Advertisement

ಮಣಿಪಾಲ ಪ್ರೆಸ್‌ಗೆ ಭಾಗವತ್‌ ಭೇಟಿ, ಮೆಚ್ಚುಗೆ

11:56 AM Mar 03, 2021 | Team Udayavani |

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ|ಮೋಹನ್‌ ಭಾಗವತ್‌ಜಿ ಅವರು ಮಂಗಳವಾರ ಮಣಿಪಾಲ್‌ ಟೆಕ್ನಾಲಜೀಸ್‌ ಲಿ. (ಎಂಟಿಎಲ್‌)ನ ಯುನಿಟ್‌ 5ಕ್ಕೆ ಭೇಟಿ ನೀಡಿ ಯುನಿಟ್‌ನ ವಿವಿಧ ವಿಭಾಗಗಳನ್ನು ವೀಕ್ಷಿಸಿ ಮುದ್ರಣ ಕ್ಷೇತ್ರದಲ್ಲಿರುವ ಅತ್ಯಾಧುನಿಕತೆಗೆ ಮೆಚ್ಚುಗೆ ಸೂಚಿಸಿದರು.

Advertisement

ಎಂಟಿಎಲ್‌ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಪೈಯವರು ಭಾಗವತ್‌ ಅವರನ್ನು ಪರಿಚಯಿಸಿ, ಮಣಿಪಾಲ ಸಮೂಹವು 80 ವರ್ಷಗಳಿಂದ ಮಣಿಪಾಲದ ಮುದ್ರಣಾಲಯ, 50 ವರ್ಷಗಳಿಂದ ಉದಯವಾಣಿ ಸಮೂಹವನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಎಂಟಿಎಲ್‌ ಆಡಳಿತ ನಿರ್ದೇಶಕ, ಸಿಇಒ ಅಭಯ್‌ ಗುಪೆ¤ ಅವರು ಸ್ವಾಗತಿಸಿ ಕಂಪೆನಿಯು ಸರಕಾರಗಳ ವಿವಿಧ ಕಾರ್ಯಯೋಜನೆಗಳಿಗೆ ನೀಡು ತ್ತಿರುವ ಸಹಯೋಗದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಯನ್ನು ವಿವರಿಸಿದರು. ಎಂಎಂಎನ್‌ಎಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ, ಆಡಳಿತ ನಿರ್ದೇಶಕ, ಸಿಇಒ ವಿನೋದ್‌ ಕುಮಾರ್‌ ಉಪಸ್ಥಿತರಿದ್ದರು.

ಎಲ್‌.ಕೆ. ಆಡ್ವಾಣಿಯವರು ಕರ್ನಾಟಕಕ್ಕೆ ಬಂದಾಗ ತಾವು ಬೆಂಗಳೂರಿನಲ್ಲಿ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದ ಸಂದರ್ಭ
ವನ್ನು ನೆನಪಿಸಿಕೊಳ್ಳುತ್ತಿದ್ದರು. “ಉದಯವಾಣಿ’ ಶಿರೋನಾಮೆ ಯನ್ನು ಓದಲು ಬರುತ್ತದೆ. ಇನ್ನಷ್ಟು ದಿನ ಬೆಂಗಳೂರಿನ ಜೈಲಿನಲ್ಲಿದ್ದಿದ್ದರೆ ಕನ್ನಡವನ್ನು ಓದಲು ಬರುತ್ತಿತ್ತು ಎಂದು ಹೇಳುತ್ತಿದ್ದರು. ಮಂಗಳೂರಿನ ಜ್ಞಾನಭಾರತೀ ಟ್ರಸ್ಟ್‌ಗೂ “ಉದಯವಾಣಿ’ಗೂ ಉತ್ತಮ ಸಂಬಂಧವಿದೆ’ ಎಂದು ಆರೆಸ್ಸೆಸ್‌ ಸಹಸರಕಾರ್ಯವಾಹ ಮುಕುಂದ್‌ ಸಿ.ಆರ್‌. ಹೇಳಿದರು.
ಎಂಇಐಎಲ್‌ನ ಎಂಡಿ ಮತ್ತು ಸಿಇಒ ಸಾಗರ್‌ ಮುಖೋಪಾಧ್ಯಾಯ, ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣದ ಸಹಪ್ರಾಂತ ಕಾರ್ಯವಾಹ ಪ್ರಕಾಶ್‌, ದಿಲ್ಲಿ ಆರ್ಗನೈಸರ್‌ ಪತ್ರಿಕೆಯ ಮಾಜಿ ಸಂಪಾದಕ ಶೇಷಾದ್ರಿ ಚಾರಿ, ಹಿರಿಯರಾದ ಮಾಧವ ನಲಪತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next