Advertisement

ಡಾ|ಗುರುರಾಜ ಕರ್ಜಗಿ ದಿಕ್ಸೂಚಿ ಭಾಷಣ

10:56 AM Feb 09, 2023 | Team Udayavani |

ಕಾರ್ಕಳ: ಕನ್ನಡ ಸಂಸ್ಕೃತಿ, ಸಂಸ್ಕಾರ ಉಳಿಸುವ ಜತೆಗೆ ಸಹೋದರತೆ, ಸಹಬಾಳ್ವೆ ಮೂಡಿಸುವ ಉದ್ದೇಶದಿಂದ ಕಾರ್ಕಳ ತಾ| 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಭಾವಾಂತರಂಗ, ಭಾಷೆ ಭಾವಗಳ ಸಮ್ಮಿಲನ ಕಾರ್ಯಕ್ರಮವನ್ನು ಫೆ. 12ರಂದು ಮಾದರಿಯಾಗಿ ನಡೆಸಲಾಗುವುದು ಎಂದು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಬಜಗೋಳಿ, ಕಾರ್ಕಳ ಕಸಾಪ ತಾ| ಘಟಕ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ , ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಪಿ ಶೆಣೈ ತಿಳಿಸಿದರು.

Advertisement

ಪತ್ರಿಕಾಗೋಷ್ಠಿ ನಡೆಸಿದ ಅವರು ಎಸ್‌ವಿಟಿ ವಿದ್ಯಾಸಂಸ್ಥೆಗಳ ಅಂಡಾರು ವಿಟ್ಠಲ ರುಕ್ಮಿಣಿ ಕಿಣಿ ಸಭಾಂಗಣದಲ್ಲಿ ಪ್ರೊ| ಎಂ. ರಾಮಚಂದ್ರ ವೇದಿಕೆಯಲ್ಲಿ ತರಂಗ ಪತ್ರಿಕೆಯ ಸಂಪಾದಕಿ ಡಾ| ಯು.ಬಿ.ರಾಜಲಕ್ಷ್ಮೀ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 8ಕ್ಕೆ ಪುರಸಭೆ ಅಧ್ಯಕ್ಷೆ ಸುಮಾಕೇಶವ್‌ ರಾಷ್ಟ್ರ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್‌ ತಾ| ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪರಿಷತ್‌ ಧ್ವಜಾರೋಹಣ ನೆರವೇರಿಸುವರು. ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಪಿ. ಶೆಣೈ,ಸಂಚಾಲಕ ಎಸ್‌. ನಿತ್ಯಾನಂದ ಪೈ, ಪುರಸಭೆ ವಿಪಕ್ಷ ನಾಯಕ ಅಶ#ಕ್‌ ಅಹಮ್ಮದ್‌ ಉಪಸ್ಥಿತರಿರುವರು.

8.30ಕ್ಕೆ ಅನಂತಶಯನ ಅನಂತ ಪದ್ಮನಾಭ ದೇವರ ಸನ್ನಿಧಿಯಿಂದ ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಸ್ವಾಗತಿಸಲಾಗುವುದು ಹಾಗೂ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಲಿದೆ. ಹಿರಿಯ ನ್ಯಾಯವಾದಿ ಎ.ಕೆ. ವಿಜಯಕುಮಾರ್‌ ಮೆರವಣಿಗೆ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ತಾಲೂಕಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಭಾರತ ಸೇವಾದಳ ತಂಡಗಳು, ಶ್ರೀ ಕ್ಷೇ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡ ಹಾಗೂ ಭಜನ ತಂಡಗಳು ಎಸ್‌ವಿಟಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಮೆರವಣಿಗೆಗೆ ಮೆರುಗು ನೀಡಲಿರುವರು ಎಂದರು.

ಬೆಳಗ್ಗೆ 10ಕ್ಕೆ ಸಚಿವ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸುವರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಪೂರ್ವ ಸಮ್ಮೇಳನಾಧ್ಯಕ್ಷ ಮನೋಹರ ಪ್ರಸಾದ್‌ ಧ್ವಜ ಹಸ್ತಾಂತರಿಸುವರು. ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸುವರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪುರಸಭೆ ಅಧ್ಯಕ್ಷೆ ಸುಮಾಕೇಶವ್‌, ಕರ್ನಾಟಕ ರಾಜ್ಯ ಫೆಡರೇಶನ್‌ ಅಫ್ ಕರ್ನಾಟಕ ಕ್ವಾರಿ ಸ್ಟೋನ್‌ ಕ್ರಶರ್‌ ಓನರ್ಸ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಬಜಗೋಳಿ, ತಹಶೀಲ್ದಾರ್‌, ತಾ.ಪಂ ಇಒ, ಎಂ.ಎನ್‌., ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿತರ ಗಣ್ಯರು ಉಪಸ್ಥಿತರಿರುವರು.

