ಬೆಂಗಳೂರು: ಸಂತಾನ ಭಾಗ್ಯವಿಲ್ಲದೆ ಚಿಂತೆಗೊಳಗಾಗಿರುವ ದಂಪತಿಗಳಿಗೆ ಚಿಕಿತ್ಸೆ ನೀಡಿ ಅವರ ಬಾಳಿನಲ್ಲಿ ಸಂತಾನ ಭಾಗ್ಯದ ಬೆಳಕನ್ನು ತರುವ ಸೇವೆಯಲ್ಲಿ ನಿರತರಾಗಿರುವ ಡಾ.ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್‌ಗೆ 27ನೇ ವರ್ಷದ ಸಂಭ್ರಮ.
ಇಂದಿರಾನಗರದ 1ನೇ ಹಂತದಲ್ಲಿರುವ ಡಾ. ರಮಾಸ್ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಸಂಸ್ಥೆಯ ಸಿಇಒ ಡಾ. ರಾಖೀ ಮಿಶ್ರಾ ಮತ್ತು ಡಾ. ಸಂಧ್ಯಾ ಮಿಶ್ರಾ ಅವರು ಉದ್ಘಾಟಿಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ರಾಖೀ ಮಿಶ್ರಾ, 26 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಚಿಕ್ಕ ಸ್ವಯಂಸೇವಾ ಸಂಸ್ಥೆಯಾಗಿ ಪ್ರಾರಂಭವಾದ ಡಾ.ರಮಾಸ್ ಸೆಂಟರ್, ಇಂದು ದೇಶದ ಆರು ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ಬೆಂಗಳೂರಿನ ಡಾ.ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ಶಾಖೆಗೆ ಇಂದು ಮೂರನೇ ವಾರ್ಷಿಕೋತ್ಸವ ಸಂಭ್ರಮ ಎಂದರು.
ಶೇ.92ರಷ್ಟು ಯಶಸ್ಸು: “ದಂಪತಿಗಳಾಗಿ ಬನ್ನಿ, ಕುಟುಂಬ (ಮಗುವಿನೊಂದಿಗೆ) ದೊಂದಿಗೆ ಹೋಗಿ’ ಎಂಬ ಮೂಲ ಮಂತ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ನಾವು ಮಕ್ಕಳಿಲ್ಲದ ದಂಪತಿಗಳಿಗೆ ಬಂಜೆತನ ನಿವಾರಣೆ (ಐವಿಎಫ್) ಚಿಕಿತ್ಸೆ ನೀಡಿ, ಅವರ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸಲು ಪ್ರಯತ್ನಿಸುತ್ತೇವೆ.
ಅದಕ್ಕಾಗಿ ಮೂರು ಹಂತಗಳಲ್ಲಿ ಚಿಕಿತ್ಸೆ ನೀಡುವ ನಾವು ಒಂದನೇ ಹಂತದಲ್ಲಿ ಶೇ.92ರಷ್ಟು ಯಶಸ್ಸನ್ನು ಕಂಡಿದ್ದೇವೆ. 2ನೇ ಹಂತದ ಚಿಕಿತ್ಸೆಯಲ್ಲಿ ಶೇ.6ರಷ್ಟು ಹಾಗೂ 3ನೇ ಹಂತದಲ್ಲಿ ಶೇ.2ರಷ್ಟು ಯಶಸ್ಸು ಕಂಡಿರುವುದು ಅತಿ ದೊಡ್ಡ ಸಾಧನೆ. ವಾರ್ಷಿಕೋತ್ಸವದ ಪ್ರಯುಕ್ತ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುವ ದಂಪತಿಗಳಿಗೆ ಐವಿಎಫ್ ಚಿಕಿತ್ಸೆಯ ಪ್ರತಿ ಸೈಕಲ್‌ಗೆ 70 ಸಾವಿರ ರೂ.ನಂತೆ ವಿಶೇಷ ರಿಯಾಯಿತಿ ನೀಡುತ್ತಿದ್ದೇವೆ.
ಈ ಕೊಡುಗೆ ಜೂ.10ರವರೆಗೆ ಇರುತ್ತದೆ ಎಂದು ಅವರು ತಿಳಿಸಿದರು. ಡಾ. ಸಂಧ್ಯಾ ಮಿಶ್ರಾ ಅವರು ಮಾತನಾಡಿ, ಮಕ್ಕಳಿಲ್ಲದ ದಂಪತಿ ಬಾಳಿನಲ್ಲಿ ಬೆಳಕನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಕಾರ್ಯ ನಮಗೆ ದೇವರು ಕೊಟ್ಟ ವರ ಎಂದುಕೊಳ್ಳುತ್ತೇನೆ. ಡಾ.ರಮಾಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದು ಹಾಗೂ ಈ ಸೆಂಟರ್‌ನ ಮೂರನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ.
ಇಲ್ಲಿನ ವೈದ್ಯರ, ಸಿಬ್ಬಂದಿಯ ಶ್ರಮ, ಹಿತೈಷಿಗಳ ಬೆಂಬಲ ಮೇಲಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡ ದಂಪತಿಗಳ ಹಾರೈಕೆ ನಮ್ಮ ಯಶಸ್ಸಿನ ದಾರಿದೀಪ. ಬಂಜೆತನವೆಂಬ ಒತ್ತಡದ ನಿವಾರಣೆಗೆ ನಾವು 24/7 ಕಾರ್ಯ ನಿರ್ವಹಿಸುತ್ತಿದ್ದೇವೆ. ಅಲ್ಲದೆ, ಇಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂದರು.