Advertisement

ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

11:06 PM Jul 22, 2019 | Lakshmi GovindaRaj |

ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಗರದ ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನಿರೀಕ್ಷಿತವಾಗಿ ಈ ಅವಕಾಶ ಒದಗಿ ಬಂದಿದೆ.

Advertisement

ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಕಾರ್ಯ ಗುರುತಿಸಿ ಸರ್ಕಾರ ಈ ಅವಕಾಶ ನೀಡಿದೆ. ಅಕಾಡೆಮಿಯ ವಾರ್ಷಿಕ ಅನುದಾನ ಹೆಚ್ಚಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗುವುದು. ಅಕಾಡೆಮಿ ಮುನ್ನಡೆಸುವ ನಿಟ್ಟಿನಲ್ಲಿ ಡಾ. ಚನ್ನವೀರ ಕಣವಿ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸೇರಿದಂತೆ ಗಣ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದಾಗಿ ತಿಳಿಸಿದರು.

ಮಕ್ಕಳ ಬರವಣಿಗೆ ಪ್ರೋತ್ಸಾಹಿಸಲು ಪ್ರತಿವರ್ಷ ದಿ ಬೆಸ್ಟ್‌ ಬುಕ್‌ ‘ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯದ ಜಿಲ್ಲೆ, ತಾಲೂಕು, ಹೋಬಳಿಗಳು, ವಿಶೇಷವಾಗಿ ಗಡಿಭಾಗದ ಗ್ರಾಮಗಳಲ್ಲಿ ಸಂಗೀತ, ನಾಟಕ, ನೃತ್ಯ, ಕಥೆ, ಕವನ ರಚನೆಯಂತಹ ಸೃಜನಶೀಲ ಚಟುವಟಿಕೆಗಳು, ಕಂಪ್ಯೂಟರ್‌ ಕಲಿಕೆ, ಎಸ್ಸೆಸ್ಸೆಲ್ಸಿ ಅನ್ನುತ್ತೀರ್ಣರಾದ ಮಕ್ಕಳಿಗೆ ಧೈರ್ಯ ತುಂಬುವ ತರಬೇತಿಗೆ ಆದ್ಯತೆ ನೀಡಲಾಗುವುದು ಎಂದರು. ಅವರನ್ನು ಅಕಾಡೆಮಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next