Advertisement

ಅಧ್ಯಕ್ಷನಾದರೆ ಚಾ.ನಗರದಲ್ಲಿ ಸಮ್ಮೇಳನ

10:54 AM Dec 04, 2020 | Suhan S |

ಚಾಮರಾಜನಗರ: ತಾನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿ ಆಯ್ಕೆಯಾದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ದೂರ ದರ್ಶನದ ನಿವೃತ್ತ ಅಧಿಕಾರಿ ಡಾ. ಮಹೇಶ್‌ ಜೋಶಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಇದುವರೆಗೆ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ತಾನು ಅಧ್ಯಕ್ಷನಾದರೆ, ಚಾಮರಾಜನಗರದಲ್ಲಿ ಸಮ್ಮೇಳನ ನಡೆಸುತ್ತೇನೆ. ಕನ್ನಡ ಭವನ ನಿರ್ಮಿಸುವೆ ಎಂದು ಭರವಸೆ ನೀಡಿದರು.

ಮುಂದಿನ ವರ್ಷ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ತಾನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಹೇಳಿಕೊಳ್ಳಲಾರೆ. ಆ ಸ್ಥಾನದ ಸೇವಾಕಾಂಕ್ಷಿ. ಅಧಿಕಾರಕ್ಕಾಗಿ ಸ್ಪರ್ಧೆಮಾಡುತ್ತಿಲ್ಲ. ಕನ್ನಡದ ರಾಯಭಾರಿಯಾಗಿ ಕೆಲಸ ಮಾಡಿ, ಪರಿಷತ್ತಿನಲ್ಲಿ ಹೊಸ ಮಾರ್ಗ ಸೃಜಿಸುತ್ತೇನೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಹತ್ತಿರಕ್ಕೆ ತರಲು ಪ್ರಮುಖವಾಗಿ ನಾಲ್ಕು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಸದಸ್ಯರಾಗಲು ಸರಳೀಕರಣ ವ್ಯವಸ್ಥೆ, ಪರಿಷತ್ತಿನ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ, ವ್ಯವಸ್ಥೆಯ ಶುದ್ಧೀಕರಣ ಮಾಡುತ್ತೇನೆ. ಪರಿಷತ್ತಿಗಾಗಿ ಆ್ಯಪ್‌ ಅಭಿವೃದ್ಧಿ ಪಡಿಸಿ, ಅದರ ಮೂಲಕ ಸದಸ್ಯತ್ವಕ್ಕೆ ಅರ್ಜಿಹಾಕುವ ವ್ಯವಸ್ಥೆಕಲ್ಪಿಸುತ್ತೇನೆ ಎಂದು ಅವರು ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಪರಿಷತ್ತಿನ ಸದಸ್ಯರಾಗಲು ಅಥವಾ ಅಧ್ಯಕ್ಷರಾಗಲು ಸಾಹಿತಿಯೇ ಆಗಬೇಕು ಎಂಬ ನಿಯಮ ಇಲ್ಲ. ಪರಿಷತ್ತಿನ ಸದಸ್ಯರಾಗಿ ಹತ್ತು ವರ್ಷ ಅನುಭವವಿರುವ, ಕನ್ನಡದ ನೆಲ, ಜಲ, ಸಂಸ್ಕೃತಿ, ಸಾಹಿತ್ಯ ಬಗ್ಗೆ ಅರಿವಿರುವ ಯಾರು ಬೇಕಾದರೂ ಸ್ಪರ್ಧೆ ಮಾಡ ಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬರಹಗಾರ ಲಕ್ಷ್ಮೀ ನರಸಿಂಹ, ಉಪನ್ಯಾಸಕ ಸುರೇಶ್‌ ಋಗ್ವೇದಿ, ಗಂಗಾಧರ್‌, ರಾಮಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next