Advertisement
ಡೆಹ್ರಾಡೂನ್ ನ ವಾಡಿಯಾ ಇನ್ ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ನಿರ್ದೇಶಕ ಡಾ. ಕಲಾಚಂದ್ ಸೇನ್ ಅವರ ಪ್ರಕಾರ, ಹಿಮಾಲಯ ನಾವು ಹಿಂದೆ ಇದ್ದಂತೆ ಈಗಿಲ್ಲ. ಹಾಗೆಂದು ನಿಖರ ಅಧ್ಯಯನ ಮತ್ತುದತ್ತಾಂಶಗಳ ಮಾದರಿಯಿಂದ ಮಾತ್ರ ಹಿಮಾಲಯದ ತಪ್ಪಲು ಬದಲಾಗುತ್ತಿರುವ ಪರಿಯನ್ನು ಹೇಳಬಹುದಷ್ಟೇ ಎಂದು ಉದಯವಾಣಿಗೆ ತಿಳಿಸಿದರು.
Related Articles
Advertisement
ಅಭಿವೃದ್ಧಿ ಬೇಕು..ಆದರೆ ಉತ್ತರಾಖಂಡ್ ಸೇರಿದಂತೆ ಹಿಮಾಲಯ ತಪ್ಪಲಿನ ಪ್ರದೇಶಗಳಲ್ಲಿನ ಅಭಿವೃದ್ಧಿಯೇ ಅನಾಹುತಗಳಿಗೆ ಕಾರಣವಾಗುತ್ತಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ, ಪರ್ವತ ಪ್ರದೇಶದ, ಹಿಮಾಲಯದ ತಪ್ಪಲಿನ ಜನರಿಗೆ ಸೌಲಭ್ಯ ಸಿಗಬೇಕು. ಅವರಿಗೆ ಅಭಿವೃದ್ದಿಯನ್ನು ನಿರಾಕರಿಸಬಾರದು. ಆದರೆ ಏನು ಮಾಡಬೇಕು ಮತ್ತು ಎಷ್ಟು ಮಾಡಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು.ಆ ಬಳಿಕ ವೈಜ್ನಾನಿಕವಾಗಿ ಹೇಗೆ ಮಾಡಬಹುದೆಂಬುದನ್ನು ಅಧ್ಯಯನ ಮಾಡಿ ನಿರ್ಧರಿಸಬೇಕು. ಸ್ಥಳೀಯ ಸಂಸ್ಥೆಗಳನ್ನು, ಸ್ಥಳೀಯರ ಸಲಹೆಯನ್ನೂ ಪಡೆಯಬೇಕು. ಸುಸ್ಥಿರತೆಗೆ ಆದ್ಯತೆ ಕೊಡದೇ ಯಾವುದೇ ಅಭಿವೃದ್ಧಿ ನಡೆಸಿದರೂ ಅನಾಹುತ ಇದ್ದದ್ದೇ ಎಂದರಲ್ಲದೇ, ನಾವು ಒಳ್ಳೆದಾಗಬೇಕೆಂದು ಅಭಿವೃದ್ಧಿ ಮಾಡಿ, ಜನರಿಗೆ ಅನಾಹುತ ಉಂಟಾಗುವುದಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಜೋಶಿಮಠ ಪ್ರಕರಣ2023 ರಲ್ಲಿ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿ ಉಂಟಾದ ಬಿರುಕಿಗೆ ಆ ಪ್ರದೇಶದಲ್ಲಿ ಆದ ಅಂತರ್ಜಲದ ಪ್ರಮಾಣದಲ್ಲಿನ ಏರಿಳಿತವೂ ಒಂದು ಕಾರಣ ಎಂದು ಸೇನ್ ತಿಳಿಸಿದರು. ಬಿರುಕು ಬಿಟ್ಟ ತರುವಾಯ ನಾವು ಸ್ಥಳಜ್ಕೆ ಭೇಟಿ ನೀಡಿ ಪರಿಶೀಲಿಸಿದೆವು ಬಳಿಕವೂ ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿತು. ಇನ್ನಷ್ಟು ಅಧ್ಯಯನ ನಡೆಸುವುದಾಗಿ ತಿಳಿಸಿದರು.ಅಭಿವೃದ್ಧಿ ಬೇಕಿದೆ, ಆದರೆ ಅವೈಜ್ಞಾನಿಕವಾಗಿ ಅಲ್ಲ ಎಂಬುದು ನನ್ನ ಅಭಿಪ್ರಾಯ ಎನ್ನುವುದಕ್ಕೆ ಮರೆಯಲಿಲ್ಲ.