Advertisement

“ಕಲೆ, ಸಂಸ್ಕೃತಿ ಉಳಿಸುವಲ್ಲಿ ಡಾ|ಶಾಂತಾರಾಮ್‌ ಪಾತ್ರ ಹಿರಿದು’

12:37 AM Apr 22, 2019 | sudhir |

ಉಡುಪಿ: ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಡಾ| ಎಚ್‌. ಶಾಂತಾರಾಮ್‌ ಅವರ ಪಾತ್ರ ಅಪಾರವಾದುದು. ಇವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ ಎಂದು ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

Advertisement

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ಹಿರಿಯ ಚಿಂತಕ, ರಂಗತಪಸ್ವಿ ಡಾ| ಎಚ್‌. ಶಾಂತಾರಾಮ್‌ ಅವರಿಗೆ ತಲ್ಲೂರು ಗಿರಿಜಾ ಡಾ| ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.

ಇಲ್ಲಿನ ರವೀಂದ್ರ ಕಲಾ ಮಂಟಪದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಕಲಾ ಚಟುವಟಿಕೆ ಇನ್ನಷ್ಟು ಬೆಳೆಯುವ ನಿಟ್ಟಿನಲ್ಲಿ ಮಾಹೆ ವತಿಯಿಂದ ಆರು ತಿಂಗಳೊಳಗೆ ರವೀಂದ್ರ ಕಲಾ ಮಂಟಪಕ್ಕೆ ಹವಾನಿಯಂತ್ರಕ ಅಳವಡಿಸಲಾಗುವುದು. ಶಾಂತಾರಾಮ್‌ ಅವರು ಬಹುಮುಖ ವ್ಯಕ್ತಿತ್ವ ಹೊಂದಿ
ದ್ದಾರೆ. ಶಿಕ್ಷಣ ತಜ್ಞರೂ ಹೌದು ಅವರ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ| ಎಚ್‌.ಶಾಂತಾರಾಮ್‌ ಮಾತನಾಡಿ, ನಮ್ಮವರೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.

ಕೇಳಿದರೆ ಮಾತ್ರ ಉಪದೇಶ ಕೊಡಿ
ಜೀವನ ನಡೆಸುವ ರೀತಿಯನ್ನು ಅಳವಡಿಸಿಕೊಳ್ಳಬೇಕು. ಕೇಳಿದರೆ ಮಾತ್ರ ಉಪದೇಶ ಕೊಡುವುದು ಸೂಕ್ತ ಎಂಬ ತತ್ವವನ್ನು ಅಳವಡಿಸಿ ಕೊಳ್ಳಿ ಎಂದರು. ಆಧುನಿಕ ತಂತ್ರಜ್ಞಾನಗಳಿಂದ ನೈಸರ್ಗಿಕ ವಸ್ತುಗಳ ಉಪಯೋಗ ಆಗುತ್ತಿಲ್ಲ. ಇದರಿಂದಾಗಿಯೇ ಮೆದುಳಿನ ಕಾರ್ಯವೈಖರಿಯನ್ನು ನಾವು ಮರೆಯುತ್ತಿದ್ದೇವೆ ಎಂದರು.

Advertisement

ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಆರ್‌ಆರ್‌ಸಿಯ ಆಡಳಿತಾಧಿಕಾರಿ ಡಾ| ಎಂ.ಎಲ್‌. ಸಾಮಗ ಮಾತನಾಡಿ, ಡಾ| ಎಚ್‌ .ಶಾಂತಾರಾಮ್‌ ಅವರ ಕನ್ನಡದಲ್ಲಿ ಗ್ರಾಂಥಿಕ ಸ್ಪರ್ಶ ಇದೆ.

ಆಡಳಿತಗಾರರಾಗಿ ಅವರು ತುಂಬಾ ಹತ್ತಿರವಾದವರು. ಅವರ ಚಿಂತನೆ, ಕಾರ್ಯವೈಖರಿ, ಮಾತುಗಾರಿಕೆ ಶಿಸ್ತಿನಿಂದ ಕೂಡಿದೆ ಎಂದರು.
ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next