Advertisement

ಡಾ|ಅರವಿಂದ ಬಲ್ಲಾಳ್‌ ಸ್ಮಾರಕ ಟ್ರಸ್ಟ್‌ ಉದ್ಘಾಟನೆ

01:05 AM Jan 30, 2022 | Team Udayavani |

ಮಣಿಪಾಲ: ಹೆಬ್ರಿ ಬೀಡು ಡಾ| ಅರವಿಂದ ಬಲ್ಲಾಳ್‌ ಸ್ಮಾರಕ ಟ್ರಸ್ಟ್‌ ಅನ್ನು ಶನಿವಾರ ಮಣಿಪಾಲದಲ್ಲಿ ಮಾಹೆ ಟ್ರಸ್ಟ್‌ ಮತ್ತು ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ ಉದ್ಘಾಟಿಸಿದರು.

Advertisement

ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಸಹಕುಲಪತಿಗಳಾದ ಡಾ| ಎಂ.ವಿ. ಪ್ರಭು, ಡಾ| ಪಿಎಲ್‌ಎನ್‌ಜಿ ರಾವ್‌, ಡಾ| ದಿಲೀಪ್‌ ನಾಯ್ಕ, ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಮತ್ತಿತರರು ಉಪಸ್ಥಿತರಿದ್ದರು.

ಹೆಬ್ರಿಬೀಡು ಅಂಬಾ ಬಲ್ಲಾಳ್‌ ಮತ್ತು ಬೇಳಂಜೆ ಕೃಷ್ಣಯ್ಯ ಹೆಗ್ಡೆ ಅವರ ಪುತ್ರನಾಗಿ 1935ರಲ್ಲಿ ಜನಿಸಿದ ಅರವಿಂದ ಬಲ್ಲಾಳರು ಮಣಿಪಾಲ ಮತ್ತು ಮಂಗಳೂರಿನ ಕೆಎಂಸಿಯಲ್ಲಿ ಎಂಬಿಬಿಎಸ್‌, ಸ್ನಾತಕೋತ್ತರ ಪದವಿ ಪಡೆದರು. 1966ರಲ್ಲಿ ಮಂಗಳೂರಿನ ಸರಕಾರಿ ವೆನಾÉಕ್‌ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದರು.

1979ರಲ್ಲಿ ಮಂಗಳೂರು ಕೆಎಂಸಿಯಲ್ಲಿ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆ ಗೊಂಡರು. 1996ರಲ್ಲಿ ನಿವೃತ್ತರಾಗಿ 1999ರಿಂದ 2013ರ ವರೆಗೆ ಯೇನಪೊಯ ಮೆಡಿಕಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 2020ರಲ್ಲಿ ಅಸ್ವಸ್ಥ ರಾದಾಗ ಅವರ ಸೋದರಳಿಯ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಉತ್ತಮ ಚಿಕಿತ್ಸಾ ವ್ಯವಸ್ಥೆ ಮಾಡಿದರು. 2021ರಲ್ಲಿ ನಿಧನ ಹೊಂದಿದರು. ಅರವಿಂದ ಬಲ್ಲಾಳರು ತಾನು ಪದವಿ ಪಡೆದ, 20 ವರ್ಷ ಸೇವೆ ಸಲ್ಲಿಸಿದ, ಅಂತ್ಯಕಾಲದಲ್ಲಿ ಉಚಿತ ವೈದ್ಯಕೀಯ ನೆರವು ನೀಡಿದ ಕೆಎಂಸಿಗೆ ಎಲ್ಲ ಉಳಿತಾಯ ಮತ್ತು ಆಸ್ತಿಗಳನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ:ಮೂರು ತಿಂಗಳಲ್ಲಿ ಬ್ಯಾಗ್‌ಲಾಗ್‌ ಹುದ್ದೆಗೆ ಭರ್ತಿಗೆ ಕ್ರಮ: ಸಚಿವ ಗೋವಿಂದ ಕಾರಜೋಳ

Advertisement

ಅವರ ಸಂಪನ್ಮೂಲಗಳನ್ನು ಕ್ರೋಡೀ ಕರಿಸಿ “ಹೆಬ್ರಿಬೀಡು ಡಾ| ಅರವಿಂದ ಬಲ್ಲಾಳ್‌ ಸ್ಮಾರಕ ದತ್ತಿನಿಧಿ’ ಸ್ಥಾಪಿಸಿ ಅದರ ಮೂಲಕ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡಬೇಕೆಂದು ಆಶಯ ವ್ಯಕ್ತಪಡಿಸಿದ್ದರು. ಈ ನಿಧಿಗೆ ಎಲ್ಲ ಮೂಲಗಳಿಂದ 75 ಲ.ರೂ. ದೇಣಿಗೆ ನೀಡಿದ್ದಾರೆ.

ಅರವಿಂದ ಬಲ್ಲಾಳರ ವಿವಿಧ ಉಳಿತಾಯ ಹಣಕ್ಕೆ ನಾಮಿನಿಗಳಾದ ಕೆಎಂಸಿ ನಿವೃತ್ತ ಅರಿವಳಿಕೆ ತಜ್ಞ ಡಾ| ದಿವಾಕರ ಶೆಟ್ಟಿ 63 ಲ.ರೂ., ಮೆಚ್ಚಿನ ಶಿಷ್ಯ, ಮಾಹೆ ಸಹಕುಲಪತಿ ಡಾ| ವೆಂಕಟ್ರಾಯ ಪ್ರಭು 10 ಲ.ರೂ., ಸೋದರಳಿಯ, ಉಡುಪಿಯ ದಂತ ವೈದ್ಯ ಡಾ| ಸುಧೀರಚಂದ್ರ ಬಲ್ಲಾಳ್‌ 2 ಲ.ರೂ. ಒಟ್ಟು 75 ಲ.ರೂ. ಪಾವತಿ ಮಾಡಿದರು. ಈ ದತ್ತಿನಿಧಿಗೆ ಮಾಹೆ 75 ಲ.ರೂ.ಸಮಾನ ದೇಣಿಗೆನೀಡಿದ್ದು 1.5 ಕೋ.ರೂ. ಮೂಲಧನದೊಂದಿಗೆ ದತ್ತಿನಿಧಿ ಆರಂಭಗೊಳ್ಳಲಿದೆ.

ಟ್ರಸ್ಟ್‌ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾಗಿ ಡಾ| ಎಚ್‌.ಎಸ್‌. ಬಲ್ಲಾಳ್‌, ಸದಸ್ಯರಾಗಿ ಡಾ| ಎಂ. ವೆಂಕಟ್ರಾಯ ಪ್ರಭು, ಡಾ| ದಿವಾಕರ ಶೆಟ್ಟಿ, ಪದನಿಮಿತ್ತ ಸದಸ್ಯರಾಗಿ ಮಂಗಳೂರು ಕೆಎಂಸಿ ಡೀನ್‌, ಪದನಿಮಿತ್ತ ಸದಸ್ಯ ಕಾರ್ಯದರ್ಶಿ ಯಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next