Advertisement

ಸಂದರ್ಭಾನುಸಾರ ಆಯಾ ವೈದ್ಯಪದ್ಧತಿಗಳಿಗೆ ಮಹತ್ವ : ಡಾ|ಆರ್‌.ಶ್ರೀಪತಿ

03:32 AM Jun 06, 2021 | Team Udayavani |

ಉಡುಪಿ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಕ್ರಮ, ಭಾರತೀಯ ಪದ್ಧತಿಯ ಕ್ರಮ ಉಪಯುಕ್ತ. ಆಮ್ಲಜನಕದ ಪ್ರಮಾಣ ಕಡಿಮೆ ಇರುವಾಗ ಆಧುನಿಕ ಪದ್ಧತಿ ಕ್ರಮ ಉಪಯುಕ್ತ ಎಂದು ಆಯುರ್ವೇದ ಮತ್ತು ಅಲೋಪತಿ ಎರಡೂ ಪದ್ಧತಿಗಳಲ್ಲಿ ಸ್ನಾತ ಕೋತ್ತರ ಪದವಿ ಗಳಿಸಿ ಚಿಕಿತ್ಸೆ ನೀಡುತ್ತಿರುವ ನಗರದ ಡಾ| ಆರ್‌.ಶ್ರೀಪತಿ ಹೇಳಿದರು.
“ಉದಯವಾಣಿ’ ಶನಿವಾರ “ಕೊರೊನಾ ನಿರ್ವಹಣೆ: ಆಯುರ್ವೇದ ಮತ್ತು ಅಲೋಪತಿ ವೈದ್ಯ ಪದ್ಧತಿಗಳ ಆನ್ವಯಿಕತೆ’ ಬಗ್ಗೆ ಆಯೋಜಿಸಿದ್ದ ಫೋನ್‌ ಇನ್‌ ನಲ್ಲಿ ಅವರು ಮಾತನಾಡಿದರು.

Advertisement

ಕೊರೊನಾ ವೈರಾಣು ಸೋಂಕು ಶೇ.85 ಜನರಲ್ಲಿ ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರಿದರೆ, ಶೇ. 15 ಮಂದಿಯಲ್ಲಿ ಗಂಭೀರ ಪರಿಣಾಮ ಬೀರುತ್ತಿದೆ. ಕೊರೊನಾದಿಂದ ಮುಕ್ತವಾಗಿ ವೈರಸ್‌ ಇಲ್ಲದಿದ್ದರೂ 4 ವಾರಗಳ ಬಳಿಕ ಶೇ.60 ಜನರಿಗೆ ಕೊರೊನೋತ್ತರ ಪರಿ ಣಾಮವಾಗಿ ಉದ್ವೇಗ, ಒಣ ಕೆಮ್ಮು, ಎದೆ ಬಡಿತ ಜಾಸ್ತಿಯಾಗುವು ದು, ನಿದ್ರಾ ಹೀನತೆ ಇತ್ಯಾದಿ ಇರುತ್ತವೆ. ಗಂಭೀರ ಪರಿ ಣಾಮವಿದ್ದಾಗ ಜೀವ ಉಳಿಸಲು ಆಸ್ಪತ್ರೆಗೆ ದಾಖ ಲಾಗಬೇಕು. ಆಮ್ಲಜನಕ ಕಡಿಮೆ ಯಾದಾಗ ಎಷ್ಟು ಪ್ರಮಾ ಣದಲ್ಲಿ ಕೊಡಬೇಕು ಎಂದು ಅಲೋಪತಿ ಪದ್ಧತಿ ಯಲ್ಲೇ ನಿರ್ಧರಿಸಬೇಕು ಎಂದರು.

