್ದು, ಗೋವಿಂದ ಎನ್‌.ಎಸ್‌. ಕರ್ನಾಟಕ(ದಕ್ಷಿಣ ಕನ್ನಡ) ದವರಾಗಿದ್ದಾರೆ. ಈ ಮೊದಲೇ ಒರ್ವರು ಪೂರ್ಣಕಾಲಿಕವಾಗಿ ಕಾರ್ಯ
ನಿರ್ವಹಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next