ಕನ್ನಡ ಚಿತ್ರರಂಗದ ಧ್ರುವತಾರೆ, ನಟ ಸಾರ್ವಭೌಮ, ವರನಟ ಡಾ. ರಾಜಕುಮಾರ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಇಂದು ನಡೆಯಲಿದೆ. ಇನ್ನು ಕಳೆದ ಬಾರಿಯಂತೆ ಈ ವರ್ಷವೂ ಕೊರೋನಾ ಎರಡನೇ ಅಲೆಯ ಆತಂಕ
ಮುಂದುವರೆದಿರುವುದರಿಂದ, ಡಾ. ರಾಜ್ ಕುಟುಂಬ ಮತ್ತು ಅಭಿಮಾನಿಗಳು ಅತ್ಯಂತ ಸರಳವಾಗಿ ವರನಟನ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜಕುಮಾರ್ ಅವರ ಪುಣ್ಯಭೂಮಿಕೆ ಡಾ. ರಾಜ್ ಕುಟುಂಬ ಮತ್ತು ಅಭಿಮಾನಿಗಳು ಆಗಮಿಸಲಿದ್ದು, ಪುಷ್ಪ ನಮನ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ನೈಟ್ ವಾಚ್‌ಮನ್ ಈಗ ಐಐಎಂ ಅಸಿಸ್ಟೆಂಟ್ ಪ್ರೊಫೆಸರ್!
ಇನ್ನು ಡಾ. ರಾಜಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ, ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳು ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಉಚಿತ ಔಷಧಿ ವಿತರಣೆ, ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಹೀಗೆ ಒಂದಷ್ಟು ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿರುವ ಡಾ. ರಾಜಕುಮಾರ್ ಅವರ ಪುತ್ಥಳಿಗಳಿಗೆ ಪುಷ್ಪಾಲಂಕಾರ ನಡೆಯಲಿದ್ದು, ಅಭಿಮಾನಿಗಳು ಸರಳವಾಗಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.