Advertisement

ಡಾ|ಸಿಂಗ್‌ ಪಾಕ್‌ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಲಿದ್ದರು: ಕೆಮರೂನ್‌

09:54 AM Sep 20, 2019 | sudhir |

ಹೊಸದಿಲ್ಲಿ: ಇಂಗ್ಲೆಂಡ್‌ನ‌ ಮಾಜಿ ಪ್ರಧಾನಿ ಡೆವಿಡ್‌ ಕೆಮರೂನ್‌ ಅವರ “ಫಾರ್‌ ದ ರೆಕಾರ್ಡ್‌’ ಎಂಬ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. 2010ರಿಂದ 2016ರ ವರೆಗೆ ಇಂಗ್ಲೆಂಡ್‌ನ‌ ಪ್ರಧಾನಿಯಾಗಿದ್ದ ಅವಧಿಯಲ್ಲಿನ ಅನುಭವಗಳಿಗೆ ಕೆಮರೂನ್‌ ಅವರು ಅಕ್ಷರ ರೂಪ ನೀಡಿದ್ದಾರೆ. ವಿಶೇಷ ಎಂದರೆ ಭಾರತದ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಮತ್ತು ಈಗಿನ ಪ್ರಧಾನಿ ಮೋದಿ ಅವರ ಜತೆ ಉತ್ತರ ಬಾಂಧವ್ಯ ಹೊಂದಿದ್ದರು.

Advertisement

ತಮ್ಮ “ಫಾರ್‌ ದ ರೆಕಾರ್ಡ್‌’ ಪುಸ್ತಕದಲ್ಲಿ ಡಾ| ಮನ್‌ಮೋಹನ್‌ ಸಿಂಗ್‌ ಮತ್ತು ತಮ್ಮ ಬಗೆಗಿನ ಬಹಳಷ್ಟು ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಡಾ| ಸಿಂಗ್‌ ಅವರನ್ನು “ಸೈಂಟ್ಲಿಮ್ಯಾನ್‌’ ಎಂದು ಕರೆದಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಬಾರಿ ವೇದಿಕೆಗಳನ್ನು ಜತೆಯಾಗಿ ಹಂಚಿಕೊಂಡಿದ್ದೇವೆ. ನಮ್ಮ ಮಾತುಕತೆಗಳಲ್ಲಿ ನಾವು ವಸಹಾತುಶಾಹಿ ಧೋರಣೆಯನ್ನು ಬಿಟ್ಟು ಅಭಿವೃದ್ಧಿಯ ಪಾಲುದಾರರಾಗಬೇಕು ಎಂಬ ನಿಲುವನ್ನು ತಾಳಿದ್ದೆವು ಎಂದಿದ್ದಾರೆ.

ಪುಸ್ತಕದಲ್ಲಿ ಕೆಮರೂನ್‌ ಅವರು ಭಾರತ-ಪಾಕ್‌ ಕುರಿತಾಗಿಯೂ ಬರೆದುಕೊಂಡಿದ್ದಾರೆ. 26/11ದಾಳಿ ನಡೆದ ದಾಳಿ ಬಳಿಕ ಪಾಕ್‌ ತನ್ನ ನಡೆಯನ್ನು ಸಮರ್ಥಿಸಿಕೊಂಡು ಮತ್ತೆ ಹಿಂಸೆಗೆ ಪ್ರಯತ್ನಿಸಿದ್ದರೆ ಅದರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಡಾ| ಸಿಂಗ್‌ ಉತ್ಸುಕರಾಗಿದ್ದರು. ಈ ಕುರಿತಾಗಿ ಅವರು ನನ್ನೊಂದಿಗೆ ಚರ್ಚಿಸಿದ್ದರು ಎಂದು ಕೆಮರೂನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next