Advertisement

Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ।ನಾಗಲಕ್ಷ್ಮಿ

06:10 PM Jun 26, 2024 | Team Udayavani |

ಕಲಬುರಗಿ: ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಹಿಂಸೆ ಮತ್ತು ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಹಿಳಾ ಆಯೋಗದ ಸೆಲ್ ತೆರೆಯಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದ್ರಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಖೇದಕರ ಸಂಗತಿಯಾಗಿದೆ, ಬಾಲಕಿಯರು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ನಾಪತ್ತೆ ಪ್ರಕರಣಗಳನ್ನು ಭೇದಿಸುವ ನಿಟ್ಟಿನಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಇಲಾಖೆ, ರೈಲ್ವೆ ಇಲಾಖೆ ಕೆಎಸ್ಆರ್ಟಿಸಿ, ಏರ್ ಫೋರ್ಸ್ ಸೇರಿದಂತೆ ಇತರೆ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಬಾಲಕಿಯರು ಮತ್ತು ಮಹಿಳೆಯರು ನಾಪತ್ತೆ ಆಗುತ್ತಿರುವ ಕುರಿತು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚು ಜಾಗೃತರಾಗಿ ದೂರುಗಳನ್ನು ದಾಖಲು ಮಾಡಿಕೊಳ್ಳಬೇಕು, ನಾಪತ್ತೆ ಪ್ರಕರಣಗಳನ್ನು ಭೇದಿಸಿ ನಾಪತ್ತೆಯಾದ ಮಹಿಳೆಯನ್ನು ಪುನಃ ಅವರ ಕುಟುಂಬಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಜಾಗರೂಕವಾಗಿ ಮತ್ತು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಆದರೆ ಗ್ರಾಮೀಣ ಮಟ್ಟದಲ್ಲಿ ಪಿಎಚ್‌ಸಿಗಳಲ್ಲಿ ಗರ್ಭಕೋಶ ಸ್ಕ್ಯಾನಿಂಗ್ ಸ್ಥಾನ ಕ್ಯಾನ್ಸರ್ ಸ್ಕ್ಯಾನಿಂಗ್ ಇಕ್ವಿಪ್ಮೆಂಟ್ ಗಳು ಇಟ್ಟುಕೊಂಡು ಮಹಿಳೆಯರಿಗೆ ತಪಾಸಣೆ ಮಾಡುತ್ತಿರುವ ಕ್ರಮವನ್ನು ಮೆಚ್ಚಿದರು. ಅಂಗನವಾಡಿಗಳಲ್ಲಿ ನೀರಿಲ್ಲ ಲೈಟ್ ಇಲ್ಲ ಮಳೆಯಾದರೆ ಸೋರುತ್ತದೆ ಎನ್ನುವ ಗಂಭೀರ ಆರೋಪವನ್ನು ಮಾಡಿದ ಅವರು, ತಮ್ಮ ಮೂರು ದಿನಗಳ ಕಲ್ಬುರ್ಗಿ ಪ್ರವಾಸದಲ್ಲಿ ಅಂಗನವಾಡಿಯಲ್ಲಿರುವಂತಹ ಪರಿಸ್ಥಿತಿ ನೋಡಿ ನನಗೆ ತುಂಬಾ ನೋವಾಗಿದೆ ಎಂದು ಅವರು, ಈ ನಿಟ್ಟಿನಲ್ಲಿ ಅಲ್ಲಿನ ಪಿಡಿಓ ಕಾರ್ಯದರ್ಶಿ ಸೇರಿದಂತೆ ಇತರೆ ಅಧಿಕಾರಿಗಳು ಯಾಕೆ ಅದನ್ನು ಗಮನಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಲ್ಲದೆ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಇಂತಹ ವಿಷಯಗಳನ್ನು ತರಬೇಕೆಂದು ಜನರಿಗೂ ಕೂಡ ಮನವಿ ಮಾಡಿದರು. ಮಿಶನ್ ಸುರಕ್ಷಾ ಜನಸ್ನೇಹಿ ಪೊಲೀಸ್ ಸೇರಿದಂತೆ ಇತರೆ ಹಲವು ಕ್ರಮಗಳು ಜಿಲ್ಲೆಯಲ್ಲಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಅದರ ಕ್ರೆಡಿಟ್ ನೀಡಿದರು.

Advertisement

ಮಹಿಳಾ ಆಯೋಗಕ್ಕೆ ತಾವು ಅಧ್ಯಕ್ಷರಾಗಿ ಮೂರು ತಿಂಗಳಾಗಿದೆ. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಕೇಸ್ ಮುಖ್ಯಮಂತ್ರಿಗಳಿಗೆ ನೀಡಿದ್ದು ಅಲ್ಲದೆ ಅದನ್ನು ಕಾನೂನಾತ್ಮಕವಾಗಿ ಪರಿಹಾರ ಮಾಡುವಂತೆ ಎಸ್ಐಟಿಗೆ ವಹಿಸುವಲ್ಲಿ ಮಹಿಳಾ ಆಯೋಗದ ಜವಾಬ್ದಾರಿ ಬಹುದೊಡ್ಡದು ಮೊದಲ ದೂರು ಮಹಿಳಾ ಆಯೋಗವೇ ದಾಖಲು ಮಾಡಿಕೊಂಡಿತ್ತು ಎಂದು ಹೇಳಿದರು.

ಅದಲ್ಲದೆ ಬೆಂಗಳೂರು ಜ್ಞಾನಭಾರತಿಯಲ್ಲಿ ಕುಡಿಯಲು ನೀರಿಲ್ಲದೆ ಇರುವ ವಿಷಯವನ್ನು ತಾವೇ ಹೊರಹಾಕಿದ್ದು ಅದು ಈಗ ಸರಿಯಾಗಿದೆ. ಇಂತಹ ಹಲವಾರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ, ಮಹಿಳಾ ಆಯೋಗ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವರ್ಷದ ೩೬೫ ದಿನಗಳು ಕೆಲಸ ಮಾಡಲಿದೆ ಎಂದರು.

ಈ ವೇಳೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮುಖಂಡರು, ಹಾಗೂ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂಸಿಇಓ ಭವಂರ್ ಸಿಂಗ್ ಮೀನಾ, ಎಸ್ಪಿ ಅಜ್ಷಯ ಹಾಕೆ, ಡಿಸಿಪಿ ಸಿಕ್ರಿವಾಲ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next