ಲಸಿಕೆ ತೆಗೆದುಕೊಳ್ಳಿ
ಎಲ್ಲರೂ ಲಸಿಕೆಯನ್ನು ಪಡೆದು ಕೊಳ್ಳಬೇಕು. ಒಂದು ಬಾರಿ ಸೋಂಕು ಬಂದರೆ ಒಂದು ವಾರದಲ್ಲಿ ನಮ್ಮ ದೇಹವೇ ವೈರಾಣುವನ್ನು ಕೊಲ್ಲುತ್ತದೆ. ಆದರೆ ಈ ಕೊರೊನಾ ವೈರಾಣು ಅಸ್ವಾಭಾವಿಕವಾಗಿ ವರ್ತಿಸುತ್ತಿದೆ. ಸೋಂಕು ಬಂದ ಬಳಿಕವೂ ಲಸಿಕೆ ಪಡೆದರೆ ಸಮಸ್ಯೆಯಿಲ್ಲ. ಲಸಿಕೆಯು ದೇಹದಲ್ಲಿ ಆ್ಯಂಟಿಜೆನ್‌ ಸೃಷ್ಟಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ತ್ತದೆ. ಲಸಿಕೆ ಪಡೆದ ಬಳಿಕ ಸಣ್ಣ ಅಡ್ಡ ಪರಿಣಾಮಕ್ಕೆ ಆತಂಕ ಬೇಡ. ದೇಹದಲ್ಲಿ ರೋಗ ನಿರೋ ಧಕ ಶಕ್ತಿ ಜಾಗೃತ ಎಂದರ್ಥ.
ಜ್ವರ ಬಂದಾಗ ಹೊಟ್ಟೆ ತುಂಬ ತಿನ್ನಬಾರದು. ಲಘು ವಾದ ಆಹಾರ (ಗಂಜಿ, ತಿಳಿ ಸಾರು)ವನ್ನು ಮಿತ ಪ್ರಮಾಣದಲ್ಲಿ ಮತ್ತು ಉಷ್ಣ ಜಲ ಸ್ವೀಕರಿಸ ಬೇಕು. ಕರಿದ ತಿಂಡಿ ತಿನ್ನ ಬಾರದು. ಮುಖ್ಯ ವಾಗಿ ವಿಶ್ರಾಂತಿ ಬೇಕು. ಅತಿ ಶ್ರಮ ಪಟ್ಟರೆ ಪಕ್ಷವಾತ, ಹೃದಯಾಘಾತ ಸಂಭವಿಸೀತು.

ಏಕಕಾಲದಲ್ಲಿ ಅಲೋಪತಿ, ಆಯುರ್ವೇದ: ಅಡ್ಡ ಪರಿಣಾಮವಿಲ್ಲ
ನನ್ನ ತಂದೆ ಡಾ|ಆರ್‌.ಆರ್‌.ಭಟ್‌ 1973 ರಿಂದ ಅಲೋಪತಿ ಮತ್ತು ಆಯುರ್ವೇದ ಔಷಧಗಳನ್ನು ರೋಗಿಗಳಿಗೆ ಸಂದರ್ಭಾನುಸಾರ ನೀಡುತ್ತಿದ್ದರು. ನಾನು ಮುಂದು ವರಿಸಿದ್ದೇನೆ. ಅಡ್ಡ ಪರಿಣಾಮ ಬೀರಿದ ಉದಾಹರಣೆಗಳಿಲ್ಲ. ಅಲೋ ಪತಿ ಔಷಧ ಶುದ್ಧ ರಾಸಾಯನಿಕಗ ಳಿಂದ ಮಾಡಿರುವುದು, ಆಯುರ್ವೇದ ಔಷಧ ನೈಸರ್ಗಿಕವಾಗಿ ಮಾಡಿರುವುದು. ಅಂದರೆ ಆಹಾರವಿದ್ದಂತೆ. ಆಹಾ ರದ ಜತೆ ಅಲೋಪತಿ ಔಷಧ ಅಡ್ಡ ಪರಿಣಾಮ ಬೀರಿದೆಯೆ? ಅದೇ ನೀತಿ ಔಷಧಕ್ಕೂ ಅನ್ವಯ ಎಂದರು.

