Advertisement

ಪರಭಾಷಾ ಸ್ಟಾರ್ಸ್ಗೂ ಅಣ್ಣಾವ್ರು ಎಂದರೆ ಅಚ್ಚುಮೆಚ್ಚು

05:02 PM Apr 20, 2021 | Team Udayavani |

ಡಾ.ರಾಜ್‌ಕುಮಾರ್‌ ಎಲ್ಲಾ ಭಾಷೆಯ ಚಿತ್ರರಂಗದ ಪ್ರೀತಿ, ಸ್ನೇಹ ಗಳಿಸಿದ್ದರು. ಅದಕ್ಕೆ ಕಾರಣ ರಾಜ್‌ ಅವರ ವಿನಯ ಹಾಗೂ ವ್ಯಕ್ತಿತ್ವ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಂದಿನ ಸ್ಟಾರ್‌ನಟರಾಗಿದ್ದ ಎಂ.ಜಿ.ಆರ್‌, ಎನ್‌.ಟಿ.ಆರ್‌. ಶಿವಾಜಿ ಗಣೇಶನ್‌..

Advertisement

ಹೀಗೆ ಎಲ್ಲರೂ ರಾಜ್‌ ಅವರನ್ನು ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ರಾಜ್‌ ಅವರಿಗೆ ಆ ನಟರು ಯಾವ ಮಟ್ಟಿಗೆ ಗೌರವ ಕೊಡುತ್ತಿದ್ದರು ಎಂಬುದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ. ಅದೊಂದು ಬಾರಿ ಮದರಾಸಿನ ಹೋಟೆಲ್‌ವೊಂದರಲ್ಲಿ ರಾಜ್‌ಕುಮಾರ್‌ ಅವರನ್ನು ಭೇಟಿಯಾದ ಎಂ.ಜಿ.ಆರ್‌ ತುಂಬಾ ಹೊತ್ತು ಮಾತ ನಾಡಿದ್ದರು. ಆದರೆ, ಹೊರಗಡೆ ಎಂ.ಜಿ.ಆರ್‌ ಅವರನ್ನು ಭೇಟಿ ಮಾಡಲು ಸಾಕಷ್ಟು ಮಂದಿ ಕಾಯುತ್ತಿದ್ದರು. ಇದನ್ನರಿತ ರಾಜ್‌ಕುಮಾರ್‌, “ನಾನು ಇನ್ನು ಹೊರಡುತ್ತೇನೆ, ನಿಮ್ಮನ್ನು ಭೇಟಿ ಮಾಡಲು ತುಂಬಾ ಮಂದಿ ಕಾಯುತ್ತಿದ್ದಾರೆ’ ಎಂದರಂತೆ. ಇದಕ್ಕೆ ಉತ್ತರಿಸಿದ ಎಂ.ಜಿ.ಆರ್‌, “ಅವರಿಗೆಲ್ಲಾ ನನ್ನ ಬಳಿಕೆಲಸವಿದೆ. ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ ನನಗೆ ನಿಮ್ಮ ಬಳಿ ಕೆಲಸ ಇದೆ’ ಎನ್ನುವ ಮೂಲಕ ರಾಜ್‌ಕುಮಾರ್‌ ಮೇಲಿನ ಅಭಿಮಾನ ಪ್ರದರ್ಶಿಸಿದರಂತೆ.

ಇದು ಒಂದು ಉದಾಹರಣೆಯಾದರೆ ,ಅದೊಂದು ದಿನ ಹೈದರಾಬಾದ್‌ಗೆಬಂದಿದ್ದ ರಾಜ್‌ಕುಮಾರ್‌ ಅವರನ್ನು ಎನ್‌.ಟಿ.ಆರ್‌ ರಾತ್ರಿ ಊಟಕ್ಕೆ ತಮ್ಮ ಮನೆಗೆ ಆಹ್ವಾನಿಸಿದ್ದರಂತೆ. ಆದರೆ, ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ರಾಜ್‌ಕುಮಾರ್‌ ತಡವಾಗುತ್ತಿರುವುದನ್ನು ಅರಿತು, ಎನ್‌.ಟಿ.ಆರ್‌ಅವರಿಗೆ, “ನಾನು ಬರೋದು ತಡವಾಗಬಹುದು, ನೀವುಊಟ ಮುಗಿಸಿ’ ಎಂದು ಸಂದೇಶ ಕಳುಹಿಸಿದರಂತೆ. ಆನಂತರ ರಾತ್ರಿ 11 ಗಂಟೆಗೆ ರಾಜ್‌ಕುಮಾರ್‌ ,ಎನ್‌.ಟಿ.ಆರ್‌ಅವರ ಮನೆಗೆ ಹೋಗುವಾಗಲೂ ಎನ್‌.ಟಿ.ಆರ್‌ ಅವರು ಊಟ ಮಾಡದೇ ರಾಜ್‌ಗಾಗಿ ಎದುರು ನೋಡುತ್ತಿದ್ದರಂತೆ.

Advertisement

Udayavani is now on Telegram. Click here to join our channel and stay updated with the latest news.

Next