Advertisement

2020ರ ಸಾಲಿನ ಡಾ|ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪುರಸ್ಕಾರದ ಗರಿ

12:25 AM Mar 05, 2020 | sudhir |

ಬದಿಯಡ್ಕ: ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳು ಹತ್ತು ಹಲವು ಸಮಸ್ಯೆಗಳ ನಡುವೆಯೂ ಎದುರಿಸಿ ತಮ್ಮ ಅಸ್ತಿತ್ವವನ್ನು ಗಟ್ಟಿ ಗೊಳಿಸುವ ಪ್ರಯತ್ನದಲ್ಲಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಯೊಂದು ತನ್ನ ನಿರಂತರ, ಮಾದರಿ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶದ ಉತ್ತಮ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವುದು ಸಕಾಲಿಕ ಹಾಗೂ ಶ್ಲಾಘನೀಯ.

Advertisement

ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೊಡಮಾಡುವ 2020ನೇ ಸಾಲಿನ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಶಸ್ತಿಪ್ರದಾನ ಸಮಾರಂಭವು ಮಂಗಳೂರು ದೇರಳೆಕಟ್ಟೆ ಕೆ.ಎಸ್‌.ಹೆಗ್ಡೆ ಸಭಾಂಗಣದಲ್ಲಿ ಜರಗಿದ್ದು, ಪೆರಡಾಲ ನವಜೀವನ ಶಾಲೆಗೆ ಶ್ರೇಷ್ಠ ಶಾಲೆ 2020 ಪ್ರಶಸ್ತಿಯನ್ನು ನೀಡಲಾಗಿದೆ. ಶಾಲಾ ಅಧಿಕೃತರಿಗೆ ಪ್ರಶಸ್ತಿ ಪತ್ರ ಹಾಗೂ 3 ಲಕ್ಷ ರೂಪಾಯಿಯನ್ನು ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು. 2019-20ರ ಸಾಲಿನ ಪ್ರಶಸ್ತಿ ಆಯ್ಕೆಗಾಗಿ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಅರ್ಹ ಶಾಲೆಗಳಿಗೆ ತೆರಳಿ ಮೌಲ್ಯ ಮಾಪನ ಮಾಡಲಾಗಿತ್ತು. ಶೆ„ಕ್ಷಣಿಕ ಕ್ಷೇತ್ರದಲ್ಲಿ ಸತತ ನೂರು ಶೇಕಡಾ ಫಲಿತಾಂಶವನ್ನು ಪಡೆಯುತ್ತಿರುವ ಬದಿಯಡ್ಕದ ನವಜೀವನ ಪ್ರೌಢ ಶಾಲೆ ಪೆರಡಾಲ ಕಲಿಕೆಯೊಂದಿಗೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೂ ಒಲವು ತೋರಿ ಸಾಧನೆಯ ಹಾದಿಯಲ್ಲಿ ಸಾಗಿ ವಿಶೇಷವಾದ ಗೌರವಕ್ಕೆ ಭಾಜನವಾಗಿದೆ.

ಗ್ರಾಮದ ಮಕ್ಕಳಿಗೆ ಬೆಳಕಾಗುವ ಕನ್ನಡ ಶಾಲೆ
ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರದ ಪ್ರಚಾರ, ಹೆತ್ತವರ ಇಂಗ್ಲೀಷ್‌ ವ್ಯಾಮೋಹದ ನಡುವೆಯೂ ತನ್ನ ಹಿರಿಮೆಯನ್ನು ಉಳಿಸಿಕೊಂಡು ಬಂದಿರುವ ಕನ್ನಡ ಶಾಲೆಯ ಪ್ರಯತ್ನ ಅಭಿನಂದನೀಯ. ಸುಂದರ, ಸ್ವತ್ಛ, ಸುಂದರ ಭೂಪ್ರಕೃತಿಯ ಮಡಿಲಲ್ಲಿ ಸುಸಜ್ಜಿತ ಕೊಠಡಿಗಳು, ಸ್ವತ್ಛ ಅಡುಗೆ ಮನೆ, ವ್ಯವಸ್ಥಿತ ಕಂಪ್ಯೂಟರ್‌ ಲ್ಯಾಬ್‌, ಸ್ಮಾರ್ಟ್‌ ಕ್ಲಾಸ್‌ಗಳು ಈ ಶಾಲೆಯ ಮೆರುಗನ್ನು ಹೆಚ್ಚಿಸಿವೆ.

