Advertisement

ಡಾ.ರಾಜ್‌ಕುಮಾರ್‌ ಕಲಿಕಾ ಆ್ಯಪ್‌ಗೆ ಸಿಎಂ ಚಾಲನೆ

02:40 PM Aug 17, 2021 | Team Udayavani |

ಬೆಂಗಳೂರು: ಇದು ಜ್ಞಾನದ ಯುಗ. ಯಾರಲ್ಲಿ ಜ್ಞಾನವಿರುತ್ತದೆಯೋ ಅವರು ಜಗತ್ತನ್ನು ಆಳುತ್ತಾರೆ. ಹೀಗಾಗಿ ಬೋಧಕರು ವಿದ್ಯಾರ್ಥಿಗಳಿಗೆ ಸಾತ್ವಿಕ ಜ್ಞಾನದ ಬೆಳಕು ತುಂಬುವ ಕಾರ್ಯ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

Advertisement

ವಿದ್ಯಾರ್ಥಿಗಳ ಕಲಿಕೆಯ ಅನುಕೂಲಕ್ಕಾಗಿ ಡಾ.ರಾಜ್‌ಕುಮಾರ್‌ ಕುಟುಂಬದಿಂದ ಹೊರತಂದಿರುವ ಡಾ.ರಾಜ್‌ ಕುಮಾರ್‌ ಲರ್ನಿಂಗ್‌ ಆ್ಯಪ್‌ಗೆ(
ಕಲಿಕೆ ಆ್ಯಪ್‌) ಚಾಲನೆ ನೀಡಿ ಮಾತನಾಡಿದರು.

ಹಿಂದೆ ಭೂಮಿ ಇದ್ದರು ಜಗತ್ತು ಆಳುತ್ತಿದ್ದರು. ನಂತರ ದುಡ್ಡಿದ್ದವರು ಜಗತ್ತು ಆಳುವ ಕಾಲ ಬಂತು. ಈಗ ಜ್ಞಾನವಿದ್ದವರದ್ದೇ ಜಗತ್ತು. 21ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್‌ ಕುಮಾರ್‌ ಅವರ ಆ್ಯಪ್‌ ದೊಡ್ಡ ಕೊಡುಗೆ ನೀಡಲಿದೆ. ಈ ಅಕಾಡೆಮಿಮೂಲಕ ಮಕ್ಕಳಿಗೆ ತರ್ಕಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಇದರಿಂದ ಎಲ್ಲ ವಿಷಯವು ಸಹಜವಾಗಿ ಅವರ ಸ್ಮತಿ ಪಟಲದಲ್ಲಿ ಉಳಿಯುತ್ತದೆ ಎಂದರು.

ಇದನ್ನೂ ಓದಿ:ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ: ಅ.24ರಂದು ಭಾರತ-ಪಾಕ್ ಮುಖಾಮುಖಿ

ಮುಗ್ಧತೆ, ಆತ್ಮಶುದ್ಧತೆ: ರಾಜ್‌ ಕುಮಾರ್‌ ಎಂದರೆ,ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಎಂತಹ ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳಬೇಕು. ಅಂತಹ ಸಾಧನೆ ಮಾಡಿದ ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್‌ ಕುಮಾರ್‌. ಅವರ ಸರಳತೆ, ನಡೆ,ನುಡಿ, ಜೀವನ ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರದಲ್ಲಿದ್ದವರು, ಜನಪ್ರಿಯ ವ್ಯಕ್ತಿಗಳು ಸರಳವಾಗಿ ಇರಬೇಕು ಎಂಬುದನ್ನು ಅವರಿಂದ ಕಲಿಯಬೇಕು.

Advertisement

ಡಾ.ರಾಜ್‌ಕುಮಾರ್‌ ಕಲಿಕಾ ಆ್ಯಪ್‌ನ ರಾಯ ಬಾರಿಯೂ ಆಗಿರುವ ನಟ ಪುನೀತ್‌ ರಾಜ್‌ ಕುಮಾರ್‌, ಹಿರಿಯ ನಟ ಡಾ.ರಾಘವೇಂದ್ರ ರಾಜ್‌
ಕುಮಾರ್‌ ಇತರರು ಉಪಸ್ಥಿತರಿದ್ದರು.

ಪ್ಲೇ ಸ್ಟೋರ್‌ ನಲ್ಲಿಲಭ್ಯ
ಡಾ.ರಾಜ್‌ ಕುಮಾರ್‌ ಲರ್ನಿಂಗ್‌ ಆ್ಯಪ್‌ ಅನ್ನುವಿದ್ಯಾರ್ಥಿಗಳು ತಮ್ಮ ಆ್ಯಂಡ್ರಾಯ್ಡ ಫೋನ್‌ ಮೂಲಕ ಪ್ಲೇಸ್ಟೋರ್‌ನಿಂದ ಪಡೆಯಬಹುದಾಗಿದೆ. ಸದ್ಯ ಈ ಆ್ಯಪ್‌ನಲ್ಲಿ ದ್ವಿತೀಯ ಪಿಯುಸಿವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪೂರ್ವ ಮುದ್ರಿತ ವಿಡಿಯೊಗಳುಲಭ್ಯವಿದೆ. ವಿದ್ಯಾರ್ಥಿಗಳು
ತಮ್ಮ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಸಂಶಯ, ಗೊಂದಲಗಳಿದ್ದರೂ, ಈ ಪೂರ್ವ ಮುದ್ರಿತ ವಿಡಿಯೊಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ.

ಡಾ.ರಾಜ್‌ಕುಮಾರ್‌ ಸಿನಿಮಾದ ಸೂಪರ್‌ ಸ್ಟಾರ್‌ ಮಾತ್ರವಲ್ಲ. ಆಕಾಶದಲ್ಲಿನ ಹೊಳೆಯುವ ನಕ್ಷತ್ರ. ಡಾ. ರಾಜ್‌ಕುಮಾರ್‌ ಅವರು ಶಿಕ್ಷಣದ ಬಗ್ಗೆ ಹೊಂದಿದ್ದಕನಸನ್ನು ಅವರಕುಟುಂಬ ಸಾಕಾರ ಮಾಡುತ್ತಿರುವುದು ಶ್ಲಾಘನೀಯ.
-ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next