Advertisement
ಕೋವಿಡ್ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಪಡುತ್ತಿದ್ದರೂ ಕೂಡ ಸರ್ಕಾರದ ನ್ಯೂನ್ಯತೆ ಎದ್ದು ಕಾಣಿಸುತ್ತಿರುವುದು ಸ್ಪಷ್ಟ. ವಿರೋಧ ಪಕ್ಷ ಕಾಂಗ್ರೆಸ್ ಆಡಳಿತ ಪಕ್ಷವನ್ನು ರೂಪಾಂತರಿ ಅಲೆ ಆರಂಭವಾದಾಗಿನಿಂದಲೂ ದೂರುತ್ತಾ ಬಂದಿದೆ.
Related Articles
Advertisement
ಈ ಕುರಿತಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಕಂಚಿಕೊಂಡಿರುವ ಸುಧಾಕರ್, ಕರ್ನಾಟಕ ಇಂದು 1 ಕೋಟಿ ಡೋಸ್ ಲಸಿಕೆ ವಿತರಣೆ ಪೂರೈಸಿದೆ. ಈವರೆಗೂ ಕೇಂದ್ರದಿಂದ ರಾಜ್ಯಕ್ಕೆ 1,05,49,970 ಡೋಸ್ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರ 3 ಲಕ್ಷ ಡೋಸ್ ತರಿಸಿಕೊಂಡಿದೆ. ಕೊರೊನಾ ವಿರುದ್ಧದ ಈ ಸಮರದಲ್ಲಿ ಲಸಿಕೆ ನಮ್ಮ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಪ್ರತಿಯೊಬ್ಬರಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು, ರಾಜ್ಯದಲ್ಲಿ ಕೋವಿಡ್ ಸೋಂಕನ್ನು ನಿವಾರಣೆಯ ಕುರಿತಾಗಿ ತೀವ್ರ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿನ್ನೆ(ಮೇ. 04) ಐವರು ಸಚಿವರಿಗೆ ನಿರ್ವಹಣೆಯ ಅಧಿಕಾರವನ್ನು ನೀಡಿದೆ. ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ್ ನಾರಾಯಣ ಅವರಿಗೆ ರೆಮಿಡೆಸಿವಿರ್ ಪೂರೈಕೆಯ ಜವಾಬ್ದಾರಿ, ಜಗದೀಶ್ ಶೆಟ್ಟರ್ ಗೆ ಆಮ್ಲಜನಕ ನಿರ್ವಹಣೆ, ಬಸವರಾಜ್ ಬೊಮ್ಮಾಯಿ ಹಾಗೂ ಆರ್ ಅಶೋಕ್ ಗೆ ಹಾಸಿಗೆ ನಿರ್ವಹಣೆ, ಅರವಿಂದ ಲಿಂಬಾವಳಿ ಅವರಿಗೆ ವಾರ್ ರೂಂ ಹಾಗೂ ಸಹಾಯವಾಣಿ ಜವಾಬ್ದಾರಿ ನೀಡಲಾಗಿದೆ. ಓದಿ : ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