“ಸ್ವರ್ಣ ಕಾರ್ಕಳದ ಹಿರಿಮೆ’ ವಿಶೇಷ ಉಪನ್ಯಾಸ 11.30ರಿಂದ ನಡೆಯಲಿದೆ. ಕಾರ್ಕಳದ ಇತಿಹಾಸದ ಹಿರಿಮೆ ವಿಷಯದ ಕುರಿತು ಹಿರಿಯ ಸಾಹಿತಿ, ಚಿಂತಕ ಮುನಿರಾಜ ರೆಂಜಾಳ ಉಪನ್ಯಾಸ ನೀಡುವರು. ಕಾರ್ಕಳದ ಸಾಂಸ್ಕೃತಿಕ ಹಿರಿಮೆ ಕುರಿತು ಸಂಸ್ಕೃತಿ ಚಿಂತಕ ಶ್ರೀಕಾಂತ್‌ ಉಪನ್ಯಾಸ ನೀಡಲಿದ್ದಾರೆ.

Advertisement

ಮಧ್ಯಾಹ್ನ ಕವಿಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಸಾಹಿತಿ ಅನುಬೆಳ್ಳೆ ಹಾಗೂ ಕಾವ್ಯಾ ಪೂಜಾರಿ ಕಣಂಜಾರು, ಶುಭಲಕ್ಷ್ಮೀ ಆರ್‌. ನಾಯಕ್‌, ಪರಶುರಾಮ್‌ ಮೇಟಿ, ಪ್ರಜ್ಞಾ ಗೋರೆ, ಶಿವಾನಂದ ಕುಂಟಾಡಿ, ಸ್ಮಿತಾ ರಾಮ್‌, ಶ್ರೀನಿವಾಸ ನಾಯಕ್‌, ಚಂದ್ರ ನಾಯ್ಕ ಟಿ. ಕವಿಗಳು ಭಾಗವಹಿಸಲಿರುವರು. ಅಪರಾಹ್ನ 2ರಿಂದ ದಿಕ್ಸೂಚಿ ಉಪನ್ಯಾಸ ಖ್ಯಾತ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅವರಿಂದ ನಡೆಯಲಿದೆ.

ಹಿಂದಿ ಪಂಡಿತ್‌ ದಿ| ಬಿ. ವನಜಾಕ್ಷಿ$R ಅವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ ಕಾರ್ಕಳದ ಹಿರಿಯ ಶಿಕ್ಷಕರನ್ನು ಗೌರವಿಸಲಾಗುತ್ತದೆ ಎಂದರು. ಸಮಾರೋಪದಲ್ಲಿ ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌ ರಾಜೇಂದ್ರಕುಮಾರ್‌ ಸಾಧಕರನ್ನು ಸಮ್ಮಾನಿಸುವರು.

ವಿಶ್ರಾಂತ ಪ್ರಾಂಶುಪಾಲ ಪ್ರೊ| ಪದ್ಮನಾಭ ಗೌಡ ಸಮಾರೋಪ ಭಾಷಣ ನೆರವೇರಿಸುವರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಲಿದ್ದು, ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷರ ನುಡಿಗಳನ್ನಾಡಿದರು.

ದ.ಕ. ಸಹಕಾರಿ ಹಾ. ಉ. ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮತ್ತಿತರ ಗಣ್ಯರು ಗೌರವ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಲಾಗುತ್ತಿದೆ ಎಂದರು. ದೇವದಾಸ್‌ ಕೆರೆಮನೆ, ರಾಮದಾಸ್‌ ಪ್ರಭು, ಯೋಗೇಂದ್ರ ನಾಯಕ್‌, ಗಣೇಶ್‌ ಜಾಲ್ಸೂರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ

ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಗಣೇಶ್‌ ಗಂಗೊಳ್ಳಿ ಮತ್ತವರ ತಂಡದಿಂದ ಕನ್ನಡ ಗೀತ ಗಾಯನ, ಎಸ್‌ವಿಟಿ ಮತ್ತು ಭುವನೇಂದ್ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ, ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆ, ಸ.ಹಿ. ಪ್ರಾ. ಶಾಲೆ ಮೈನ್‌, ಜೇಸಿಸ್‌ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಪ್ರೊ| ರಾಮಚಂದ್ರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next