Advertisement
ಅವರು ದೊಡ್ಡಸಾಗ್ಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ , ನಾವೀಗ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಅದರೆ ಬೇರೆ ಮಾತು ನಾನು ರಾಜಕೀಯದ ಭಾಷಣ ಮಾಡಲು ಬಂದಿಲ್ಲ.ಡಾ.ಜಿ ಪರಮೇಶ್ವರರವರ ಆದರ್ಶದಾಯಕ ಆತ್ಮೀಯ ಮಾತು.ಮೃದು ಸ್ವಭಾವದವರು ಎಲ್ಲರನ್ನೂ ಪ್ರೀತಿ ಮಾಡುವಂತವರು ಎಂದು ಬಣ್ಣಿಸಿದರು.
Related Articles
Advertisement
ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ, ಬುಕ್ಕಾಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಏರ್ಪಡಿಸಲಾಗಿದ್ದ 5 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡದ ಉದ್ಘಾಟನೆ ಹಾಗೂ 12 ಕೋಟಿ 50 ಲಕ್ಷ ರೂ. ವೆಚ್ಚದ ತೋವಿನಕೆರೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ನನ್ನ ನಡುವೆ ತಂದೆ-ಮಗನ ಸಂಬಂಧವಿದೆ.ಅವರ ಅಭಿಮಾನಕ್ಕೆ ನಾನು ಅಭಾರಿ ಆಗಿದ್ದೇನೆ. ಆರೋಗ್ಯ ಸೇವೆಯಲ್ಲಿ ಸುಧಾಕರ್ ಜನರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಕೊರೊನಾ ನಿರ್ವಹಣೆಯ ಜವಾಬ್ದಾರಿಯಲ್ಲಿ ಯಶಸ್ಸು ಕಂಡಿದ್ದಾರೆ. ಕೊರಟಗೆರೆಗೆ ಸಾರ್ವಜನಿಕ ಆಸ್ಪತ್ರೆ, ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳನ್ನು ಕೋಟ್ರೇ ನೀವೇ ನನ್ನ ಕ್ಷೇತ್ರದ ನಿಜವಾದ ದೇವರು ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ಸಿ.ವೀರಣ್ಣ, ಡಿಹೆಚ್‌ಓ ಡಾ.ಮಂಜುನಾಥ, ಟಿಹೆಚ್‌ಓ ವಿಜಯಕುಮಾರ್, ತಹಶೀಲ್ದಾರ್ ನಾಹೀದಾ, ಸ್ವಾತಂತ್ರ ಹೋರಾಟಗಾರ ಕೆ.ಸಿ.ನಾರಾಯಣಪ್ಪ, ಗ್ರಾಪಂ ಅಧ್ಯಕ್ಷ ಶಿವರಾಮು, ರಾಮಯ್ಯ, ಮುಖಂಡರಾದ ಅರಕೆರೆಶಂಕರ್, ಅನಿಲ್‌ಕುಮಾರ್, ಸುಜಯ್.ಪಿ.ಮಂಜುನಾಥ, ವಿನಯ್‌ಕುಮಾರ್ ಸೇರಿದಂತೆ ಇತರರು ಇದ್ದರು.
ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ಜೈಕಾರ..ದೊಡ್ಡಸಾಗ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡಾ.ಜಿ.ಪರಮೇಶ್ವರ್ ಮತ್ತು ಜೈ ಹನುಮಾನ್ ಪರವಾಗಿ ಜೈಕಾರ ಕೊಗಿದರೇ ಬಿಜೆಪಿ ಕಾರ್ಯಕರ್ತರು ನರೇಂದ್ರಮೋದಿ ಮತ್ತು ಜೈಶ್ರೀರಾಮ್ ಪರವಾಗಿ ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ಸಮಾರಂಭದ ಉದ್ಘಾಟನೆಗೆ ಆಗಮಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಕಾಲಿಗೆ ನಮಸ್ಕರಿಸಿ ಆರ್ಶಿವಾದ ಪಡೆದರು. 100 ಬೆಡ್‌ಗಳ ಸರಕಾರಿ ಆಸ್ಪತ್ರೆಯ ಆಶ್ವಾಸನೆ.. ಕೊರಟಗೆರೆ ಪಟ್ಟಣದಲ್ಲಿ 100 ಬೆಡ್‌ಗಳ ಸರಕಾರಿ ಆಸ್ಪತ್ರೆ, ಕೋಳಾಲ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಕೆ, ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳ ನೇಮಕ ಸೇರಿದಂತೆ ಕೊರಟಗೆರೆ ಕ್ಷೇತ್ರಕ್ಕೆ ಅವಶ್ಯಕತೆ ಇರುವಂತಹ ಆರೋಗ್ಯ ಸೇವೆಯನ್ನು ತ್ವರಿತವಾಗಿ ನೀಡುತ್ತೇನೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೇಳಿದ ಎಲ್ಲಾ ಬೇಡಿಕೆಯನ್ನು ತ್ವರಿತವಾಗಿ ಪೂರೈಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಭಾರತ ದೇಶದಲ್ಲಿ 700 ಜನರಿಗೆ ಒಬ್ಬ ವೈದ್ಯರು ಇದ್ದಾರೇ. ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ವಿಶೇಷ ಬದಲಾವಣೆ ಅಗತ್ಯ. ಆರೋಗ್ಯ ಕ್ಷೇತ್ರದ ಬಗ್ಗೆ ಡಾ.ಕೆ.ಸುಧಾಕರ್‌ಗೆ ವಿಶೇಷ ಕಾಳಜಿ ಇದೆ. ಕೊರಟಗೆರೆ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಆರೋಗ್ಯ ಸಚಿವರು ವಿಶೇಷ ಅನುಧಾನ ನೀಡಬೇಕಿದೆ. ವೈದ್ಯಕೀಯ ತಂಡ ಮತ್ತು ಸಿಬಂದಿಗಳ ಕೊರತೆ ಪೂರೈಸಿದರೇ ಕೊರಟಗೆರೆ ಕ್ಷೇತ್ರದ ಜನತೆ ನಿಮ್ಮನ್ನು ದೇವರಂತೆ ಪೂಜಿಸುತ್ತಾರೆ- ಡಾ.ಜಿ.ಪರಮೇಶ್ವರ್ ಬುಕ್ಕಾಪಟ್ಟಣ ಬಡಜನರ ಬಹುದಿನದ ಆಸ್ಪತ್ರೆಯ ಬೇಡಿಕೆಯು ಈಗ ನನಸಾಗಿದೆ. ವೈದ್ಯಕೀಯ ಸೇವೆಗೆ ಮತ್ತೊಂದು ಹೆಸರೇ ಡಾ.ಜಿ.ಪರಮೇಶ್ವರ್. ಬಿಜೆಪಿ ಪಕ್ಷದ ಆರೋಗ್ಯ ಸಚಿವರೇ ಪರಮೇಶ್ವರ್‌ರನ್ನ ಮೆಚ್ಚಿ ಹಾಡಿ ಹೋಗಳಿರುವುದೇ ಪ್ರಮುಖ ಸಾಕ್ಷಿ ಅಲ್ಲವೇ. 2023ಕ್ಕೆ ಮತ್ತೆ ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ್‌ಗೆ ಪೂರ್ಣ ಬೆಂಬಲ ಇರಲಿ ಎಂದು ಹಾರೈಸುವೆ.-ಸಿ.ವೀರಣ್ಣ, ಮಾಜಿ ಸಚಿವ. ಕೊರಟಗೆರೆ