ಉತ್ತೇಜನ
ಕನ್ನಡ ಭಾಷೆ, ಇಲ್ಲಿನ ನೆಲ, ಜಲ, ಸಾಹಿತ್ಯ, ಸಂಸƒRತಿ, ಕಲೆಯ ಬಗೆಗಿನ ಜ್ಞಾನ, ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರತಿದಿನ ಕನ್ನಡ ದಿನಪತ್ರಿಕೆ ಓದಿಸುವುದು, ಸಾಹಿತ್ಯ ರಚನೆಗೆ ಅಗತ್ಯವಾದ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಶಿಬಿರಗಳ ಮೂಲಕ ನೀಡುವ ಕಾರ್ಯವೂ ಇಲ್ಲಿ ನಡೆಯುತ್ತಿದೆ. ಹಾಗೆಯೇ ಭಾಷಣ, ಆಶುಭಾಷಣ, ಪ್ರಬಂಧ, ಕತೆ, ಕವನ ಸ್ಪರ್ಧೆಗಳನ್ನು ಏರ್ಪಡಿಸಿ ಹೊಸ ಹೊಸ ಚಿಂತನೆಗಳಿಗೆ ಅವಕಾಶ ಒದಗಿಸುವುದು, ಮಾತ್ರವಲ್ಲದೆ ನƒತ್ಯ, ನಾಟಕ, ಅಭಿನಯಕಲೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿದ್ದಾರೆ. ಸಾಧನೆಗೆ ಪೂರಕವಾದ ವಾತಾವರಣ ಇಲ್ಲಿದೆ. ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಸಾಧ್ಯತೆಯನ್ನು ಕಲ್ಪಿಸಲಾಗಿದೆ. ಆದುದರಿಂದಲೇ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡೋತ್ಸವ ಹಾಗೂ ಕಲೋತ್ಸವಗಳಲ್ಲೂ ಉಪಜಿಲ್ಲೆ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲೆ ಮೇಲುಗೆ„ ಸಾಧಿಸುವಂತಾಗಿದೆ.

ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ್‌ ಹೆಗ್ಡೆ ಅಧ್ಯಕ್ಷತೆಯಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ನ ಪೊÅ| ಚಾನ್ಸೆಲರ್‌ ಡಾ.| ಎಚ್‌.ಎಸ್‌.ಬಲ್ಲಾಳ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಟ್ಟೆ ವಿವಿಯ ಕುಲಸಚಿವ ಡಾ| ಅಲಕಾ ಕುಲಕರ್ಣಿ, ಆರ್ಥಿಕ ನಿರ್ದೇಶಕ ರಾಜೇಂದ್ರ ಪ್ರಶಸ್ತಿ ಘೋಷಣೆ ಮಾಡಿದರು.

Advertisement

ನಿಟ್ಟೆ ವಿದ್ಯಾಸಂಸ್ಥೆಯ ಟ್ರಸ್ಟಿ ವಿಶಾಲ್‌ ಹೆಗ್ಡೆ ಸ್ವಾಗತಿಸಿದರು. ನಿಟ್ಟೆ ವಿವಿಯ ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ ಅವರು ವಂದಿಸಿದರು. ಡಾ| ಸಾಯಿಗೀತಾ ಅವರು ಕಾರ್ಯಕ್ರಮ ನಿರೂಪಿಸಿದರು ಶಾಲಾ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್‌, ಕೃಷ್ಣಪ್ರಸಾದ ರೈ ಪೆರಡಾಲ, ಅಧ್ಯಾಪಕರಾದ‌ ಹರೀಶ್‌ ಐ., ಕೇಶವ ಭಟ್‌, ಸರ್ವಮಂಗಳಾ ಪ್ರಭಾವತಿ ಪುಂಡೂರು, ವಿದ್ಯಾ, ರಾಜೇಶ್‌ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ನಾರಾಯಣ ಮುರಿಯಂಕೂಡ್ಲು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನವಜೀವನ ಹೆಸರಿನ ಹಿನ್ನೆಲೆ
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುವ ಉದ್ಧೇಶದಿಂದ ಅಹ್ಮದಾಬಾದ್‌ ನಲ್ಲಿ ನವಜೀವನ ಮುದ್ರಣಾಲಯವು ಕರಪತ್ರಗಳನ್ನು ಮುದ್ರಿಸಿ ಭಾರತೀಯರನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿತ್ತು. ಗಾಂಧೀಜಿಯವರ ತತ್ವಗಳನ್ನು, ಭಾರತೀಯರು ಕೈಗೊಳ್ಳಬೇಕಾದ ನಿರ್ಧಾರವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದ ಈ ಮುದ್ರಣಾಲಯದ ಹೆಸರನ್ನು ಗಾಂಧೀ ತತ್ವಗಳಿಂದ ಪ್ರೇರಿತರಾದ ಡಾ.ಬಿ.ಎಸ್‌ ಶಾಸ್ತ್ರೀಗಳು ಈ ಶಾಲೆಗೂ ಇಡುವ ಮೂಲಕ ನವಜೀವನದ ಕನಸನ್ನು ಶಾಶ್ವತವಾಗಿ, ಅರ್ಥಪೂರ್ಣವಾಗಿ ಉಳಿಯುವಂತೆ ಮಾಡಿದರು. ಹಾಗೆಯೇ ಈ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಎಲ್ಲರ ಸಹಕಾರ, ಪ್ರೋತ್ಸಾಹ, ಬೆಂಬಲ ಮತ್ತು ನವಜೀವನ ಶಾಲೆಯನ್ನು ಇಂದು ಈ ಹಂತಕ್ಕೆ ಬೆಳೆಸಿದೆ.

ಕಯ್ಯಾರರು ಕಲಿಸಿದ ಶಾಲೆ
ನವಜೀವನ ಶಾಲೆಯಪ್ರಾರಂಭದಿಂದಲೂ ನಾಡೋಜ ಕಯ್ಯಾರ ಕಿಂಞಣ್ಣ ರೈ ಗಳು ಅಧ್ಯಾಪಕರಾಗಿ ಸೇವೆ ಆರಂಭಿಸಿದ್ದರು. ಶಾಲೆಯ ಅಭಿವೃದ್ಧಿಗೆ ಕಾರಣೀಭೂತರಾದರು. ಮಾತ್ರವಲ್ಲದೆ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿಯನ್ನೂ ಪಡೆಯುವ ಮೂಲಕ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next