Advertisement

Kota ಡಾ| ವಿದ್ಯಾಭೂಷಣ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ

11:43 PM Sep 09, 2023 | Team Udayavani |

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‌, ಡಾ| ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಆಶ್ರಯದಲ್ಲಿ ಕೊಡಮಾಡುವ 2023ನೇ ಸಾಲಿನ ಡಾ| ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಖ್ಯಾತ ಶಾಸ್ತ್ರೀಯ ಸಂಗೀತಗಾರ ಡಾ| ವಿದ್ಯಾಭೂಷಣ ಆಯ್ಕೆಯಾಗಿದ್ದಾರೆ.

Advertisement

ಡಾ| ವಿದ್ಯಾಭೂಷಣ ಅವರು ಹಲವು ದಶಕಗಳಿಂದ ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅ. 10ರಂದು ಡಾ| ಕೋಟ ಶಿವರಾಮ ಕಾರಂತರ ಜನ್ಮ ದಿನದಂದು ಪ್ರದಾನ ನೆರವೇರಲಿದೆ ಎಂದು ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ. ಕುಂದರ್‌ ತಿಳಿಸಿದ್ದಾರೆ.

ಕಾರಂತರ ವಿವಿಧ ಆಸಕ್ತಿಯ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದವರಿಗೆ ಕಳೆದ 18 ವರ್ಷಗಳಿಂದ ಕಾರಂತ ಹುಟ್ಟೂರ ಪುರಸ್ಕಾರ ನೀಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next