Advertisement
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಿಗರು ದುಬೈ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಕರ್ನಾಟಕದ ನಾಡ ಹಬ್ಬ 64 ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 08 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ದುಬೈನಲ್ಲಿ ಭಾರತದ ರಾಯಭಾರಿ ವಿಪುಲ್ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಗಿಲ್ 1999ರ ಯುದ್ಧದಲ್ಲಿ ಸೆಣೆಸಿದ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಅತಿಥಿಗಳಾಗಿದ್ದಾರೆ. ಮುಸ್ತಾಫಾ ಮಹಮ್ಮದ್, ಉದ್ಯಮಿ ಹಾಗೂ ಕನ್ನಡಿಗರು ದುಬೈ ಪೋಷಕರು, ಫಾರ್ಚ್ಯೂನ್ ಹೋಟೆಲ್ಸ್ ಗ್ರೂಪಿನ ನಿರ್ವಾಕ ನಿರ್ದೇಶಕರಾದ ರವೀಶ್ ಗೌಡ , ದರ್ಶನಿ ಮಂಜುನಾಥ್ ನೃತ್ಯ ದಿಷಾ ಟ್ರಸ್ಟ್ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕನ್ನಡದ ಖ್ಯಾತ ರೇಡಿಯೊ ಮಿರ್ಚಿ ಹಾಗೂ ಕನ್ನಡ ಕೋಗಿಲೆ ನಿರೂಪಕಿಯಾದ ಆರ್ ಜೆ ಸಿರಿ ನೆರವೇಸಿಲ್ಲಿದ್ದಾರೆ. ಈ ಸಂದರ್ಭದಲ್ಲಿ ನೃತ್ಯ ದಿಷಾ ಟ್ರಸ್ಟ್ ಬೆಂಗಳೂರು ತಂಡದಿದ ಹಾಗೂ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲೆಸಿರುವ ಕನ್ನಡ ಶಾಲಾ ಮಕ್ಕಳು ನೃತ್ಯ, ಸಂಗೀತ ಹಾಗೂ ಮುಂತಾದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಂಜಿಸಲಿದ್ದಾರೆ.
Related Articles
ಫಾರ್ಚೂನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರುಗಳಾದ ವೀರೇಂದ್ರ ಬಾಬು, ಸದನ್ ದಾಸ್, ಉಮಾ ವಿದ್ಯಾಧರ್, ಹಾಗು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಅರುಣ್ ಕುಮಾರ್, ದೀಪಕ್ ಸೋಮಶೇಖರ್, ಚಂದ್ರಕಾಂತ್ ಗೌಡ, ವಿಜಯ ಶಿವರುದ್ರಪ್ಪ, ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ರಾಜ್, ಮಧು ಗೌಡ, ಚಂದ್ರಶೇಖರ್ ಪೂಜಾರಿ ಹಾಜರಿದ್ದರು.
Advertisement
ಇಲ್ಲಿನ ಇತರ ಸಂಘ ಸಂಸ್ಥೆಗಳ ಪ್ರಮುಖರಾದ ಸತೀಶ್ ಹೈನ್ದರ್, ಪ್ರಕಾಶ್ ಪಯ್ಯಾರ್, ಮನೋಹರ್ ಹೆಗಡೆ, ಸುಗಂಧ ರಾಜ್ ಬೇಕಲ್, ಸುಮೀಂದ್ರ ಹೇಮಾದ್ರಿ, ಆಶಾ ಲಕ್ಷ್ಮಿ, ಖಲೀಲ್ ರಹ್ಮಾನ್ ಉದಯ್ ನಂಜಪ್ಪ, ಬಾನು ಕುಮಾರ್, ನಾಗರಾಜ್ ರಾವ್ ಹಾಜರಿದ್ದರು