ಎಂಜಿನಿಯರ್ಡ್ ವೈರಸ್‌ ಶಂಕೆ
ಸಾಮಾನ್ಯವಾಗಿ ವೈರಸ್‌ಗಳು ಕೆಲವು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಂಡಿರುತ್ತವೆ. ಮಂಗನ ಕಾಯಿಲೆ (ಕೆಎಫ್ಡಿ) ವೈರಸ್‌ ಶಿವ ಮೊಗ್ಗದಲ್ಲಿ ಮಾತ್ರ ಇದೆ, ನಿಫಾ ವೈರಸ್‌ ಸಹ ಹಾಗೆಯೇ ಕೇರಳದಲ್ಲಿ ಹೆಚ್ಚಿತ್ತು. ಕೊರೊನಾ ವೈರಸ್‌ ಎಲ್ಲ ಖಂಡ, ಸೆಕೆ, ಚಳಿ, ಮಳೆ ಪ್ರದೇಶ ದಲ್ಲೂ ಇದೆ. ಹಾಗಾಗಿ ಇದು ಕೃತಕ ಸೃಷ್ಟಿ ಎನಿಸು ತ್ತಿದೆ. ಅದರ ಮೂಲ (ಪೂರ್ವಜರು) ಇನ್ನೂ ತಿಳಿದಿಲ್ಲ. ಇದು ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಶಂಕೆ ಕಂಡರೆ ಹೊಸ ಅವ ತಾರ ಇನ್ನಷ್ಟು ಭೀಕರ ವಾಗಬಹುದೇನೋ ಎಂದೆನಿಸುತ್ತಿದೆ.

Advertisement

ಸರಳ ಶ್ವಾಸೋಚ್ಛಾಸ ಕ್ರಮ
ಮೂಗಿನಿಂದ ನಿಧಾನವಾಗಿ ಗಾಳಿಯನ್ನು ಸ್ವೀಕರಿಸಿ ಬಾಯಿಯಿಂದ ಬಿಡುವುದು, ಅಂಗಾತ ಮಲಗಿಕೊಂಡು ನಾಭಿ (ಹೊಕ್ಕಳು) ಮೇಲೆ ಕೈ ಇರಿಸಿ ಶ್ವಾಸೋಚ್ಛಾ$Ìಸ ನಡೆಸುವುದು, ಕವುಚಿ ಮಲಗಿ (ಮಕರಾಸನ ಶೈಲಿ) ಉಸಿರು ತೆಗೆದು ಕೊಂಡು ಬಿಡುವ ಕ್ರಮ ಅನುಸರಿಸಬಹುದು.

ರೋಗನಿರೋಧಕ ಹೆಚ್ಚಳ ದಿಢೀರ್‌ ಆಗದು
ಮನೆಮದ್ದು, ಆಯುರ್ವೇದ ಕಷಾಯ ಸೇವಿಸಿ ದರೆ ರೋಗನಿರೋಧಕ ಶಕ್ತಿ ಹೆಚ್ಚುವುದು ನಿಜ. ಆದರೆ ಒಂದೆರಡು ದಿನ/ ವಾರ ಸಾಲದು. ಕನಿಷ್ಠ ಆರು ತಿಂಗಳು ಸೇವಿಸಬೇಕು. ಅಶ್ವಗಂಧ, ತುಳಸಿ, ಅರಶಿನ, ಬೇವು, ನೆಲನೆಲ್ಲಿ, ಆಮಲಕಿ, ಭದ್ರಮುಷ್ಟಿ, ಅಮೃತಬಳ್ಳಿ (ಕಾಂಡ ಉತ್ತಮ) ಇಂತಹ ಮೂಲಿಕೆ ಗಳನ್ನು ಸಾಧ್ಯವಾದರೆ ಸಮೂಲ ವಾಗಿ (ಬೇರು ಸಹಿತ) ನಾಲ್ಕು ಲೋಟ ನೀರಿನಲ್ಲಿ ಕುದಿಸಿ ಒಂದು ಲೋಟಕ್ಕೆ ಇಳಿಸಿದ ಬಳಿಕ ಬೆಳಗ್ಗೆ ಮತ್ತು ರಾತ್ರಿ ಸ್ವೀಕರಿಸಬಹುದು. ಬಹು ಹಿಂದಿ ನಿಂದ ಇಂತಹ ಅಭ್ಯಾಸವಿದ್ದರೆ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಬೇಡಿಕೆ ಹೆಚ್ಚಾದಾಗ ಗುಣಮಟ್ಟ ಕಡಿಮೆ ಆಗುತ್ತದೆ. ಆದ್ದರಿಂದ ಅರಶಿನ ಇತ್ಯಾದಿಗಳನ್ನು ಪಡೆಯುವಾಗ ಜಾಗರೂಕತೆ ಬೇಕು.

