Advertisement

ಡಾ|ಪಿ.ಬಿ.ಗವಾನಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

05:53 PM May 22, 2018 | |

ಮುಂಬಯಿ: ಚಿತ್ರ ಕಲಾವಿದ ಡಾ| ಪಿ. ಬಿ. ಗವಾನಿ ಅವರ 18ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಲು ಮೇ 19 ರಂದು ಫೋರ್ಟ್‌ 148 ಮಹಾತ್ಮಾ ಗಾಂಧಿ  ರೋಡ್‌ನ‌ ದಿ ಆರ್ಮಿ ಆ್ಯಂಡ್‌ ನೇವಿ ಬಿಲ್ಡಿಂಗ್‌ನಲ್ಲಿರುವ ದಿ ಆರ್ಟ್‌ ಎಂಟ್ರೆನ್ಸ್‌ ಗ್ಯಾಲರಿಯಲ್ಲಿ ಮೇ 25 ರವರೆಗೆ ನಡೆಯಲಿದೆ.

Advertisement

ನಗರದ ಪ್ರಸಿದ್ಧ ಕಲಾವಿದ ರಮೇಶ್‌ ಪಾಚಪಂಡೆ ಅವರು ಚಿತ್ರಕಲಾ ಪ್ರದರ್ಶನಕ್ಕೆ ದೀಪಪ್ರಜ್ವಲಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಇದರ ಸದಸ್ಯ ಚಕ್‌ಮs… ಎಫ್‌. ವಿ. ಇವರು ಉಪಸ್ಥಿತರಿದ್ದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಂಬಯಿ ಆರ್ಟ್‌ ಲ್ಯಾಂಡ್‌ ನಿರ್ದೇಶಕರಾದ ಸುನೀಲ್‌ ಚವಾಣ್‌,  ಕರ್ನಾಟಕದ ಖ್ಯಾತ ಕಲಾವಿದರಾದ ಕಿಶೋರ್‌ ಕುಮಾರ್‌, ಚಂದ್ರಕೀರ್ತಿ, ಅಮೆರಿಕಾದ ಖ್ಯಾತ ಕಲಾ ಸಂಗ್ರಹಕಾರ್ತಿ ಅಲಮಾಸ್‌ ಮುಸ್ಕಾತಲ್ವಾ ಹಾಜರಿದ್ದು ಡಾ| ಪಿ. ಬಿ. ಗವಾನಿಯವರ ಕಲಾಕೃತಿಗಳನ್ನು ಪ್ರಶಂಸಿಸಿದರು. ಅಲ್ಲದೆ ಮುಂತಾದ ದೇಶ ವಿದೇಶ‌ಗಳ ಅನೇಕ ಕಲಾ ಪ್ರೇಮಿಗಳು ಇವರ ಕಲಾ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಜೀವನದ ಅನೇಕ ದೃಶ್ಯಗಳು ಡಾ| ಪಿ. ಬಿ. ಗವಾನಿಯವರ ಕಲಾ ಕೃತಿಗಳ ವಸ್ತುಗಳಾಗಿವೆ. ಹಳ್ಳಿಗರ ಜೀವನ ಶೈಲಿ, ಆರೋಗ್ಯದ ಕಡೆಗೆ ಅವರು ಕೋಡುವ ಮಹತ್ವ, ಹಣ್ಣು ಹಂಪಲಗಳ ಬಳಕೆ, ಅಲೋವೆರಾ ಮುಂತಾದ ಗಿಡಮೂಲಿಕೆಗಳನ್ನು ಜನಪದ ವೈದ್ಯ ಪದ್ಧತಿಯಲ್ಲಿ ತಮ್ಮ ಆರೋಗ್ಯವನ್ನು ಕಂಡುಕೊಂಡ ಗ್ರಾಮೀಣ ಜನರ ಬದುಕು, ಜೀವನದ ಪ್ರತಿ ಕೆಲಸಗಳನ್ನು ಮಾಡುವಾಗಲೂ ಪಂಚಾಂಗವನ್ನು ನೋಡುವುದು, ಒಳ್ಳೆಯ ಮೂಹೂರ್ತಕ್ಕಾಗಿ ಹುಡುಕಾಡುವುದು, ಶುಭ ಮೂಹೂರ್ತದಲ್ಲಿ ಕೆಲಸಗಳನ್ನು ಪ್ರಾರಂಭಿಸುವದು  ಗ್ರಾಮೀಣ  ಜನತೆಯ ಬದುಕಿನ ಭಾಗವಾಗಿದೆ. ಹೀಗಾಗಿ ಅವರ ಕಲಾಕೃತಿಗಳಲ್ಲಿ ಪಂಚಾಂಗ, ಗೋಡೆ ಗಡಿಯಾರ, ಹಣ್ಣುಹಂಪಲುಗಳು, ಅಲೋವೇರಾ ಸಸ್ಯಗಳನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ.

ಅಕ್ರೇಲಿಕ್‌ ಬಣ್ಣವನ್ನು ಬುರುಗು ಬುರುಗಾಗಿ ಕಲಾಕೃತಿಯ ತಂತ್ರವಾಗಿಸಿಕೊಂಡು ತಮ್ಮದೆ ಆದ ಬುರುಗು ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತಂತ್ರದಲ್ಲಿಯ ಮೈವಳಿಕೆ, ಬಣ್ಣಗಳ ಬಳಕೆ ಅವರಿಗೆ ಖುಷಿ ನೀಡಿದೆ. ಹೀಗಾಗಿ ಈ ಮೈವಳಿಕೆ, ತಂತ್ರ ಅವರ ಕಲಾಕೃತಿಗಳ ವೈಶಿಷ್ಟÂವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next