Advertisement

ಭಾರತದ ಮೊದಲ ಮಹಿಳಾ ಮನೋವೈದ್ಯೆ ಡಾ|ಶಾರದಾ ಮೆನನ್‌ ನಿಧನ

11:52 PM Dec 07, 2021 | Team Udayavani |

ಚೆನ್ನೈ: ದೇಶದ ಮೊದಲ ಮಹಿಳಾ ಮನೋರೋಗ ಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ  ಡಾ. ಮಾಂಬಲಿಕಲಾಕಿಲ್‌ ಶಾರದಾ ಮೆನನ್‌(98)ಸೋಮವಾರ ಚೆನ್ನೈನಲ್ಲಿನಿಧನರಾಗಿದ್ದಾರೆ.

Advertisement

ಹಲವು ಸಮಯಗಳಿಂದ ಅವರು ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನ ಕಿಲುಪ್ಪಾಕ್‌ ಎಂಬಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್ ಮೆಂಟಲ್‌ ಹೆಲ್ತ್‌ (ಐಎಂಎಚ್‌)ನ ದೀರ್ಘಾವಧಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯೂ ಅವರದ್ದು.

ಮಂಗಳೂರಿನಲ್ಲಿ 1923 ಏ.5ರಂದು ಜನಿಸಿದ್ದರು. ನ್ಯಾಯಾಧೀಶರಾಗಿದ್ದ ಅವರ ತಂದೆ ಚೆನ್ನೈಗೆ ವರ್ಗಾವಣೆ ಯಾಗಿದ್ದರಿಂದ ಶಾರದಾ ಕೂಡ ಅಲ್ಲಿಗೆ ತೆರಳಿದ್ದರು. ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ 1947ರಲ್ಲಿ ಎಂಬಿಬಿಎಸ್‌ ಪದವಿ ಪೂರ್ತಿಗೊಳಿಸಿದ ಅವರು ಹಲವು ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದರು.

ಇದೇ ಅವಧಿಯಲ್ಲಿ ಅವರು ಎಂ.ಡಿ. ಪದವಿಯನ್ನೂ 1953ರಲ್ಲಿ ಪೂರ್ತಿಗೊಳಿಸಿದರು. ನಂತರ ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮನೋರೋಗದಲ್ಲಿ ಎರಡು ವರ್ಷಗಳ ಪದವಿಯನ್ನೂ ಪೂರ್ತಿಗೊಳಿಸಿ ದೇಶದ ಮೊದಲ ಮಹಿಳಾ ಮನೋರೋಗ ತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ:ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

Advertisement

1984ರಲ್ಲಿ ಅವರು ಸ್ಕಿಜೋಫ್ರೆನಿಯಾ ಕೇರ್‌ ಆ್ಯಂಡ್‌ ರಿಸರ್ಚ್‌ ಫೌಂಡೇಷನ್‌ (ಎಸ್‌ಸಿಎಆರ್‌ಎಫ್) ಅನ್ನು ಸ್ಥಾಪಿಸಿದ್ದರು. ಜತೆಗೆ ಚೆನ್ನೈನಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್ ಮೆಂಟಲ್‌ ಹೆಲ್ತ್‌ನ ಸೂಪರಿಂಟೆಂಡೆಂಟ್‌ ಆಗಿ 18 ವರ್ಷಗಳ ಸೇವೆ ಸಲ್ಲಿಸಿದ್ದರು ಮತ್ತು ಸಂಸ್ಥೆಯ ಆಮೂಲಾಗ್ರ ಬೆಳವಣಿಗೆಗೆ ಕಾರಣರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ 1992ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಪದ್ಮವಿಭೂಷಣ ಗೌರವ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next