Advertisement

ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್

09:02 PM Jul 06, 2022 | Team Udayavani |

ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವುದು ರಾಜ್ಯಕ್ಕೆ ಸಂದ ಅತಿದೊಡ್ಡ ಗೌರವ ಎಂದು ಕನ್ನಡ- ಸಂಸ್ಕ್ರತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಜ್ಯವನ್ನು ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆಸುವುದರ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರು ಅವಿರತ ಶ್ರಮಿಸಿದ್ದಾರೆ. ಅವರ ಕನಸಿನ ಫಲವಾಗಿ ರಾಜ್ಯಾದ್ಯಂತ ಬೆಳೆದಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಜನರ ನಂದಾದೀಪವಾಗಿದೆ. ಸುಮಾರು 50 ಲಕ್ಷದಷ್ಟು ಜನರು ಈ ಸಂಸ್ಥೆಯ ಸದಸ್ಯರಾಗಿರುವುದು ಸಣ್ಣ ಮಾತಲ್ಲ. ಅದೇ ರೀತಿ ವಿದ್ಯಾಕ್ಷೇತ್ರದಲ್ಲೂ ಹೆಗ್ಗಡೆ ಯವರ ಸಾಧನೆ ಅನನ್ಯ. ಈ ಎಲ್ಲ ಕಾರಣಕ್ಕಾಗಿ ಕೇಂದ್ರ ಸರಕಾರ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಅತ್ಯಂತ ಅಭಿನಂದನೀಯ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಅವರಂಥ ಶ್ರೇಷ್ಠ ವ್ಯಕ್ತಿತ್ವವನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ‌ ಮೋದಿಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಹೆಗ್ಗಡೆಯವರ ಮಾರ್ಗದರ್ಶನ ಸದಾ ನಮಗಿರಲಿ ಎಂದು ಅವರು ಆಶಿಸಿದ್ದಾರೆ.

ರಾಜ್ಯಸಭೆಗೆ ಅತ್ಯಂತ ಯೋಗ್ಯ ಸಾಧಕರನ್ನು ಆಯ್ಕೆ ಮಾಡಿರುವುದು ಅತ್ಯಂತ ಹರ್ಷ ತಂದಿದೆ.ಖಾವಂದ ರನ್ನು ಆಯ್ಕೆ ಮಾಡಿದ್ದು ಕರಾವಳಿ ಭಾಗಕ್ಕೆ ಸಂದ ಗೌರವ.ಮೇಲ್ಮನೆಗೆ ಆಯ್ಕೆಯಾದ ಪಿ ಟಿ ಉಷಾ ಇಳಯರಾಜಾ ಮತ್ತು ವಿಜಯೇಂದ್ರ ಪ್ರಸಾದ್ ಸೇರಿದಂತೆ ನಾಲ್ವರು ಕೂಡ ದಕ್ಷಿಣ ಭಾರತೀಯರು ಮತ್ತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಿಖರ ಸಾಧನೆ ಮಾಡಿದವರು.ಯೋಗ್ಯ ಆಯ್ಕೆ ಗಾಗಿ ಮೋದಿ ಸರ್ಕಾರಕ್ಕೆ ವಿಶೇಷ ಅಭಿನಂದನೆ ಮತ್ತು ಧನ್ಯವಾದ ಗಳನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next