Advertisement

ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ವಿಜಯಪುರದ ಡಾ.ಆರ್.ವಿ.ಕುಲಕರ್ಣಿ 2ನೇ ಬಾರಿಗೆ ಆಯ್ಕೆ

01:11 PM Oct 16, 2022 | keerthan |

ವಿಜಯಪುರ: ಔಷಧ ವಿಜ್ಞಾನ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ವಿಜಯಪುರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ 2022 ನೇ ಸಾಲಿನ ವಿಶ್ವದ ಉನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 2ನೇ ಬಾರಿ ಸ್ಥಾನ ಪಡೆದಿದ್ದಾರೆ.

Advertisement

ಅಮೇರಿಕಾದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಹಾಗೂ ನೆದರಲ್ಯಾಂಡ್ ನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಅವರಲ್ಲಿ ಶ್ರೇಷ್ಠ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ. ಸತತ 2ನೇ ಬಾರಿ ಡಾ. ರಾಘವೇಂದ್ರ ಕುಲಕರ್ಣಿ ಈ  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 15 ನೇ ಸ್ಥಾನ ಹಾಗೂ ವಿಶ್ವದ 130 ನೇ ಸ್ಥಾನ ಪಡೆದಿದ್ದಾರೆ.  ಡಾ. ಕುಲಕರ್ಣಿ ಅವರು 113 ಸಂಶೋಧನಾ ಪ್ರಕಟನೆಗಳು, 87 ಸಂಶೋಧನಾ ಪ್ರಭಂದಗಳು, 6 ಪುಸ್ತಕಗಳನ್ನು ರಚಿಸಿದ್ದಾರೆ ಮತ್ತು 7 ಪೇಟೆಂಟ್ ಗಳನ್ನು ಕೂಡ ಪಡೆದಿದ್ದಾರೆ. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮರೆವು ಕಾಯಿಲೆ ಹಾಗೂ ಕ್ಯಾನ್ಸರ್ ದಂಥ ರೋಗಗಳ ಔಷಧ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ 91 ಲಕ್ಷ ರೂಪಾಯಿ ಅನುದಾನವನ್ನೂ ಪಡೆದುಕೊಂಡಿದ್ದಾರೆ.  ಡಾ. ಕುಲಕರ್ಣಿ ಅವರು ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕಗಳ ಸಂಪಾದಕಿಯ ಸದಸ್ಯ ಹಾಗೂ ವಿಮರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಸಾಧನೆಗೆ ಬಿ.ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷ, ಮಾಜಿ ಸಚಿವ ಶ್ರೀ ಎಂ. ಬಿ. ಪಾಟೀಲ, ಕುಲಪತಿ ಡಾ. ಆರ್. ಎಸ್. ಮುಧೋಳ ಹಾಗೂ ಅಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next