ಬೆಂಗಳೂರು: ಶಾಲಾ- ಕಾಲೇಜಿಗೆ ಬರುವ ಮಕ್ಕಳು ಶಿಕ್ಷಣ ಪಡೆಯುವ ದೃಷ್ಟಿಕೋನ ಹೊಂದಿರಬೇಕಿದೆ. ಈ ನಿಟ್ಟಿನಲ್ಲಿ ಹಿಜಾಬ್-ಕೇಸರಿ ಶಾಲು ಬಿಟ್ಟು, ರಾಜ್ಯ ಮತ್ತು ದೇಶದಲ್ಲಿ ಸಾಮಾಜಿಕ ಸಾಮ ರಸ್ಯ ಕಾಪಾಡುವ ದೃಷ್ಟಿಯಿಂದ ಹೈಕೋರ್ಟ್ ನೀಡಿರುವ ಮಧ್ಯಾಂತರ ತೀರ್ಪನ್ನು ಎಲ್ಲರೂ ಪಾಲಿಸ ಬೇಕಿದೆ ಎಂದು ಸರ್ವಧರ್ಮ ಗುರುಗಳು ಕರೆ ನೀಡಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಹಿಂದೂ- ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗುರುಗಳು ಶನಿವಾರ ಸಭೆ ನಡೆಸಿದರು. ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಾದಾರ ಚೆನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಟಿಚಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ, ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮೀಯಾ ಮಸೀದಿ ಮೌಲಾನಾ ಮಕ್ಸೂದ್ ಇಮ್ರಾನ್ ಸಾಹೇಬ್, ಆ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮೌಲಾನಾ ಸುರೇಮಾನ್ ಖಾನ್ ಮುಂತಾದವರಿದ್ದರು.
ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಮಾನ್ ಖಾನ್, ಮನೆಯಲ್ಲಿ ಧರ್ಮ, ರಾಜ್ಯದಲ್ಲಿ ಕನ್ನಡಿಗ ಮತ್ತು ದೇಶ ದಲ್ಲಿ ಭಾರತೀಯರಾಗಿ ಸಹಬಾಳ್ವೆ ನಡೆಸಬೇಕಿದೆ. ಆದ್ದರಿಂದ ನ್ಯಾಯಾ ಲಯದ ಮಧ್ಯಾಂತರ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪಾಲಿಸಬೇಕಿದೆ ಎಂದರು.
ಶಿಕ್ಷಣ ಪಡೆಯಲು ಮತ್ತು ಧರ್ಮ ಪಾಲನೆಗೆ ಎಲ್ಲರಿಗೂ ಹಕ್ಕಿದೆ. ಆದರೆ, ಸದ್ಯ ನ್ಯಾಯಾಲ ಯದ ಆದೇಶವನ್ನು ಪಾಲನೆ ಮಾಡಬೇಕಿದೆ. ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎಂಬ ಮಾತನ್ನು ಯಾರೂ ಹೇಳಬಾರದು. ಪರಿಸ್ಥಿತಿ ಗಂಭೀರವಾಗಿರುವುದರಿಂದ ಆನ್‌ಲೈನ್ ಶಿಕ್ಷಣ ಮುಂದುವರಿಸಲು ಸರಕಾರ ಮುಂದಾಗಬೇಕು ಎಂದರು.
ಶಿಮುಶ ಮಾತನಾಡಿ, ಹಿಜಾಬ್ ವಿವಾದ ಮಾನವ ನಿರ್ಮಿತ ಸಂಘರ್ಷವಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಸಾಮರಸ್ಯ ಕಾಪಾ ಡಲು ಮುಂದಾಗಬೇಕು. ನಾವು ಸಲಹೆ ನೀಡಬಹುದೇ ವಿನಾ ಕಾನೂನು ರಚಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಲಯದ ಆದೇಶ ಪಾಲಿಸಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.
ರಾಷ್ಟ್ರದ ಭಾವೈಕ್ಯ ಕಾಪಾಡಿ: ವಚನಾನಂದ ಸ್ವಾಮೀಜಿ
ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಸಮಾನತೆಗಾಗಿ ಎಂದು ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ. ಇದನ್ನು ಪಾಲಿಸಿ ಎಲ್ಲರೂ ರಾಷ್ಟ್ರೀಯ ಭಾವೈಕ್ಯವನ್ನು ಕಾಪಾಡಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಹೇಳಿದ್ದಾರೆ.