Advertisement

ಡಾ|ನಾಗಲೋಟಿಮಠ ಬದುಕು ಯುವಕರಿಗೆ ಆದರ್ಶ

06:23 PM Oct 25, 2021 | Team Udayavani |

ಹುಬ್ಬಳ್ಳಿ: ಡಾ| ಎಸ್‌.ಜೆ. ನಾಗಲೋಟಿಮಠ ಅವರ ನಡೆ, ನುಡಿ ಮತ್ತು ಪ್ರಾಮಾಣಿಕತೆ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕಾಗಿದೆ ಎಂದು ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಿ.ಆರ್‌. ತಮಗೊಂಡ ಹೇಳಿದರು. ವಿದ್ಯಾನಗರ ಸುಶ್ರುತ ಆಸ್ಪತ್ರೆ ಸಭಾಭವನದಲ್ಲಿ ಬೆಳಗಾವಿಯ ಡಾ| ಎಸ್‌.ಜೆ.ನಾಗಲೋಟಿಮಠ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಕಲಬುರಗಿಯ ಷಡಕ್ಷರಿಸ್ವಾಮಿ ದಿಗ್ಗಾಂವಕರ ಟ್ರಸ್ಟ್‌ ಮತ್ತು ಜನಾಂದೋಲನ ಟ್ರಸ್ಟ್‌ನ ಸಹಯೋಗದಲ್ಲಿ ಸಜನಾ ಅವರ ಬಿಚ್ಚಿದ ಜೋಳಿಗೆಯ ಇಂಗ್ಲಿಷ್‌ ಆವೃತ್ತಿ(ಆ್ಯನ್‌ ಓಪನ್‌ ಬ್ಯಾಗ್‌ ಆಪ್‌ ಆಲ್ಮ್ಸ್) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

Advertisement

ಡಾ| ನಾಗಲೋಟಿಮಠ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುವ ಜ್ಯೋತಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ ಎಂದರು. ಪತ್ರಕರ್ತ ಹರ್ಷವರ್ಧನ ಶೀಲವಂತರ ಪುಸ್ತಕ ಕುರಿತು ಮಾತನಾಡಿ, ಇತ್ತೀಚಿನ ಬರಹಗಾರರು ವಾಸ್ತವವನ್ನು ಬರೆಯುವುದು ವಿರಳ. ಆದರೆ ಎಸ್‌.ಜೆ ನಾಗಲೋಟಿಮಠ ಅವರು ಬದುಕಿದಂತೆ ಬರೆದವರು ಅವರ ಬಿಚ್ಚಿದ ಜೋಳಿಗೆ ಪುಸ್ತಕ ಅವರ ಅನುಭವದ ಸಾರವನ್ನು ತಿಳಿಸಿದೆ ಎಂದು ಹೇಳಿದರು.

ನಾಗಲೋಟಿಮಠ ಅವರು ಪುಸ್ತಕ ಬಿತ್ತಿ ಬೆಳೆದಿದ್ದೇವೆ. ಅದನ್ನು ಮುಂದಿನ ಪೀಳಿಗೆಯವರಿಗೆ ಮುಟ್ಟಿಸುವ ಕೆಲಸ ನಾವು ಮಾಡಬೇಕು. ಜನ್ಮದಿನ ಅಥವಾ ರ್‍ಯಾಂಕ್‌ ಪಡೆದಾಗ ಇಂತಹ ಪುಸ್ತಕವನ್ನು ಉಡುಗೊರೆಯಾಗಿ ನೀಡಬೇಕು. ಮೌಲ್ಯ ಮತ್ತು ಆದರ್ಶ ನಾಲಿಗೆಯಾಗಬೇಕು. ಚೆನ್ನಾಗಿ ಮಾತನಾಡುವವರು ನಮಗೆ ಮಾದರಿಯಾಗಬಾರದು, ನಡೆದಂತೆ ಮಾತನಾಡುವವರು ಮಾದರಿಯಾಗಬೇಕು. ಅಂತಹ ವ್ಯಕ್ತಿತ್ವ ನಾಗಲೋಟಿಮಠರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಶ್ರುತ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ| ದೇವರಾಜ ರಾಯಚೂರ ಮಾತನಾಡಿದರು. ಶಾಂತಾ ನಾಗಲೋಟಿಮಠ, ಪ್ರಕಾಶಕ ಎಸ್‌.ಎಸ್‌. ಹಿರೇಮಠ ಮತ್ತು ಡಾ| ಜಿ.ನಾಗೇಶಪ್ಪ, ಮಹಾನಂದಾ ದಿಗ್ಗಾಂವಕರ, ಉಮೇಶ ನಾಗಲೋಟಿಮಠ, ಬಸವರಾಜ ಕೆಂದೋಳಿ, ಸುಶ್ಮಾ ಹಿರೇಮಠ, ಶಿವಶಂಕರ ಹಿರೇಮಠ, ಪಿಐ ಎನ್‌.ಸಿ. ಕಾಡದೇವರ ಇನ್ನಿತರರಿದ್ದರು. ಡಾ| ಭಾಗ್ಯಜ್ಯೋತಿ ಕೋಟಿಮಠ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next