Advertisement
ಶ್ರೀಗಳನ್ನು ಏರ್ ಆ್ಯಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗಿದ್ದು, ಮಠದಿಂದ ಬೆಳಗ್ಗೆ 10:20ಕ್ಕೆ ಸ್ವತಃ ನಡೆದು ಬಂದು, ಕಾರಿನಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಶ್ರೀಗಳ ಜತೆ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ವೈದ್ಯರಾದ ಡಾ.ಪರಮೇಶ್ವರ್ ಮತ್ತು ಡಾ.ಶಾಲಿನಿ ಹಾಗೂ ಅವರ ಇಬ್ಬರು ಸಹಾಯಕರೂ ಪ್ರಯಾಣಿಸಿದ್ದಾರೆ.
ವಿಶ್ವ ದರ್ಜೆಯ ಸೌಲಭ್ಯ ಹೊಂದಿರುವ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ನಡೆದಿದೆ. ಜನಪ್ರಿಯ ವೈದ್ಯ ಡಾ. ಮಹಮದ್ ರೇಲಾ ಅವರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ಸ್ವಾಮೀಜಿಯವರಿಗೆ ಅಳವಡಿಸಿರುವ 11 ಸ್ಟೆಂಟ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಜ್ವರದಿಂದ ಬಳಲುತ್ತಿದ್ದಾರೆ. ಡಾ.ರೇಲಾ ಅವರು ಕಳೆದ ಎರಡು ವರ್ಷದ ಹಿಂದೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ್ದರು. ಶುಕ್ರವಾರವೂ ಅವರೇ ಶ್ರೀಗಳ ತಪಾಸಣೆ ಮಾಡಿದ್ದು, ಶನಿವಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ನಾಲ್ಕು ದಿನ ಚೆನ್ನೈನಲ್ಲೇ ಚಿಕಿತ್ಸೆ:
ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೂರರಿಂದ ನಾಲ್ಕು ದಿನ ಚೆನ್ನೈನಲ್ಲೇ ಚಿಕಿತ್ಸೆ ನೀಡಬೇಕಾಗಬಹುದು ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ.ಪರಮೇಶ್ ತಿಳಿಸಿದ್ದಾರೆ. ಶ್ರೀಗಳಿಗೆ ಇನ್ನು ಸ್ಟrಂಟ್ ಅಳವಡಿಕೆ ಕಷ್ಟವಾಗುತ್ತದೆ ಎಂದು ಚೆನ್ನೈನ ವೈದ್ಯರ ಬಳಿ ಚರ್ಚಿಸಿದ್ದೆವು. ಕಾರಣ ಅವರನ್ನೇ ಕರೆದುಕೊಂಡು ಬನ್ನಿ, ಗುಣಪಡಿಸೋಣ ಎಂದು ಆಶ್ವಾಸನೆ ಕೊಟ್ಟಿದ್ದರಿಂದ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.
Related Articles
-ಎಚ್.ಡಿ. ಕುಮಾರಸ್ವಾಮಿ, ಸಿಎಂಘಿಆ
Advertisement