ಈ ಮೂಲಿಕೆಗಳನ್ನು ಸಮಗ್ರವಾಗಿ ಸೇವಿಸುವುದಕ್ಕೂ ಇದರ ರಾಸಾಯನಿಕ ಅಂಶಗಳುಳ್ಳ ಗುಳಿಗೆ ಸೇವ ನೆಗೂ ವ್ಯತ್ಯಾಸವಿದೆ. ಗುಳಿಗೆ ಮಾಡಿದರೆ ಅದು ಆಧುನಿಕ ಫಾರ್ಮಾಕಾಲಜಿ. ಆದರೂ ಆಯು ರ್ವೇದ ಮಾತ್ರೆ ಎನಿಸಿಕೊಳ್ಳುತ್ತದೆ. ಆದರೆ ಇದರ ಕಚ್ಚಾ ಸಾಮಗ್ರಿಯಲ್ಲಿದ್ದ ಇನ್ನಿತರ ಗುಣಗಳ ಪ್ರಯೋಜನ ಸಿಗದು. ಚ್ಯವನಪ್ರಾಶ ಸೇವನೆಗೂ ಒಂದು ಕ್ರಮವಿದೆ. ರಾತ್ರಿ ಊಟದ ಬಳಿಕ ಅದನ್ನು ಸೇವಿಸಿ ಹಾಲು ಕುಡಿದರೆ ಲಾಭವಿಲ್ಲ. ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರಿನಲ್ಲಿ ಸೇವಿಸಿದರೆ ಲಾಭ. ಈಗ ಸಾವಿರ ಕಂಪೆನಿಗಳಿವೆ. ಇವುಗಳಿಗೆ ಬೇಕಾದಷ್ಟು ಬೆಟ್ಟದ ನೆಲ್ಲಿ. ಸಿಗುವುದಿಲ್ಲ,. ಆದ್ದರಿಂದ ಗೆಣಸಿನ ಪಲ್ಪ್ ಹಾಕುತ್ತಾರೆ. ಇಂತಹ ಚ್ಯವನಪ್ರಾಶ್‌ ಪ್ರಯೋಜನವಿಲ್ಲ.

ರೋಹಿಣಿ, ದೊಡ್ಡಣಗುಡ್ಡೆ, ಚಂದ್ರಶೇಖರ್‌ ಗಂಗಾವತಿ
– ಅಲರ್ಜಿ ಸಮಸ್ಯೆ, ನೆಗಡಿ, ಜ್ವರ ಇದ್ದರೆ ಲಸಿಕೆ ಪಡೆಯಬಹುದೇ?
-ತೆಗೆದುಕೊಳ್ಳಬಹುದು. ಲಸಿಕೆಯಿಂದ ಅಲರ್ಜಿ ಸಮಸ್ಯೆ ಹೆಚ್ಚಳವಾಗುವುದಿಲ್ಲ. ಕೊರೊನಾ ಸೋಂಕು ಬಂದವರಿಗೆ ವಿವಿಧ ಕಾರಣಗಳಿಂದ ರೋಗನಿರೋಧಕ ಶಕ್ತಿ ಕಡಿಮೆ ಯಾಗುತ್ತದೆ. ಲಸಿಕೆ ತೆಗೆದುಕೊಳ್ಳುವುದು ಉತ್ತಮ.

ರಮಾದೇವಿ, ಸಸಿಹಿತ್ಲು

– ಕೊರೊನಾ ಬಂದು ಗುಣಮುಖವಾಗಿ 42 ದಿನಗಳಾದವು. ಆ ವೈರಾಣು ನಮ್ಮ ದೇಹದಲ್ಲಿ ಎಷ್ಟು ದಿನ ಇರುತ್ತದೆ?
-42 ದಿನಗಳಾದ ಆದ ಕಾರಣ ಯಾವುದೇ ತೊಂದರೆ ಇಲ್ಲ. 2ರಿಂದ 4 ವಾರಗಳ ಕಾಲ ಪರಿಣಾಮ ಇರುತ್ತದೆ. ಮಧುಮೇಹ ಇಲ್ಲದವರು ಹಣ್ಣುಗಳನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ. ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಲಸಿಕೆ ಒಂದನೇ ಡೋಸ್‌ ಪಡೆದ ಬಳಿಕ ಪಾಸಿ ಟಿವ್‌ ಬಂದರೆ 12 ವಾರ ಬಿಟ್ಟು ಲಸಿಕೆ ಪಡೆಯಬಹುದು.

ಹಮೀದ್‌, ವಿಟ್ಲ

– ಬಿ.ಪಿ., ಸಕ್ಕರೆ ಕಾಯಿಲೆ ಇರುವವರು ಲಸಿಕೆ ಪಡೆಯಬಹುದೇ?
-ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲ.

ಗಣೇಶ್‌, ಮಂಗಳೂರು
– ಎಸಿಮrಮ್ಯಾಟಿಕ್‌ ಆಗಿದ್ದು, ಪಾಸಿಟಿವ್‌ ಬಂದವರಿಗೆ ಗುಣ ಮುಖ ಆಗಿರುವುದು ಹೇಗೆ ತಿಳಿಯುತ್ತದೆ?
-ಕೊರೊನಾ ಲಸಿಕೆ ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಗಂಟಲ ದ್ರವ ಪರೀಕ್ಷೆ ಅಗತ್ಯ.

ಪ್ರಕಾಶ್‌, ಮರವಂತೆ
– ಕೊರೊನಾ ನಿರ್ವಹಣೆಯಲ್ಲಿ ಆಯುರ್ವೇದ ಪದ್ಧತಿ ನಿಧಾನ; ಆಲೋಪತಿ ಶೀಘ್ರ ಎಂಬುದು ನಿಜವೇ?
-ವೈದ್ಯರಲ್ಲಿಗೆ ರೋಗಿ ಯಾವ ಸ್ಥಿತಿಯಲ್ಲಿ ಬರುತ್ತಾನೆ ಎಂಬುದು ಮುಖ್ಯ. ಶೇ.85 ರಷ್ಟು ಮಂದಿಗೆ ಎಲ್ಲವೂ ಸಾಮಾನ್ಯ ಆಗಿರುತ್ತದೆ. ಈ ಹೊತ್ತಿನಲ್ಲಿ ಆಯುರ್ವೇದ ಬಳಸಬಹು ದು. ಆಮ್ಲಜನಕದ ಆವಶ್ಯಕತೆ ಇರುವವರಿಗೆ ಆಲೋಪತಿ ಚಿಕಿತ್ಸೆ ಅಗತ್ಯ. 4 ವಾರ ಕಳೆದ ಅನಂತರವೂ ಶೇ.60ರಷ್ಟು ಮಂದಿಗೆ ನಿತ್ರಾಣ, ನಿದ್ದೆ ಬಾರದಿರುವುದು, ಒಣಕೆಮ್ಮು ಸಮಸ್ಯೆ ಇದ್ದೀತು. ಆಗ ಮೊದಲಿನಿಂದಲೂ ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಿದ್ದರೆ ಅದನ್ನೇ ಮುಂದುವರಿಸಿ.

ಶರಣ್ಯಾ ಬಾಲಚಂದ್ರ, ಕರಂಬಳ್ಳಿ
– ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಏನು ಮಾಡಬೇಕು?
-ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾನಾ ವಿಧಾನಗಳಿವೆ. ಶುದ್ಧ ಚ್ಯವನಪ್ರಾಶವನ್ನು ದಿನಾ ಬೆಳಗ್ಗೆ ಎದ್ದು ಬರೀ ಹೊಟ್ಟೆಯಲ್ಲಿ ಬಿಸಿನೀರಿನೊಂದಿಗೆ ಒಂದು ಚಮಚದಷ್ಟು ಸೇವಿಸಬೇಕು.

ಅಬೂಬಕ್ಕರ್‌, ನೀಲಕಟ್ಟೆ, ಉಮೇಶ್‌, ಕುಂದಾಪುರ, ರಚನಾ, ಪುತ್ತೂರು
– ಕೆಲವು ಸೋಂಕಿತರು ಹಳ್ಳಿಮದ್ದು ಮಾಡಿ ಮನೆಯಲ್ಲಿದ್ದರೆ ಮತ್ತೆ ಕೆಲವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಸರಿಯೇ?
-ಶೇ.85ರಷ್ಟು ಮಂದಿಯಲ್ಲಿ ಯಾವುದೇ ಸೋಂಕು ಲಕ್ಷಣ ಇರುವುದಿಲ್ಲ. ಶೇ.15ರಷ್ಟು ಮಂದಿಗೆ ಮತ್ತು ಶೇ.5ರಷ್ಟು ಆಕ್ಸಿಜನ್‌ ಅಗತ್ಯ ವಿರುವವರಿಗೆ ಆಸ್ಪತ್ರೆ ಸೌಲಭ್ಯ (ಅಲೋಪತಿ ಪದ್ಧತಿ) ಬೇಕು. ಉಳಿದವರು ಮನೆಮದ್ದು, ಆಯುರ್ವೇದ ಔಷಧ ಸ್ವೀಕರಿಸಬಹುದು. ರೋಗಿಯೊಬ್ಬ ಈ ಎರಡರಲ್ಲಿ ಯಾವ ಗುಂಪಿಗೆ ಸೇರುತ್ತಾನೆ ಎಂಬುದು ಮುಖ್ಯ.

ಸಹನಾ, ಸುಲೋಚನಿ ಉಡುಪಿ
– ಲಸಿಕೆ ಪಡೆದು 2 ದಿನವಾಯಿತು. ಸುಸ್ತು, ವಾಂತಿ ಸಮಸ್ಯೆ?

-ಲಸಿಕೆ ನಿಮ್ಮ ದೇಹದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಅರ್ಥ. ಈ ಸಮಸ್ಯೆ ಮುಂದುವರಿದರೆ ಸಾಮಾನ್ಯ ಜ್ವರ ಮಾತ್ರೆ ಅಥವಾ ಅಮೃತಬಳ್ಳಿ ಕಷಾಯ ಸೇವಿಸಬಹುದು.

ದಾಮೋದರ್‌, ಮೂಡುಬೆಳ್ಳೆ
– ಜ್ವರ, ತಲೆನೋವು, ಯಾವುದರ ಲಕ್ಷಣ?
-ಒಮ್ಮೆ ಸ್ವಾಬ್‌ ಪರೀಕ್ಷೆ ಮಾಡಿಸಿಕೊಳ್ಳಿ. ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಉಚಿತವಾಗಿ ಮಾಡುತ್ತಾರೆ.

ಕಾವ್ಯಾ, ಹುಬ್ಬಳ್ಳಿ, ಚಿದಾನಂದ್‌, ಸೌಮ್ಯಾ ಮಂಗಳೂರು
– ಕೊರೊನಾ ಬಂದು 15-20 ದಿನ ಉಸಿರಾಟದ ಸಮಸ್ಯೆ ಯಿದ್ದರೆ ಆಯುರ್ವೇದಿಕ್‌ ಔಷಧ ತೆಗೆದುಕೊಳ್ಳಬಹುದೇ?
-ಇಂಗ್ಲಿಷ್‌ ಔಷಧ ತೆಗೆದುಕೊಳ್ಳುವವರೂ ಆಯುರ್ವೇದಿಕ್‌ ಔಷಧ ಸೇವಿಸಬಹುದು ಎಂಬುದು ನನ್ನ ಅಭಿಪ್ರಾಯ.

ಭಾಸ್ಕರ ಶೆಟ್ಟಿ, ಬ್ರಹ್ಮಾವರ
– ಬೆಳಗ್ಗೆ 20-25 ಸೀನು ಬರುತ್ತದೆ ಇದಕ್ಕೆ ಕಾರಣ?
-ಅಲರ್ಜಿ ಸಮಸ್ಯೆ. ವೈದ್ಯರಲ್ಲಿ ಪರೀಕ್ಷಿಸುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next