Advertisement

ಡಾ. ಅಂಬೇಡ್ಕರ್ ಭಾವಚಿತ್ರ ತೆಗೆದಿಟ್ಟ ಜಡ್ಜ್ ವಜಾಕ್ಕೆ ಒತ್ತಾಯ

11:35 AM Feb 01, 2022 | Team Udayavani |

ಕುರುಗೋಡು: ಗಣರಾಜ್ಯೋತ್ಸ ದಿನದಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಛಲವಾದಿ ಮಹಾಸಭಾ ಕುರುಗೋಡು ತಾಲೂಕು ಅಧ್ಯಕ್ಷ ಸಿ. ರಾಮಚಂದ್ರ ಒತ್ತಾಯಿಸಿದ್ದಾರೆ.

Advertisement

ನ್ಯಾಯಾಂಗ ಹುದ್ದೆಯಲ್ಲಿ ಇರುವವರು ಸಂವಿಧಾನ ಶಿಲ್ಪಿ ಅವರ ಭಾವ ಚಿತ್ರಕ್ಕೆ ಅವಮಾನಿಸುವ ಮೂಲಕ ವಿಕೃತಿ ಮನಸ್ಥಿತಿ ಮೆರೆದಿದ್ದಾರೆ. ಅಂಬೇಡ್ಕರ್ ಅವರ ಭಾವ ಚಿತ್ರವಿದ್ದರೆ ದ್ವಜಾರೋಹಣ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ ಎಂದು ಮಾಧ್ಯಮದವರಿಗೆ ಅವರು ತಿಳಿಸಿದರು.

ದೇಶಕ್ಕೆ ಸಂವಿಧಾನ ಬರೆದವರ ಬಗ್ಗೆ ಈ ರೀತಿ ಮಾಡಿರುವುದು ನಾಡಿನಲ್ಲೆಡೆ ಈಗಲೂ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಮಾನವ ಕುಲಕ್ಕೆ ಅವಮಾನದ ವಿಚಾರವಾಗಿದೆ.

ಹೀಗಾಗಿ ತಕ್ಷಣವೇ ಹೈಕೋರ್ಟ್ ನ್ಯಾಯಾಮೂರ್ತಿಗಳು ಮಧ್ಯ ಪ್ರವೇಶಿಸಿ ಇಂದಿನ ಆಧುನಿಕ ಕಾಲಘಟ್ಟದಲ್ಲೂ ಅಸ್ಪೃಶ್ಯತೆಯ ಮನೋಭಾವ ಉಳಿಸಿಕೊಂಡಿರುವ ಇವರನ್ನು ನ್ಯಾಯಾಂಗ ಇಲಾಖೆಯಿಂದ ವಜಾ ಮಾಡಬೇಕು ಹಾಗೂ ವಿಷಯದ ಕುರಿತು ದಲಿತ ಪರ ಸಂಘಟನೆ ಗಳು ಸರ್ಕಾರ ಮತ್ತು ಕಾನೂನು ಇಲಾಖೆಗೆ ಮನವಿ ನೀಡಿ ಗಮನಕ್ಕೆ ಕೂಡ ತರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next